
ದೇಶ-ವಿದೇಶದಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. ಡ್ಯುರೆಕ್ಸ್ ಕಾಂಡೋಮ್ ಕಂಪೆನಿಯು ಹೊಸದಾಗಿ ಮದುವೆಯಾದ ದಂಪತಿಗೆ ವಿಭಿನ್ನವಾಗಿ ಅಭಿನಂದಿಸಿದೆ. 'ದೀಪಿಕಾ-ರಣವೀರ್ ಈಗ ಅಧಿಕೃತವಾಗಿ ಕಾಂಡೋಮ್ ಬಳಸಬಹುದು' ಎಂದು ಟ್ವೀಟ್ ಮಾಡಿದೆ.
ಸುಮಾರು 5 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ದಾಂಪತ್ಯಕ್ಕೆ ಕಾಲಿರಿಸಿದೆ. ಈ ಸ್ಟಾರ್ ಜೋಡಿ ಮದುವೆಗೆ ಕುಟುಂಬಸ್ಥರು, ತಾರೆಯರಿಗಷ್ಟೆ ಆಹ್ವಾನ ನೀಡಲಾಗಿತ್ತು. ಮೊಬೈಲ್ ಬಳಕೆ ಹಾಗೂ ಉಡುಗೊರೆಗಳಿಗೆ ಪ್ರವೇಶ ಇಲ್ಲ ಎಂದು ಮೊದಲೆ ತಿಳಿಸಲಾಗಿತ್ತು. ಅಲ್ಲದೆ ಮದುವೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡದಂತೆ ಹೇಳಲಾಗಿತ್ತು.
ದೀಪಿಕಾಗೆ ಬೆಂಗಳೂರಿನಲ್ಲಿ ಹಲವು ಮಂದಿ ಆಪ್ತರಿರುವ ಕಾರಣ ನವೆಂಬರ್ 21 ರಂದು ಬೆಂಗಳೂರಲ್ಲಿ ಆರತಕ್ಷತೆ ನಡೆಯಲಿದೆ. ಲೀಲಾ ಪ್ಯಾಲೇಸ್ ನಲ್ಲಿ ಇಟಾಲಿಯನ್ ರೆಸ್ಟೋರೆಂಟ್ ಆಯ್ಕೆ ಇರುವುದು ಮೊದಲ ಕಾರಣ. ದೀಪಿಕಾ ಅವರಿಗೂ ಈ ಹೊಟೇಲ್ ಮೊದಲಿನಿಂದಲೂ ಅಚ್ಚು-ಮೆಚ್ಚು. ದೀಪಿಕಾ ತಾಯಿ ಸಹ ಈ ರೆಸ್ಟೊರೆಂಟ್ ನ ರುಚಿ ಸವಿದಿದ್ದಾರೆ. ನವೆಂಬರ್ 20ಕ್ಕೆ ಹೊಟೆಲ್ ಪ್ರವೇಶ ಮಾಡುವ ಕುಟುಂಬ 22ಕ್ಕೆ ನಿರ್ಗಮಿಸಲಿದೆ. 21 ರಂದು ಆರತಕ್ಷತೆ ಹಮ್ಮಿಕೊಳ್ಳಲಾಗಿದೆ.
ದೀಪಿಕಾ-ರಣ್‌ವೀರ್ ಮದುವೆ ಪೋಟೋಕ್ಕೆ ಕಾದವ ಏನಾದ?
ಇಟಲಿಯಲ್ಲಿ ದೀಪಿಕಾ, ರಣವೀರ್ ಮದ್ವೆ : ಹೇಗಿರುತ್ತೆ ರಾಯಲ್ ವೆಡ್ಡಿಂಗ್..
ಡಿಪ್ಪಿ-ವೀರ್ ಮದುವೆಗೆ ಸ್ಯಾಂಡಲ್‌ವುಡ್ ಏಕೈಕ ನಿರ್ದೇಶಕನಿಗೆ ಮಾತ್ರ ಆಹ್ವಾನ
ಹಸೆಮಣೆ ಏರುವ ಮುನ್ನ ಪೂಜೆಯಲ್ಲಿ ಭಾಗಿಯಾದ ದೀಪಿಕಾ ಪಡುಕೋಣೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.