
ಎಲ್ಲಾ ನಟಿಯರೂ ಚಿತ್ರದಿಂದ ಚಿತ್ರಕ್ಕೆ, ಪಾತ್ರದಿಂದ ಪಾತ್ರಕ್ಕೆ ಭಿನ್ನತೆ ಬಯಸುವುದು ಸಹಜ. ಇನ್ನು ಸ್ಟಾರ್ ನಟಿಯರ ವಿಚಾರಕ್ಕೆ ಬಂದರೆ ಈ ಬಯಕೆ ತುಸು ಹೆಚ್ಚು ಎಂದೇ ಹೇಳಬೇಕು. ಬಾಲಿವುಡ್ ಮಂದಿಗಂತೂ ಇದು ಹೆಬ್ಬಯಕೆ. ಯಾರು ಏನು ಮಾಡುತ್ತಾರೋ, ಆದರೆ ಜಾಕ್ವೆಲಿನ್ ಫೆರ್ನಾಂಡಿಸ್ ಮಾತ್ರ ಯಾವಾಗಲೂ ಫಿಟ್ನೆಸ್, ತಮ್ಮ ಬ್ಯೂಟಿ ಬಗ್ಗೆ ಸಾಕಷ್ಟು ಗಮನ ನೀಡುತ್ತಾರೆ. ಅಲ್ಲದೇ ಅದಕ್ಕೆ ತಕ್ಕಂತೆ ಧಿರಿಸನ್ನೂ ತೊಟ್ಟು ಚೆಂದದ ಫೋಟೋ ತೆಗೆಸಿ ಸೋಷಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ ಕೂಡ. ಇದು ಜಾಕ್ವಿಗೆ ಫೇಮ್ ಹೆಚ್ಚಾಗಲು ಇರುವ ಮುಖ್ಯ ಕಾರಣವೂ ಹೌದು. ಈಗ ಯಾಕಿದೆಲ್ಲಾ ಎಂದರೆ ಜಾಕ್ವಿ ರೆಟ್ರೋ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿರುವುದು. ಸಾದಾ ಸೀರೆ, ಮಟ್ಟಸವಾಗಿ ಬಾಚಿದ ತಲೆಗೂದಲು. ಹಣೆಯಲ್ಲಿ ಸಣ್ಣ ಬಿಂದಿ. ಯಾವುದೋ ಭಾರವಾದ ಭಾವವನ್ನು ಹೊತ್ತ ಮುಖಭಾವ. ಅರ್ಧ ಮುಖವನ್ನು ಮುಚ್ಚಿದ ಸೀರೆಯೊಂದಿಗೆ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋ. ಹೀಗೆ ಅಪ್ಪಟ ರೆಟ್ರೋ ಸ್ಟೈಲಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಂದಿನ ಚಿತ್ರಕ್ಕೆ ತಯಾರಾಗಿ ನಿಂತಿದ್ದಾರೆ ಜಾಕ್ವೆಲಿನ್ ಫೆರ್ನಾಂಡೀಸ್.
ಜಾಕ್ವೆಲಿನ್ ಫೆರ್ನಾಂಡಿಸ್ ಸಖತ್ ಟಾಂಗ್
ಅಭಿಮಾನಿಗಳಿಗೆ ಶಾಕ್ ನೀಡಿದ ಜಾಕ್ವೆಲಿನ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.