
‘Kaun Banega Crorepat’ಗೆ ಆಯ್ಕೆ ಆಗುವುದೇ ಒಂದು ಸಾಧನೆ. ಅದರಲ್ಲೂ ಲೈಫ್ ಲೈನೇ ಬೇಡ it is easy... ಎನ್ನುತ್ತಾ, ಕೇಳಿದ 15 ಪ್ರಶ್ನೆಗಳಿಗೂ ಉತ್ತರಿಸಿ 1 ಕೋಟಿ ಗಳಿಸಿದ ಮೊದಲ ವ್ಯಕ್ತಿ ಸನೋಜ್ ರಾಜ್.
ಕೋಟ್ಯಧಿಪತಿಯಲ್ಲಿ 25 ಲಕ್ಷದ ಪ್ರಶ್ನೆ ಕ್ವಿಟ್ ಮಾಡಿ 12.5 ಲಕ್ಷ ಸಾಕು ಎಂದ ಮಹಿಳೆ!
ಕರೋಡ್ ಪತಿ ಸೀಸನ್ 11ರಲ್ಲಿ ಸನೋಜ್ ರಾಜ್ 1 ಕೋಟಿ ರೂ. ಗೆದ್ದಿರುವ ಪ್ರೊಮೋ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಸನೋಜ್ 1 ಕೋಟಿ ರೂ. ಗೆದ್ದಿರುವುದನ್ನು ಪ್ರಕಟಿಸಿದ್ದಾರೆ. 16ನೇ ಪ್ರಶ್ನೆಗೆ ಉತ್ತರಿಸಿದರೆ 7 ಕೋಟಿ ಜಾಕ್ ಪಾಟ್!
ಬಿಹಾರ ಮೂಲದ ಸನೋಜ್ ರಾಜ್‌ಗೆ IAS ಆಫೀಸರ್ ಆಗೋವಾಸೆ. ಪರಿಸರದ ಬಗ್ಗೆ ಎಲ್ಲಿಲ್ಲದ ಕಾಳಜಿಯೂ ಉಂಟು. ಐಎಎಸ್ ಆಫೀಸರ್ ಆದರೆ ಅಪೌಷ್ಟಿಕತೆ ಕೊರತೆಯನ್ನು ತಡೆಯುವ ಕ್ರಮ ಕೈಗೊಳ್ಳಬೇಕೆಂಬ ಹೆಬ್ಬಯಕೆ ಇವನಿಗೆ. ಕೆಲವು ದಿನಗಳ ಮಟ್ಟಕ್ಕೆ ಸಾಫ್ಟ್‌ವೇರ್ ಆಗಿ ಕಾರ್ಯ ನಿರ್ವಹಿಸಿದ ಸನೋಜ್ 9 ತಿಂಗಳಲ್ಲೇ ಕೆಲಸಕ್ಕೆ ರಾಜೀನಾಮೆ ನೀಡಿ UPSC ಪರೀಕ್ಷೆಗೆ ಸಿದ್ದರಾಗುತ್ತಿದ್ದಾರೆ. ಇವರ ಎಲ್ಲ ಆಸೆಗಳು ಕೈಗೂಡಲಿ. 7 ಕೋಟಿ ರೂ. ಗೆಲ್ಲುವಂತಾಗಲಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.