5 ವರ್ಷದೊಳಗೇ ಚಿಕಿತ್ಸೆ ಕೊಟ್ರೆ ಜಗತ್ತಲ್ಲಿ ಮೂಕರೇ ಇರಲ್ಲ: ಪುನೀತ್​ ರಾಜ್​ರನ್ನು​ ನೆನೆದ ಡಾ.ದೀಪಕ್​ ಹೇಳಿದ್ದೇನು?

By Suchethana D  |  First Published Sep 24, 2024, 2:46 PM IST

ಮಕ್ಕಳು ಐದು ವರ್ಷ ವಯಸ್ಸಿಗೆ ಬರುವ ಮೊದಲೇ ಅವರು ಕಿವುಡ-ಮೂಕರು ಎನ್ನುವುದನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ಕೊಟ್ಟರೆ 100% ಗುಣಮುಖರಾಗುತ್ತಾರೆ ಎಂದಿದ್ದಾರೆ ಖ್ಯಾತ ಸರ್ಜನ್​ ಡಾ.ದೀಪಕ್​. ಅವರ ಮಾತು ಇಲ್ಲಿದೆ...
 


ವಿಶ್ವ ಆರೋಗ್ಯ ಸಂಸ್ಥೆ (WHO) ಅಂದಾಜಿನ ಪ್ರಕಾರ ಭಾರತದಲ್ಲಿ 63 ದಶಲಕ್ಷದಷ್ಟು ಜನರು ಕಿವುಡು ಮತ್ತು ಮೂಲಕರಾಗಿದ್ದಾರೆ. ಜನಸಂಖ್ಯೆಯ 6.3% ಆಗಿದೆ. ಹುಟ್ಟು ಕಿವುಡರಾಗಿದ್ದರೆ, ಅವರಿಗೆ ಮಾತನಾಡಲೂ ಬರುವುದಿಲ್ಲ. ಮೂಕರಾಗಿದ್ದರೆ ಅವರಿಗೆ ಕಿವಿಯೂ ಕೇಳುವುದಿಲ್ಲ.  ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ (NSSO) ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ಒಂದು ಲಕ್ಷ  ಜನರಿಗೆ 291 ಜನರು ತೀವ್ರ ಮತ್ತು ಆಳವಾದ ಶ್ರವಣ ದೋಷವನ್ನು ಹೊಂದಿದ್ದಾರೆ.  2011 ರ ಜನಗಣತಿಯು 1.3 ಮಿಲಿಯನ್ ಜನರು ಶ್ರವಣ ದೋಷವನ್ನು ಹೊಂದಿದ್ದಾರೆ ಎಂದು ವರದಿ ಮಾಡಿದೆ, ಆದರೆ 18 ಮಿಲಿಯನ್ ಜನರು ಕಿವುಡರು ಎಂದು ರಾಷ್ಟ್ರೀಯ ಅಸೋಸಿಯೇಷನ್ ​​​​ಅಂದಾಜು ಮಾಡಿದೆ. ಕಿವುಡರು ಮತ್ತು ಮೂಕರು  ಭಾರತದಲ್ಲಿ ಶಿಕ್ಷಣವನ್ನು ಪ್ರವೇಶಿಸಲು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮಾತ್ರವಲ್ಲದೇ ಕ್ರಿಮಿನಲ್​ ಲೋಕದಲ್ಲಿ ಇವರನ್ನು ಬಳಕೆ  ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂಬ ಆತಂಕಕಾರಿ ವರದಿಯೂ ಬಂದಿದೆ.

ಇದೊಂದು ಶಾಪ ಎಂದುಕೊಳ್ಳುವವರೇ ಹೆಚ್ಚು. ಇಂಥ ಮಕ್ಕಳನ್ನು ಸಾಕಲು, ಅವರನ್ನು ದೊಡ್ಡವರನ್ನಾಗಿ ಮಾಡಲು ಅಪ್ಪ-ಅಮ್ಮ ಪಡುವ ಕಷ್ಟ ಎಂಥದ್ದು ಎನ್ನುವುದು ಇದನ್ನು ಅನುಭವಿಸಿದವರಿಗೇ ಗೊತ್ತು. ಕಿವಿ ಕೇಳಿಸುವಂತೆ ಮಾಡುವ ಸಾಧನಗಳು ಈಗ ಬಂದಿವೆಯಾದರೂ, ಇಂಥ ಸಾಧನಗಳನ್ನು ಅಳವಡಿಸಿಕೊಂಡರೆ ಅಂಥವರಿಗೆ  ಮಾತು ಬರುವುದಿಲ್ಲ. ಸ್ವಲ್ಪ ಮಟ್ಟಿಗೆ ಕೇಳಿಸಬಹುದು ಅಷ್ಟೇ. ಟ್ರಸ್ಟ್​ವೆಲ್​ ಆಸ್ಪತ್ರೆಯ ಕಿವಿ, ಮೂಗು ಮತ್ತು ನಾಲಿಗೆ ತಜ್ಞ (ENT specialist) ಆಗಿರೋ ಡಾ.ದೀಪಕ್​ ಅವರು ಇದೀಗ ಕುತೂಹಲದ ಮಾಹಿತಿಯೊಂದನ್ನು ಹೇಳಿದ್ದಾರೆ. 

