ದರ್ಶನ್ ಬಂಧನದ ಬಗ್ಗೆ ತನ್ನದೇ ಶೈಲಿಯಲ್ಲಿ ಉತ್ತರ ಕೊಟ್ಟ ಸನ್ನಿ ಲಿಯೋನ್

Published : Jun 19, 2024, 08:38 AM IST
ದರ್ಶನ್ ಬಂಧನದ ಬಗ್ಗೆ ತನ್ನದೇ ಶೈಲಿಯಲ್ಲಿ ಉತ್ತರ ಕೊಟ್ಟ ಸನ್ನಿ ಲಿಯೋನ್

ಸಾರಾಂಶ

ಬೆಂಗಳೂರಿಗೆ ಬಂದಿದ್ದ ನಟಿ ಸನ್ನಿ ಲಿಯೋನ್ , ದರ್ಶನ್ ಬಂಧನದ ಕುರಿತು ಕೇಳಲಾದ  ಪ್ರಶ್ನೆಗೆ ಉತ್ತರಿಸಿದ್ದು ಹೀಗೆ

ಬೆಂಗಳೂರು: ಬೆಂಗಳೂರಿಗೆ ಆಗಮಿಸಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny Leone) ಅವರಿಗೆ ನಟ ದರ್ಶನ್ ಬಂಧನದ (Actor Darshan Arrest) ಕುರಿತು ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ತಮ್ಮದೇ ಶೈಲಯಲ್ಲಿ ಸನ್ನಿ ಲಿಯೋನ್ ಪ್ರತಿಕ್ರಿಯಿಸಿದ್ದಾರೆ. ಹೆಚ್.ಆರ್.ಬಿ.ಆರ್ ಲೇಔಟ್ ನಲ್ಲಿ ಹೊಸದಾಗಿ ಆರಂಭವಾಗ್ತಿರುವ ನ್ಯಾಚುರಲ್ಸ್ ನ ಬ್ಯೂಟಿ ಆ್ಯಂಡ್ ಎಕ್ಸ್ಪಿರಿಯನ್ಸ್ ಉದ್ಘಾಟನೆಗಾಗಿ ಪತಿ ಡೇನಿಯಲ್ ವೇಬರ್ ಜೊತೆ ಆಗಮಿಸಿದ್ದ ಸನ್ನಿ ಲಿಯೋನ್ ಅಂದವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಸನ್ನಿ ಲಿಯೋನ್ ಕಾರ್‌ನಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಜೋರಾಗಿ ಶಿಳ್ಳೆ, ಚಪ್ಪಾಳೆ ಹಾಕುತ್ತಾ ಮಾದಕ ಚೆಲುವೆಯನ್ನು ಸಿಲಿಕಾನ್ ಸಿಟಿಗೆ ಸ್ವಾಗತಿಸಿಕೊಂಡರು. ದೂರದಿಂದಲೇ ಸನ್ನಿ ಫೋಟೋ ಸೆರೆ ಹಿಡಿದು, ಅಲ್ಲಿಂದಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಒಳಗೊಳಗೆ ಖುಷಿಯಿಂದ ಕುಣಿದಾಡಿದರು.

ದರ್ಶನ್‌ ವಿರುದ್ಧ ಅಕ್ರಮವಾಗಿ ಬಾತುಕೋಳಿ ಸಾಕಿದ ಕೇಸ್‌: ಶೀಘ್ರ ಚಾರ್ಜ್‌ಶೀಟ್

ಶಾಪ್ ಉದ್ಘಾಟನೆ ಬಳಿ ಕನ್ನಡದಲ್ಲಿಯೇ ಮಾತು ಆರಂಭಿಸುವ ಮೂಲಕ ಎಲ್ಲರಿಗೂ ಶಾಕ್ ನೀಡಿದರು. ಕನ್ನಡ ಕಲಿಯುತ್ತೇನೆ ಎಂದು ಮಾತು ಆರಂಭಿಸಿದ ಸನ್ನಿ ಲಿಯೋನ್, ಐ ಲವ್ ಬೆಂಗಳೂರು ಎಂದು ಜೋರಾಗಿ ಹೇಳಿದರು. ನನಗೆ ಸ್ಪಲ್ಪ ಸ್ವಲ್ಪ ಕನ್ನಡ ಬರುತ್ತದೆ. ಇನ್ನು ಕಲಿಯುತ್ತೇನೆ ಎಂದು ಹೇಳುವ ಮೂಲಕ ಕನ್ನಡಿಗರಿಗೆ ಪ್ರೀತಿ ಪಾತ್ರರಾದರು. ಇದೇ ವೇಳೆ ದರ್ಶನ್ ಬಂಧನದ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಸನ್ನಿ ಲಿಯೋನ್‌ ನಿರಾಕರಿಸಿದರು. ಇದು ತುಂಬಾ ಕಷ್ಟವಾದ ಪ್ರಶ್ನೆ ಆಗಿದೆ ಎಂದು ಹೇಳಿದರು. ತಂಗಿ, ಪತ್ನಿ ಮತ್ತು ತಾಯಿಯನ್ನು ಖುಷಿಪಡಿಸಲು ಯಾವ ವಸ್ತು ಖರೀದಿ ಮಾಡ್ತೀರಿ ಹೇಳಿ. ಆಗಲ್ಲವಲ್ಲಾ, ಇದು ಸಹ ಹಾಗೆ ಎಂದು  ಸನ್ನಿ ಕೊಂಚ ಗರಂ ಆದರು.

ಮಂಗಳವಾರ ದರ್ಶನ್ ಬಂಧನದ ಕುರಿತು ಪ್ರತಿಕ್ರಿಯಿಸಿದ್ದ ನಟಿ ರಚಿತಾ ರಾಮ್, ಮೊದಲನೇಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆಂಬ ಭರವಸೆ ನನಗಿದೆ ಎಂದು ಹೇಳಿದ್ದರು. ಕಳೆದ ಕೆಲ ದಿನಗಳಿಂದ ಸ್ಯಾಂಡಲ್‌ವುಡ್ ತಾರೆಯರು ದರ್ಶನ್ ಬಂಧನದ ಕುರಿತು ಮಾತನಾಡುತ್ತಿದ್ದಾರೆ. ನಟ ಸುದೀಪ್, ನಟಿ  ರಮ್ಯಾ ಸಹ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಗನ್‌ ಇಟ್ಟು ದರ್ಶನ್‌ ನನಗೆ ಹೆದರಿಸಿದ್ದರು, ಅಂದು ನಾನು ಬದುಕಿ ಬಂದಿದ್ದೇ ಹೆಚ್ಚು: ಉಮಾಪತಿಗೌಡ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?