Nana Patekar: ರೈತನಾಯಕ‌ ಪ್ರೊ.ನಂಜುಂಡಸ್ವಾಮಿ ಬಯೋಪಿಕ್ನಲ್ಲಿ‌ನಟಿಸಬೇಕಿತ್ತು ನಾನಾ ಪಾಟೇಕರ್, ಅವರ ಆಯ್ಕೆಯ ಹಿಂದಿತ್ತು ಈ ಕಾರಣ!

Published : Oct 08, 2026, 11:59 AM IST
Nana Patekar With MDN

ಸಾರಾಂಶ

ನಟ ನಾನಾ ಪಾಟೇಕರ್ ಅವರು ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಬಯೋಫಿಕ್‌ನಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಆದರೆ ಆ ಸಿನಿಮಾ ಸೆಟ್ಟೇರಲಿಲ್ಲ. ಆಗಿದ್ದೇನು? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಕೆಲವು ಹೆಸರುಗಳು ಬರಿ ಸಿನಿಮಾದ ಪೋಸ್ಟರ್‌ಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅವರ ನಡೆ, ನುಡಿ ಮತ್ತು ವ್ಯಕ್ತಿತ್ವ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿರುತ್ತವೆ. ಅಂತಹ ಅಪರೂಪದ ರಿಯಲ್ ಹಾಗೂ ರೀಲ್ ಹೀರೋ, ನಟ ನಾನಾ ಪಾಟೇಕರ್. ಭಾರತೀಯ ಚಿತ್ರರಂಗದ ಈ ಅಗ್ರಗಣ್ಯ ನಟ ಇಂದು ವಿಧಿವದ್ದಾರೆ, ಆದರೆ ಅವರು ಉಳಿಸಿ ಹೋದ ನೆನಪುಗಳು ಮತ್ತು ರೈತಕುಲದ ಮೇಲಿದ್ದ ಅವರ ಅಪಾರ ಪ್ರೀತಿ ಎಂದೆಂದಿಗೂ ಜೀವಂತ. ಆದರೆ ಎಂಡಿಎನ್‌ ಬಯೋಫಿಕ್‌ ಕಥೆ ಏನಾಯ್ತು ಎನ್ನುವುದನ್ನು ನೋಡೋಣ ಬನ್ನಿ.

ಕೇಸರಿ ನೆನಪಿಗೆ ನಾನಾ ಪಾಟೇಕರ್!

ಕರ್ನಾಟಕದ ರೈತ ನಾಯಕ, ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ ಅವರ ಹೆಸರು ಕೇಳಿದರೆ ಇಂದಿಗೂ ಪ್ರತಿಯೊಬ್ಬ ಕನ್ನಡಿಗನಿಗೂ ಒಂದು ರೀತಿಯ ರೋಮಾಂಚನ. ಅವರ ವಿಚಾರಧಾರೆಗಳು, ಹಸಿರು ಶಾಲಿನ ಹಕ್ಕುಗಳು ಮತ್ತು ಗಂಭೀರ ವ್ಯಕ್ತಿತ್ವಕ್ಕೆ ದೇಶಾದ್ಯಂತ ಅಪಾರ ಅಭಿಮಾನಿಗಳಿದ್ದರು. ಕೆಲವು ವರ್ಷಗಳ ಹಿಂದೆ ಹಿರಿಯ ಚಲನಚಿತ್ರ ನಿರ್ದೇಶಕರಾದ ಶ್ರೀ ಕೇಸರಿ ಹರವೂ ರವರು ಪ್ರೊಫೆಸರ್ ಅವರ ಜೀವನಾಧಾರಿತ ಚಲನಚಿತ್ರ ಮಾಡಲು ಹೊರಟಾಗ, ಅವರ ಕಣ್ಣಿಗೆ ತಕ್ಷಣವೇ ಹೊಳೆದದ್ದು ನಾನಾ ಪಾಟೇಕರ್ ಅವರ ಮುಖ.

ಪಾತ್ರ ಉತ್ಸಾಹದಿಂದ ಹೊಗಳಿದ್ದ ನಾನಾ!

