ಡಾ. ರಾಜ್ ಎಲ್ಲರಿಗೂ ಚಕ್ರವರ್ತಿ: ಹೊಸ ಬಿರುದು ಕೊಟ್ಟ ಬಾಲಿವುಡ್ ನಟ!

By Web DeskFirst Published Sep 13, 2019, 2:44 PM IST
Highlights

ಸ್ಯಾಂಡಲ್‌ವುಡ್ ಅಂದ್ರೆ ಡಾ. ರಾಜ್ ಕುಮಾರ್. ರಾಜ್ ಅಂದ್ರೆ ಸ್ಯಾಂಡಲ್‌ವುಡ್. ಇದು ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡಿಗರಿಗೆ ಮಾತ್ರ ಸೀಮಿತವಲ್ಲ ಬಿ-ಟೌನ್ ಮಂದಿಗೂ ರಾಜ್ ಮೇಲೆ ಅಪಾರ ಗೌರವವಿದೆ. ಭಾರತದ ಈ ಮಹಾನ್ ನಟನನ್ನು ಬಾಲಿವುಡ್ ಸ್ಟಾರ್‌ ಒಬ್ಬರು ನೆನಪಿಸಿಕೊಂಡಿದ್ದಾರೆ. ಹೇಗೆ?

 

ಬೆಂಗಳೂರಿನಲ್ಲಿ ನಡೆದ ಅದ್ಧೂರಿ ‘ಬೆಂಗಳೂರು ಉತ್ಸವ’ ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ಜೊತೆ ಪಾಲ್ಗೊಂಡ ಬಾಲಿವುಡ್ ನಟ ಅನಿಲ್ ಕಪೂರ್ ಸಿಲಿಕಾನ್ ಸಿಟಿ ಜನರನ್ನ ರಂಜಿಸಿದರೆ. ಕನ್ನಡ, ಬೆಂಗಳೂರು ಹಾಗೂ ಕರುನಾಡ ಜತೆ ತಮಗಿರುವ ನಂಟನ್ನು ನೆನಪಿಸಿಕೊಂಡರು.

 

ಡಾ. ರಾಜ್‌ ಕುಮಾರ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಾಲಿವುಡ್ ಎವರ್‌ಗ್ರೀನ್ ಹೀರೋ, ' ಡಾ. ರಾಜ್ ಕುಮಾರ್ ಕನ್ನಡ ಚಿತ್ರರಂಗದ ಚಕ್ರವರ್ತಿ. ನಟರಿಗೆ ನಟರು. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಅವರು ದೇಶಕ್ಕೇ ಹೆಸರು ತಂದವರು. ಅವರು ಸದಾಕಾಲ ನಮ್ಮ ಹೃದಯದಲ್ಲಿರುತ್ತಾರೆ,' ಎನ್ನುವ ಮೂಲಕ ಕನ್ನಡಿಗರೂ ಮತ್ತಷ್ಟು ಹತ್ತಿರವಾದರು.

36 ವರ್ಷದ ಬಳಿಕ ‘ಪಲ್ಲವಿ-ಅನುಪಲ್ಲವಿ’ ನೆನೆದು ಭಾವುಕರಾದ ಅನಿಲ್ ಕಪೂರ್

 

ಗಿರೀಶ್ ಕಾರ್ನಾಡ್ ಬಗ್ಗೆ...

ಕಾರ್ನಾಡ್ ಕಲೆ ಹಾಗೂ ಸಾಹಿತ್ಯ ಜ್ಞಾನದ ಬಗ್ಗೆ ನನಗೆ ಅಪಾರ ಗೌರವವಿದೆ. ಅವರೊಂದಿಗೆ ಒಂದೆರಡು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತು. ಅವರೊಂದಿಗೆ ನಾಟಕದಲ್ಲಿಯೂ ನಟಿಸಿ, ನಿರ್ದೇಶಿಸುವ ಆಸೆ ಇತ್ತು. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಕೆಲಸವಿದೆ, ಎಂದರು.

ಏಕ್ ಲಡ್ಕಿ ಕಿ ಕೋ.. ಚಿತ್ರ ಆನ್‌ಲೈನ್‌ನಲ್ಲಿ ಲೀಕ್?

 

ವಿಜಯ್ ಪ್ರಕಾಶ್ ಬಗ್ಗೆ:

 

ವಿಜಯ್ ನನ್ನ ಎರಡು ಚಿತ್ರಗಳಿಗೆ ಹಾಡಿದ್ದಾರೆ. ಅವರು ಕ್ಲಾಸಿಕಲ್ ಮ್ಯೂಸಿಕ್‌ನಲ್ಲಿ ತರಬೇತಿ ಪಡೆದಿರುವವರು. ಅವರ ಹಾಡುಗಳು ಸೂಪರ್. ರೆಹೆಮಾನ್ ನೆಚ್ಚಿನ ಗಾಯಕರಾಗುವುದರಲ್ಲಿ ಅನುಮಾನವಿಲ್ಲ, ಎಂದು ಚಪ್ಪಾಳೆ ಗಿಟ್ಟಿಸಿಕೊಂಡರು.

 

ಅಂದ ಹಾಗೆ ಅನಿಲ್‌ ಕಪೂರ್ ತಮ್ಮ ಸಿನಿ ಜರ್ನಿ ಆರಂಭಿಸಿದ್ದೇ ಕನ್ನಡ 'ಪಲ್ಲವಿ ಅನು ಪಲ್ಲವಿ' ಚಿತ್ರದ ಮೂಲಕ. ಮಣಿ ರತ್ನಂ ನಿರ್ದೇಶನದ ಈ ಚಿತ್ರದಲ್ಲಿ ಮೊದಲು ನಟಿಸಿ, ನಂತರ ಬಾಲಿವುಡ್‌ನಲ್ಲಿ ಸೂಪರ್ ಹೀರೋ ಆಗಿ ಬೆಳೆದ ನಟ ಇವರು.

click me!