ಶಾಹಿದ್-ಮೀರಾ ಕುಟುಂಬಕ್ಕೆ ಬಂದ ಪುಟ್ಟ ವಾರಸುದಾರ

Published : Sep 06, 2018, 12:34 PM ISTUpdated : Sep 09, 2018, 10:25 PM IST
ಶಾಹಿದ್-ಮೀರಾ ಕುಟುಂಬಕ್ಕೆ ಬಂದ ಪುಟ್ಟ ವಾರಸುದಾರ

ಸಾರಾಂಶ

ಈಗಾಗಲೇ ಮುದ್ದಾದ ಹೆಣ್ಣು ಮಗುವಿನ ಪೋಷಕರಾದ ಬಾಲಿವುಡ್ ನಟ ಶಾಹೀದ್ ಕಪೂರ್ ಹಾಗೂ ಮೀರಾ ರಜಪೂತ್ ಇದೀಗ ಮತ್ತೊಂದು ಗಂಡು ಮಗುವಿನ ಪೋಷಕರಾಗಿದ್ದಾರೆ.  

ಬಾಲಿವುಡ್ ನಟ ಶಾಹಿದ್ ಕಪೂರ್ ಪತ್ನಿ ಮೀರಾ ಕಪೂರ್ ಎರಡನೇ ಮಗುವಿನ ತಾಯಿಯಾಗಿದ್ದಾರೆ. ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದ ಮೀರಾ, ಶಿಕ್ಷಕರ ದಿನಾಚರಣೆಯಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಮುಂಬೈನ‌ ಹಿಂದೂಜಾ ಆಸ್ಪತ್ರೆಯಲ್ಲಿ ಮೀರಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಈ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಈ ದಂಪತಿಯ ಮೊದಲ ಮಗು ಮೀಶಾ ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದು, ಈ ಸಾಲಿಗಿನ್ನು ಈಕೆಯ ತಮ್ಮನೂ ಸೇರಿ ಕೊಳ್ತಾನಾ ನೋಡಬೇಕು. ಬಾಲಿವುಡ್‌ನಲ್ಲಿ ಕರೀನಾ ಹಾಗೂ ಸೈಫ್ ಆಲಿ ಖಾನ್ ಮಗನಾದ, ಹಾಲುಗೆನ್ನೆಯ ತೈಮೂರ್ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾನೆ. ಈ ಸಾಲಿಗೆ ಶಾಹೀದ್ ಮಗನೂ ಸೇರ್ತಾನಾ ನೋಡಬೇಕು.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ತೆಲುಗು ನೆಲದಲ್ಲಿ ಹೊಸ ದಾಖಲೆ ಬರೆದ ಕನ್ನಡಿಗ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ; ಭಾರೀ ಮೊತ್ತಕ್ಕೆ ಮಾರಾಟ!
ಡ್ರಗ್ಸ್ ದಾಳಿಯಲ್ಲಿ ಸಿಕ್ಕಿಬಿದ್ದ ಖ್ಯಾತ ನಟಿ ಅಂಜು ಕೃಷ್ಣ; ಸಿನಿಲೋಕದಲ್ಲಿ ಬಹುದೊಡ್ಡ ಜಾಲ ಪತ್ತೆ ಆಯ್ತಾ?