ಪ್ರೊಫೆಸರ್ ನಂಜುಂಡಸ್ವಾಮಿಯವರಂತೆಯೇ ತೀಕ್ಷ್ಣ ಕಣ್ಣುಗಳು, ದಿಟ್ಟ ಮಾತು, ಹಾಗೂ ವಿಚಾರಗಳಲ್ಲಿನ ಸ್ಪಷ್ಟತೆ ನಾನಾ ಅವರಲ್ಲೂ ಇತ್ತು. ಕೇಸರಿ ಹರವೂ ಅವರು ನಾನಾ ಪಾಟೇಕರ್ ಅವರನ್ನು ಸಂಪರ್ಕಿಸಿ, ಪ್ರೊಫೆಸರ್ ಅವರ ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಲಭ್ಯವಿದ್ದ ಭಾಷಣ ಹಾಗೂ ಸಂದರ್ಶನಗಳ ವೀಡಿಯೋಗಳನ್ನು ತೋರಿಸಿದಾಗ, ನಾನಾ ಪಾಟೇಕರ್ ಬೆರಗಾಗಿಹೋಗಿದ್ದರು. ಪ್ರೊಫೆಸರ್ ಅವರ ಬಂಡಾಯದ ಶಕ್ತಿ, ರೈತಪರ ಕಾಳಜಿ ಮತ್ತು ವೈಚಾರಿಕತೆಗೆ ಮಾರುಹೋದ ನಾನಾ, "ಈ ಪಾತ್ರವನ್ನು ನಾನೇ ಮಾಡುತ್ತೇನೆ" ಎಂದು ಅತ್ಯಂತ ಉತ್ಸಾಹದಿಂದ ಒಪ್ಪಿಕೊಂಡಿದ್ದರು.

ಸೆಟ್ಟೇರದೆ ಹೋದ ಚಿತ್ರ!

ಕಾರಣಾಂತರಗಳಿಂದ ಆ ಸಿನಿಮಾ ಯೋಜನೆ ಬೆಳ್ಳಿಪರದೆಯ ಮೇಲೆ ಬರಲಾಗಲಿಲ್ಲ ನಿಜ. ಆದರೆ, ನಾನಾ ಪಾಟೇಕರ್ ಅವರಲ್ಲಿದ್ದ ರೈತಪರ ಕಾಳಜಿ ಬರಿ ನಟನೆಯಾಗಿ ಉಳಿಯಲಿಲ್ಲ. ಮಹಾರಾಷ್ಟ್ರದ ಬರಪೀಡಿತ ಪ್ರದೇಶಗಳ ರೈತರ ಕಣ್ಣೀರು ಒರೆಸಲು ಅವರು 'ನಾಮ್ ಫೌಂಡೇಶನ್' ಸ್ಥಾಪಿಸಿ, ಸಾವಿರಾರು ರೈತ ಕುಟುಂಬಗಳಿಗೆ ಜೀವದಾತರಾಗಿದ್ದರು. ಪರದೆಯ ಮೇಲೆ 'ಕ್ರಾಂತಿವೀರ'ನಾಗಿ ಘರ್ಜಿಸುತ್ತಿದ್ದ ನಟ, ಪರದೆಯ ಆಚೆ ನಿಜವಾದ ಮಣ್ಣಿನ ಮಗನಾಗಿ ಸರಳ ಜೀವನ ನಡೆಸಿದರು.

ದೊಡ್ಡ ಇನ್‌ಸ್ಪಿರೇಷನ್ ಪಾಟೇಕರ್!

