ರಾತ್ರಿ 2.30ಕ್ಕೆ ಗೆಳಯನಿಗೆ ತುರ್ತು ಮೆಸೇಜ್, 45 ನಿಮಿಷ ಸಿಪಿಆರ್, ನಾನಾ ಪಾಟೇಕರ್ ಕೊನೆಯ ಕ್ಷಣ

Published : Oct 08, 2026, 12:35 PM IST
Nana patekar

ಸಾರಾಂಶ

ರಾತ್ರಿ 2.30ಕ್ಕೆ ತೀವ್ರ ಅಸ್ವಸ್ಥತೆ ಕುರಿತು ನಾನಾ ಪಾಟೇಕರ್ ತನ್ನ ಗೆಳೆಯನಿಗೆ ಮೆಸೇಜ್ ಮಾಡಿದ್ದರು. ಆದರೆ ಈ ಮೆಸೇಜ್ ಗೆಳೆಯನ ನೋಡಿರಲಿಲ್ಲ. 45 ನಿಮಿಷ ಸಿಪಿಆರ್ ಮಾಡಿ ಪಾಟೇಕರ್ ಜೀವ ಉಳಿಸುವ ಪ್ರಯತ್ನ ನಡೆದಿತ್ತು.

ಗೋವಾ (ಅ.08) ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ನಿಧನ ಭಾರತೀಯರಿಗೆ ಆಘಾತ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ನಾನಾ ಪಾಟೇಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದೀಗ ನಾನಾ ಪಾಟೇಕರ್ ಅಂತಿಮ ಕ್ಷಣಗಳ ಕುರಿತು ಮಾಹಿತಿ ಬಹಿರಂಗವಾಗಿದೆ. ಬೆಳಗಿನ ಜಾವ 2.30ಕ್ಕೆ ನಾನಾ ಪಾಟೇಕರ್ ತಮ್ಮ ಸ್ನೇಹಿತರಿಗೆ ಎಮರ್ಜೆನ್ಸಿ ಕುರಿತು ಸಂದೇಶ ಕಳುಹಿಸಿದ್ದರು. ಆದರೆ ಈ ಹೊತ್ತಿನಲ್ಲಿ ಸಂದೇಶವನ್ನು ಸ್ನೇಹಿತರು ನೋಡಿರಲಿಲ್ಲ. ಸ್ನೇಹಿತರು ಸಂದೇಶ ನೋಡಿ ಪಾಟೇಕರ್ ಬಳಿ ಬರುವಾಗ ನಟ ಸಂಪೂರ್ಣ ಅಸ್ವಸ್ಥಗೊಂಡಿದ್ದರು. ಹೀಗಾಗಿ 45 ನಿಮಿಷಗಳ ಕಾಲ ಸಿಪಿಆರ್ ಮಾಡಿ ಜೀವ ಉಳಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಸಾಧ್ಯವಾಗಲಿಲ್ಲ ಎಂದು ವೈದ್ಯ ಶೇಕರ್ ಸಾಲ್ಕಾರ್ ಹೇಳಿದ್ದಾರೆ.

ನಾನಾ ಪಾಟೇಕರ್ ಕೊನೆಯ ಕ್ಷಣ

ನಾನಾ ಪಾಟೇಕರ್ ರಾತ್ರಿ 2.30ರ ಸುಮಾರಿಗೆ ಅಸ್ವಸ್ಥರಾಗಿದ್ದಾರೆ. ಎದೆ ನೋವು, ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿದೆ. ಹೀಗಾಗಿ ನಿದ್ದೆಯಿಂದ ಎದ್ದ ನಾನಾ ಪಾಟೇಕರ್ ತಮ್ಮ ಸ್ನೇಹತರಿಗೆ ಸಂದೇಶ ರವಾನಿಸಿದ್ದಾರೆ. ಎದನೋವು ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥತೆ ಕಾಡುತ್ತಿದೆ ಎಂದು ಸಂದೇಶ ರವಾನಿಸಿದ್ದಾರೆ. ಆದರೆ ರಾತ್ರಿ 2.30ರ ವೇಳೆಯಲ್ಲಿ ಪಾಟೇಕರ್ ಕಳುಹಿಸಿದ ಸಂದೇಶವನ್ನು ಸ್ನೇಹಿತರು ನೋಡಿರಲಿಲ್ಲ. ಎದೆ ಎಡಭಾಗದಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಸಂದೇಶ ರವಾನಿಸಿದ್ದರು.

