ಬಾಲಿವುಡ್ ನಟ ರಣ್‌ದೀಪ್ ಹೂಡಾ ನಟಿಸಿ ನಿರ್ದೇಶಿಸಿರುವ ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾವೂ ಅಧಿಕೃತವಾಗಿ 2025ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಬಾಲಿವುಡ್ ನಟ ರಣ್‌ದೀಪ್ ಹೂಡಾ ನಟಿಸಿ ನಿರ್ದೇಶಿಸಿರುವ ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾವೂ ಅಧಿಕೃತವಾಗಿ 2025ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಜೀವನಚರಿತ್ರೆಯಾಧಾರಿತ ಸಿನಿಮಾವೂ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನಗಾಥೆಯನ್ನು ಹೊಂದಿದ್ದು, ಈ ಸಿನಿಮಾದಲ್ಲಿ ರಣ್‌ದೀಪ್ ಹೂಡಾ ಜೊತೆ ಬಾಲಿವುಡ್ ನಟಿ ಅಂಕಿತಾ ಲೋಖಂಡೆ ನಟಿಸಿದ್ದಾರೆ.
ಸಂದೀಪ್ ಸಿಂಗ್ ಅವರು ಈ ಸಿನಿಮಾದ ನಿರ್ಮಾಣ ಮಾಡಿದ್ದು, ಈ ಸಿನಿಮಾವೀಗ ಆಸ್ಕರ್‌ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಈ ಖುಷಿಯ ವಿಚಾರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಸಂತಸದ ಜೊತೆ ಹೆಮ್ಮೆ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. 'ಗೌರವ ಹಾಗೂ ವಿನಮ್ರತೆ,' ನಮ್ಮ ಸಿನಿಮಾ ಸ್ವಾತಂತ್ರವೀರ ಸಾವರ್ಕರ್ ಅಧಿಕೃತವಾಗಿ ಆಸ್ಕರ್‌ಗೆ ಆಯ್ಕೆಯಾಗಿದೆ. ಈ ಮಹತ್ವಪೂರ್ಣವಾದ ಗುರುತಿಸುವಿಕೆಗೆ ಫಿಲಂ ಫೆಡರೇಷನ್ ಆಫ್ ಇಂಡಿಯಾಗೆ ಧನ್ಯವಾದಗಳು , ಈ ಪ್ರಯಾಣವನ್ನು ನಂಬಲಾಗುತ್ತಿಲ್ಲ, ಈ ಸಂದರ್ಭದಲ್ಲಿ ನಮ್ಮ ಈ ಹಾದಿಯಲಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು.
undefined
ಬಾಲಿವುಡ್ ಸ್ಟಾರ್ ನಟ ರಣದೀಪ್ ಹೂಡ ಜೊತೆ ಶೈನ್ ಶೆಟ್ಟಿ… ಹಿಂದಿ ಸಿನಿಮಾದಲ್ಲಿ ನಟಿಸ್ತಿದ್ದಾರ ಶೈನ್?
ಇದಕ್ಕೂ ಮೊದಲು ಈ ಸಿನಿಮಾದಲ್ಲಿ ಸ್ವಾತಂತ್ರ ವೀರ್ ಸಾವರ್ಕರ್ ಸಿನಿಮಾದಲ್ಲಿ ಸಾವರ್ಕರ್ ಪಾತ್ರವನ್ನು ಮಾಡಿದ ನಟ ರಣ್‌ದೀಪ್ ಹೂಡ ಅವರು ಆ ಪಾತ್ರದೊಂದಿಗೆ ತಾವು ಹೊಂದಿದ್ದ ಆಳವಾದ ಸಂಪರ್ಕದ ಬಗ್ಗೆ ಹಂಚಿಕೊಂಡಿದ್ದರು. ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ರಣ್‌ದೀಪ್ ಹೂಡ, ಸಾವರ್ಕರ್ ಜೀ ಅವರ ಸಂಪೂರ್ಣ ಕತೆಯ ಬಗ್ಗೆ ಅಧ್ಯಯನ ಮಾಡಿದ ನಂತರ ಸ್ಕ್ರೀನ್ ಮೇಲೆ ಅವರ ಜೀವನವನ್ನು ತರುವುದಕ್ಕಾಗಿ ಅವರಂತೆ ಬದುಕಲು ಆರಂಭಿಸಿದ್ದೆ, ನಾನು ಅದರಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೆ. ಸಿನಿಮಾ ನೋಡಿದ ವೀರ್ ಸಾವರ್ಕರ್ ಅವರನ್ನು ಬಲ್ಲವರು, ಅವರ ಕುಟುಂಬದವರು ಮತ್ತು ಅವರ ಹತ್ತಿರದವರಾದ ಮಂಗೇಶ್ಕರ್ ಕುಟುಂಬದವರು, ನಾನು ಅವರ ಪಾತ್ರವನ್ನು ತುಂಬಾ ಚೆನ್ನಾಗಿ, ಸತ್ಯವಾಗಿ ಮತ್ತು ಶಕ್ತಿಯುತವಾಗಿ ನಟಿಸಿದ್ದೇನೆ ಎಂದು ನನ್ನ ಬೆನ್ನು ತಟ್ಟಿದ್ದರು. ಅಂತಹ ಬೆನ್ನುತಟ್ಟುವ ಕಾರ್ಯ ತುಂಬಾ ವಿರಳವಾಗಿ ಆಗುವುದರಿಂದ ನನಗೆ ಅದು ಬಹಳ ಶ್ರೇಷ್ಠ ಎನಿಸಿತ್ತು ಎಂದು ರಣ್‌ದೀಪ್ ಹೂಡಾ ಹೇಳಿದ್ದರು.
