ಬೆಂಗಳೂರು ಲೀಲಾಪ್ಯಾಲೇಸ್‌ನಲ್ಲೇ ದೀಪಿಕಾ ರಿಸೆಪ್ಷನ್‌, ಸ್ಥಳ ಆಯ್ಕೆಗಿದೆ ವಿಶೇಷ ಕಾರಣ!

By Web DeskFirst Published Nov 15, 2018, 5:29 PM IST
Highlights

ಬಾಲಿವುಡ್ ನ ಬಹುನಿರೀಕ್ಷಿತ ಮದುವೆಯೊಂದ ಸಂಭ್ರಮದಿಂದ ವಿದೇಶದಲ್ಲಿ ನಡೆದಿದೆ. ಆದರೆ ಇದೆಲ್ಲದಕ್ಕಿಂತ ಮುಖ್ಯ ದೀಪಿಕಾ-ರಣ್ ವೀರ್ ಆರತಕ್ಷತೆ ಬೆಂಗಳೂರಿನಲ್ಲಿ ನಡೆಯಲಿದೆ.

ಬೆಂಗಳೂರು[ನ.15]  ದೀಪಿಕಾಗೆ ಬೆಂಗಳೂರಿನಲ್ಲಿ ಹಲವು ಮಂದಿ ಆಪ್ತರಿರುವ ಕಾರಣ ನವೆಂಬರ್ 21 ರಂದು ಬೆಂಗಳೂರಲ್ಲಿ ಆರತಕ್ಷತೆ ನಡೆಯಲಿದೆ. ಮುಂಬೈನಲ್ಲೂ ಸ್ನೇಹಿತರು, ಚಿತ್ರತಾರೆಯರಿಗೆ ರಿಸೆಪ್ಷನ್ ನಡೆಯಲಿದೆ. 

ಬೆಂಗಳೂರಿನ ಪಂಚತಾರಾ ಹೋಟೆಲ್ ಗಳಲ್ಲಿ ಒಂದಾದ ಲೀಲಾ ಪ್ಯಾಲೇಸ್ ನಲ್ಲಿ ಆರತಕ್ಷತೆ ನಡೆಯಲಿದೆ.  ಹಾಗಾದರೆ ಲೀಲಾ ಪ್ಯಾಲೇಸ್ ನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ಏನು? ಇಲ್ಲಿದೆ ಏನು ಕಾರಣ...

ದೀಪಿಕಾ-ರಣ್‌ವೀರ್ ಮದುವೆ ಪೋಟೋಕ್ಕೆ ಕಾದವ ಏನಾದ?

ಲೀಲಾ ಪ್ಯಾಲೇಸ್ ನಲ್ಲಿ ಇಟಾಲಿಯನ್ ರೆಸ್ಟೋರೆಂಟ್ ಆಯ್ಕೆ ಇರುವುದು ಮೊದಲ ಕಾರಣ.  ದೀಪಿಕಾ ಅವರಿಗೂ ಈ ಹೊಟೇಲ್ ಮೊದಲಿನಿಂದಲೂ ಅಚ್ಚು-ಮೆಚ್ಚು. ದೀಪಿಕಾ ತಾಯಿ ಸಹ ಈ ರೆಸ್ಟೊರೆಂಟ್ ನ ರುಚಿ ಸವಿದಿದ್ದಾರೆ. ನವೆಂಬರ್ 20ಕ್ಕೆ ಹೊಟೆಲ್ ಪ್ರವೇಶ ಮಾಡುವ ಕುಟುಂಬ 22ಕ್ಕೆ ನಿರ್ಗಮಿಸಲಿದೆ. 21 ರಂದು ಆರತಕ್ಷತೆ ಹಮ್ಮಿಕೊಳ್ಳಲಾಗಿದೆ.

ಲೀಲಾ ಪ್ಯಾಲೇಸ್ ನ ಬಾಲ್ ರೂಮ್ ದೀಪಿಕಾ ಆರತಕ್ಷತೆಗೆ ಬುಕ್ ಆಗಿದೆ. ಲೀಲಾ ಪ್ಯಾಲೇಸ್ ನ ವಾಸ್ತುಶಿಲ್ಪ ಸಹ ಮತ್ತೊಂದು ಕಾರಣ. 7 ಎಕರೆ ಜಾಗದಲ್ಲಿನ ಹಸಿರು, ತಾಮ್ರ ವರ್ಣದ ಆಕರ್ಷಣೆ ಸಹ ಈ ಹೊಟೆಲ್ ಆಯ್ಕೆ ಮಾಡಿಕೊಳ್ಳಲು ಕಾರಣವಾಗಿದೆ. 

ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ -ರಣ್ವೀರ್ ಸಿಂಗ್ ನವೆಂಬರ್ 14 ರಂದು ಕೊಂಕಣಿ ಸಮುದಾಯದ ಆಚಾರದಂತೆ ಇಟಲಿಯಲ್ಲಿ ಮದುವೆಯಾಗಿದ್ದರು. ಅದ್ದೂರಿ ಕಲ್ಯಾಣಕ್ಕೆ ಆಪ್ತರು, ಸಂಬಂಧಿಕರಷ್ಟೆ ಸಾಕ್ಷಿಯಾಗಿದ್ದರು.

ಇಟಲಿಯಲ್ಲಿ ದೀಪಿಕಾ, ರಣವೀರ್‌ ಮದ್ವೆ : ಹೇಗಿರುತ್ತೆ ರಾಯಲ್ ವೆಡ್ಡಿಂಗ್..

ಡಿಪ್ಪಿ-ವೀರ್ ಮದುವೆಗೆ ಸ್ಯಾಂಡಲ್‌ವುಡ್ ಏಕೈಕ ನಿರ್ದೇಶಕನಿಗೆ ಮಾತ್ರ ಆಹ್ವಾನ

ಹಸೆಮಣೆ ಏರುವ ಮುನ್ನ ಪೂಜೆಯಲ್ಲಿ ಭಾಗಿಯಾದ ದೀಪಿಕಾ ಪಡುಕೋಣೆ

click me!
Last Updated Nov 15, 2018, 5:53 PM IST
click me!