ನಾಲ್ಕು ಗಂಟೆಗೆ ನಾನಾ ಪಾಟೇಕರ್ ಸಂಪರ್ಕಿಸುವ ಯತ್ನ

ನಾನಾ ಪಾಟೇಕರ್ ಸಂದೇಶ ಕಳುಹಿಸಿದ ಬಳಿಕ ಸಂಪೂರ್ಣ ಅಸ್ವಸ್ಥಗೊಂಡಿದ್ದಾರೆ. ಇತ್ತ ಸ್ನೇಹಿತರು ಪಾಟೇಕರ್ ಸಂದೇಶವನ್ನು ಬೆಳಗ್ಗೆ 4 ಗಂಟೆಗೆ ನೋಡಿದ್ದಾರೆ. ತಕ್ಷಣವೇ ನಾನಾ ಪಾಟೇಕರ್‌ಗೆ ಕರೆ ಮಾಡಿದ್ದಾರೆ. ಈ ವೇಳೆ ನಾನಾ ಪಾಟೇಕರ್ ಉಸಿರಾಟ, ಎದೆನೋವಿನಿಂದ ಅಸ್ವಸ್ಥರಾಗಿದ್ದರು. ಸಂಪೂರ್ಣ ಬೆವತು ಹೋಗಿದ್ದರು ಎಂದು ವೈದ್ಯ ಶೇಖರ್ ಹೇಳಿದ್ದಾರೆ.

ಕಾರ್ಯಪ್ರವೃತ್ತರಾದ ಸ್ನೇಹಿತರು ಆ್ಯುಂಬುಲೆನ್ಸ್‌ಗೆ ಮಾಹಿತಿ ನೀಡಿದ್ದಾರೆ. ಪಾಟೇಕರ್ ಮನೆಯತ್ತ ಧಾವಿಸಿದ್ದಾರೆ. ಸಂಪೂರ್ಣ ಅಸ್ವಸ್ಥಗೊಂಡಿದ್ದ ಪಾಟೇಕರ್ ಅವರಿಗೆ ಮನೆಯಲ್ಲಿ ಸಿಪಿಆರ್ ನೀಡವಾಗಿದೆ. ಅಷ್ಟರಲ್ಲಿ ಪಾಟೇಕರ್ ಅವರಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆ ಸಾಗಿಸುವ ವೇಳೆಯೂ ಸಿಪಿಆರ್ ನೀಡಲಾಗಿದೆ. ಬರೋಬ್ಬರಿ 45 ನಿಮಿಷಗಳ ಕಾಲ ಸಿಪಿಆರ್ ನೀಡಲಾಗಿದೆ. ನಾನಾ ಪಾಟೇಕರ್ ಬದುಕಿಸುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಡಾ. ಶೇಕರ್ ಹೇಳಿದ್ದಾರೆ.

5.20ಕ್ಕೆ ನಾನಾ ಪಾಟೇಕರ್ ನಿಧನ ಘೋಷಣೆ

45 ನಿಮಿಷಗಳ ಸಿಪಿಆರ್ ನೀಡಿದರೂ ನಾನಾ ಪಾಟೇಕರ್ ಬದುಕುಳಿಯಲಿಲ್ಲ. 5.20ರ ವೇಳೆಗೆ ವೈದ್ಯರ ತಂಡ ನಾನಾ ಪಾಟೇಕರ್ ನಿಧರಾಗಿದ್ದಾರೆ ಎಂದು ಘೋಷಿಸಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಗೋವಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ನಾನಾ ಪಾಟೇಕರ್ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗಾಗಿ ಗೋವಾ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿತ್ತು.

ಗೋವಾ ಮನೆಯಲ್ಲಿ ಏಕಾಂಗಿಯಾಗಿದ್ದ ಪಾಟೇಕರ್

ನಾನಾ ಪಾಟೇಕರ್ ತಮ್ಮ ಗೋವಾ ಮನೆಯಲ್ಲಿ ಏಕಾಂಗಿಯಾಗಿದ್ದರು. ಅವರ ಕುಟುಂಬಸ್ಥರು ಜೊತೆಯಲ್ಲಿ ಇರಲಿಲ್ಲ. ಸೂಕ್ತ ಸಮಯದಲ್ಲಿ ನಾನಾ ಪಾಟೇಕರ್‌ಗೆ ನೆರವು ಸಿಗಲಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

1.5 ಕೋಟಿ ಕಾರಿನ ಆರ್ಡರ್​ ಕ್ಯಾನ್ಸಲ್​ ಮಾಡಿ ರೈತರಿಗೆ ಹಣ ಕೊಟ್ಟಿದ್ದ ನಾನಾ ಪಾಟೇಕರ್​: ನಟನ ಬದುಕಿನ ರಹಸ್ಯ ಇಲ್ಲಿದೆ
Nana Patekar: ರೈತನಾಯಕ‌ ಪ್ರೊ.ನಂಜುಂಡಸ್ವಾಮಿ ಬಯೋಪಿಕ್ನಲ್ಲಿ‌ನಟಿಸಬೇಕಿತ್ತು ನಾನಾ ಪಾಟೇಕರ್, ಅವರ ಆಯ್ಕೆಯ ಹಿಂದಿತ್ತು ಈ ಕಾರಣ!