ಇಂದಿನ ಯುವಜನತೆಗೆ ಸಿನಿಮಾ ಅಂದರೆ ಬರಿ ಬಣ್ಣದ ಪ್ರಪಂಚ, ಗ್ಲಾಮರ್ ಮತ್ತು ದೊಡ್ಡ ಸೆಟ್‌ಗಳು ಇರಬಹುದು. ಆದರೆ ನಾನಾ ಪಾಟೇಕರ್ ಅವರ ನಟನೆ ಅದೆಲ್ಲವನ್ನೂ ಮೀರಿದ್ದು. ಅವರ ನಟನೆಯಲ್ಲಿದ್ದ ರಿಯಲ್ ಎಮೋಷನ್, ಸಂಭಾಷಣೆ ಹೇಳುವ ಶೈಲಿ ಮತ್ತು ಕಣ್ಣುಗಳಲ್ಲೇ ಭಾವನೆಗಳನ್ನು ದಾಟಿಸುವ ಕಲೆ ಇಂದಿನ ಯುವ ನಟರಿಗೂ ಒಂದು ದೊಡ್ಡ ಇನ್‌ಸ್ಪಿರೇಷನ್. ಅವರು ಕೇವಲ ಡೈಲಾಗ್ ಹೊಡೆಯುತ್ತಿರಲಿಲ್ಲ, ಪಾತ್ರವಾಗಿ ಜೀವಿಸುತ್ತಿದ್ದರು.

ಇಬ್ಬರ ದೃಷ್ಟಿ ಒಂದೇ ಆಗಿತ್ತು!

ಒಂದೆಡೆ ಪ್ರೊಫೆಸರ್ ನಂಜುಂಡಸ್ವಾಮಿಯವರಂತಹ ವಿಚಾರವಾದಿಯ ತೇಜಸ್ಸು, ಇನ್ನೊಂದೆಡೆ ನಾನಾ ಪಾಟೇಕರ್ ಅವರಂತಹ ದಿಗ್ಗಜ ನಟನ ಸಹಜ ಅಭಿನಯ. ಈ ಎರಡೂ ಒಂದೇ ಬಿಂದುವಿನಲ್ಲಿ ಭೇಟಿಯಾಗಿದ್ದ ಆ ಕ್ಷಣವೇ ಒಂದು ಅದ್ಭುತ. ಪ್ರೊಫೆಸರ್ ಪಾತ್ರದಲ್ಲಿ ನಾನಾ ಅವರನ್ನು ನೋಡುವ ಭಾಗ್ಯ ನಮಗೆ ಸಿಗಲಿಲ್ಲವಾದರೂ, ಅವರಿಬ್ಬರ ವಿಚಾರಧಾರೆಯಲ್ಲಿದ್ದ 'ರೈತ ಪ್ರೀತಿ' ಒಂದೇ ಆಗಿತ್ತು. ಇಂದು ನಾನಾ ಪಾಟೇಕರ್ ನಮ್ಮೊಂದಿಗಿಲ್ಲ. ಆದರೆ ಅವರ ನಟನೆ, ಅವರು ರೈತರ ಪರವಾಗಿ ನಿಂತ ಗಟ್ಟಿ ಧ್ವನಿ ಮತ್ತು ಸರಳ ವ್ಯಕ್ತಿತ್ವ ಎಂದಿಗೂ ಅಮರ. ಹಸಿರು ಶಾಲಿನ ಹಸಿರು ಉಸಿರಿರುವವರೆಗೂ, ಮಣ್ಣಿನ ಮಗನಾಗಿ ಬಾಳಿದ ಈ ಮಹಾನ್ ಕಲಾವಿದನಿಗೆ ರೈತ ಪರಿವಾರ ಮತ್ತು ಪ್ರತಿಯೊಬ್ಬ ಸಿನಿಮಾ ಪ್ರೇಮಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರುಕ್ಮಿಣಿ ವಸಂತ್ ಕ್ರೇಜ್‌ಗೆ ಪಾತ್ರಗಳ ಹೆಸರೇ ಚೇಂಜ್ ಆಯ್ತಾ? ಕೊನೆಗೂ ಕ್ಲಾರಿಟಿ ಕೊಟ್ರು 'ಪ್ರೇಮದ ಊರಲಿ' ಡೈರೆಕ್ಟರ್ ಮನೋಜ್
Nana Patekar Net Worth: 35 ರೂಪಾಯಿ ಸಂಬಳದಿಂದ 80 ಕೋಟಿ ಆಸ್ತಿವರೆಗೆ..! ಆದ್ರೆ ನಾನಾ ಪಾಟೇಕರ್ ಜೀವನ ಮಾತ್ರ ತೀರಾ ಸಾಮಾನ್ಯ