
ಬೆಂಗಳೂರು (ಸೆ. 08): ಇತ್ತೀಚಿಗೆ ಸಲ್ಮಾನ್ ಖಾನ್ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಮದುವೆಯಾಗದೇ ಇರುವುದಕ್ಕೆ ಸುದ್ದಿಯಾಗುತ್ತಿದ್ದಾರೆ.
ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಖಾನ್, ಶಾರೂಕ್ ಖಾನ್ ಹಾಗೂ ರಾಣಿ ಮುಖರ್ಜಿ ಭಾಗವಹಿಸಿದ್ದರು. ಈ ವೇಳೆ ತಮಾಷೆಯಾಗಿ ಕಾಲೆಳೆಯುವ ಸಂದರ್ಭದಲ್ಲಿ ಶಾರೂಕ್ ಹೇಳುತ್ತಾರೆ; ಸಲ್ಮಾನ್ ನಿಮಗೆ ಮದುವೆಯಾಗಿ ನಿಮಗೊಂದು ಮಗಳು ಹುಟ್ಟಲಿ. ಅವಳು ನಿಮ್ಮ ಹಾಗೆ ಮುದ್ದು ಮುದ್ದಾಗಿರಲಿ. ನಿಮ್ಮ ಮುದ್ದಾದ ಮಗಳನ್ನು ನನ್ನ ಮಗನಿಗೆ ತಂದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ರಾಣಿ ಮುಖರ್ಜಿ ಕೂಡಾ ದನಿಗೂಡಿಸಿದ್ದಾರೆ.
ಶಾರೂಕ್ ರಾಣಿ ಮುಖರ್ಜಿಯವರನ್ನು ಬಿಡಲಿಲ್ಲ. ನಾವು ರಾಣಿ ಮುಖರ್ಜಿಯವರನ್ನು ನಮ್ಮ ಶೋಗೆ ಕರೆಯಬಾರದಿತ್ತು. ಅವರು ಜನರಿಗೆ ಮದುವೆ ಮಾಡಿಸುತ್ತಾರೆ. ಮಕ್ಕಳ ಬಗ್ಗೆ ಐಡಿಯಾ ಕೊಡುತ್ತಾರೆ. ಹಾಗಾಗಿ ಅವರನ್ನು ’ಶಾದಿ ಮುಖರ್ಜಿ’ ಎಂದು ಕರೆಯಬೇಕೆಂದು ಕಿಚಾಯಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.