ನೀವು ಜೀವನಚರಿತ್ರೆಯ ಸಿನಿಮಾ ಮಾಡಿದಾಗ, ಆ ವ್ಯಕ್ತಿಯ ಹತ್ತಿರದವರು ನೀವು ಇದನ್ನು ಸೇರಿಸಬೇಡಿ ಅದನ್ನು ಸೇರಿಸಿ ಎಂದು ಹೇಳುತ್ತಾರೆ. ಆದರೆ ನಾನು ಅವರ 53 ವರ್ಷದ ಸಂಪೂರ್ಣ ಜೀವನವನ್ನು 3 ಗಂಟೆಯಲ್ಲಿ ಹಿಡಿದಿಟ್ಟಿದ್ದೇನೆ. ಹೀಗಾಗಿ ಅವರು ಅದನ್ನು ಮೆಚ್ಚಿದಾಗ ನನಗೆ ಪ್ರಶಸ್ತಿ ಸಿಕ್ಕಂತೆ ಭಾಸವಾಗುತ್ತದೆ ಎಂದು ಹೇಳಿದ್ದಾರೆ. ಸ್ವಾತಂತ್ರ್ಯವೀರ್ ಸಾವರ್ಕರ್ ಸಿನಿಮಾವೂ ರಣ್‌ದೀಪ್ ಹೂಡಾ ಅವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದ್ದು, ಇದರಲ್ಲಿ ನಟಿ ಅಂಕಿತಾ ಲೊಖಂಡೆ ಸಾವರ್ಕರ್ ಪತ್ನಿ ಯಮುನಾ ಭಾಯ್ ಪಾತ್ರವನ್ನು ಮಾಡಿದ್ದಾರೆ.
ವೀರ್ ಸಾವರ್ಕರ್ ಚಿತ್ರಕ್ಕೆ ಸಂಭಾವನೆ ಬೇಡವೆಂದ ಬಿಗ್ಬಾಸ್ ಖ್ಯಾತಿಯ ಅಂಕಿತಾ ಲೋಖಂಡೆ: ಮಾಹಿತಿ ರಿವೀಲ್
ಕೆಲ ವಾರಗಳ ಹಿಂದಷ್ಟೇ ರಣ್‌ದೀಪ್ ಹೂಡಾ ಅವರಿಗೆ ಮುಂಬೈನಲ್ಲಿ ಪ್ರತಿಷ್ಠಿತ ಸ್ವಾತಂತ್ರ್ಯವೀರ ಸಾವರ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯ್ತು. ಸ್ವಾತಂತ್ರ್ಯ ಹೋರಾಟಗಾರ ಜೀವನಚರಿತ್ರೆಯನ್ನು ಅದ್ಭುತವಾಗಿ ತೆರೆಗೆ ತಂದಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ. ಸ್ವಾತಂತ್ರ್ಯ ಹೋರಾಟದ ವೇಳೆ ಭಾರತದ ಯುವ ಸಮೂಹದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದ ವಿವಾದಿತ ಹಾಗೂ ಪ್ರಭಾವಶಾಲಿ ನಾಯಕ ವೀರ್ ಸಾವರ್ಕರ್ ಆಗಿದ್ದಾರೆ. ಮಾರ್ಚ್ 22 ರಂದು ಹಿಂದಿ ಹಾಗೂ ಮಾರಾಠಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.