Latest Videos

undefined

ಬೆನ್ನು ನೋವು, ಸುಸ್ತು, ಮೂಳೆ ಸವೆತ... ಅಬ್ಬಾ... ವಿಟಮಿನ್​ 'ಡಿ' ಕೊರತೆಯಾದ್ರೆ ಏನೇನಾಗತ್ತೆ? ಪರಿಹಾರವೇನು?

ನಿರೂಪಕಿ ರ್ಯಾಪಿಡ್​ ರಶ್ಮಿ ಅವರ ಷೋಗೆ ಬಂದಿರುವ ಡಾ.ದೀಪಕ್​ ಅವರು ಕಿವುಡರು, ಮೂಕರು ಸೇರಿದಂತೆ ಕೆಲವು ಆರೋಗ್ಯಕರ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇವರ ಪ್ರಕಾರ, ಐದು ವರ್ಷದ ಒಳಗೆ ಅದರಲ್ಲಿಯೂ ಮೂರು ವರ್ಷದ ಒಳಗೆ ಅಂದರೆ ಹುಟ್ಟಿದ ಮಕ್ಕಳ ಮೂರು ವರ್ಷ ಆಗುವುದರೊಳಗೆ ಸೂಕ್ತ ಚಿಕಿತ್ಸೆ ನೀಡಿದರೆ 100% ಕಿವುಡು ಮತ್ತು ಮೂಕತನದ ಸಮಸ್ಯೆಯನ್ನು ಪರಿಹರಿಸಬಹುದು ಎನ್ನುವುದು! ಹೌದು. ಅವರು ಹೇಳುವ ಪ್ರಕಾರ, ಮಕ್ಕಳು ಕಿವುಡರು ಅಥವಾ ಮೂಕರು ಎನ್ನುವ ಬಗ್ಗೆ ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿ ಗುರುತಿಸುವುದೇ ಇಲ್ಲ. ಐದು ವರ್ಷಗಳವರೆಗೂ ಇದು ಪತ್ತೆಯಾಗುವುದೇ ಇಲ್ಲ. ಅದಾದ ಬಳಿಕ ಅವರು ಆತಂಕಕ್ಕೆ ಒಳಗಾಗುತ್ತಾರೆ. ಆಗ ಸಮಸ್ಯೆಯನ್ನು ಪರಿಹಾರ ಮಾಡುವುದು ಕಷ್ಟವಾಗುತ್ತದೆ. ಆದ್ದರಿಂದ ಐದು ವರ್ಷದ ಮಕ್ಕಳಿರುವಾಗಲೇ ಅದರಲ್ಲಿಯೂ ಮೂರು ವರ್ಷ ತುಂಬುವುದರೊಳಗೇ ಚಿಕಿತ್ಸೆ ಮಾಡಿಸಿದರೆ ಈ ಜಗತ್ತಿನಲ್ಲಿ ಯಾರೂ ಕಿವುಡರು-ಮೂಕರು ಇರುವುದಿಲ್ಲ ಎನ್ನುವುದು ಅವರ ಮಾತು. 

ಇದೇ ವೇಳೆ ಪುನೀತ್​ ರಾಜ್​ಕುಮಾರ್​ ಅವರನ್ನೂ ಡಾ.ದೀಪಕ್​ ನೆನಪಿಸಿಕೊಂಡಿದ್ದಾರೆ. ಕನ್ನಡದ ಕೋಟ್ಯಧಿಪತಿ ಮಾಡುತ್ತಿದ್ದ ಸಮಯದಲ್ಲಿ ಪುನೀತ್​ ಅವರು ಮಗುವೊಂದರ ಚಿಕಿತ್ಸೆಗೆ ಐದು ಲಕ್ಷ ರೂಪಾಯಿ ನೀಡಿದ್ದರು. ಆ ಮಗು ಈಗ ಚೆನ್ನಾಗಿ ಮಾತನಾಡುತ್ತಿದೆ, ಕೇಳಿಸಿಕೊಳ್ಳುತ್ತಿದೆ. ಆದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಇದನ್ನು ಪತ್ತೆ ಹಚ್ಚಿದರೆ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ ಎಂದಿದ್ದಾರೆ. ಒಂದು ವೇಳೆ ವಯಸ್ಸು ಮೀರಿದರೆ, ಶ್ರವಣ ದೋಷವನ್ನು ಪರಿಹಾರ ಮಾಡುವ ಕೆಲವು ಸಾಧನಗಳು ಬಂದಿವೆ. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಚಿಕಿತ್ಸೆ ಕೊಟ್ಟರೆ ಸಂಪೂರ್ಣ ಪರಿಹಾರ ಸಾಧ್ಯ ಎಂದಿದ್ದಾರೆ. 
 

ಆ್ಯಂಕರ್​ ಅಪರ್ಣಾ ಸಾವು, ಶ್ವಾಸಕೋಶದ ಕ್ಯಾನ್ಸರ್ ಭೀತಿ, ಏನು ಹೇಳುತ್ತೆ ಸ್ಟಡೀಸ್?

click me!