Latest Videos

ರಾತ್ರಿಯ ವೇಳೆ ರಾಜಿಯ ಮನೆಗೆ ಬಂದ ಹೆಣ್ಣು ದೆವ್ವ! ಲೇಡಿ ವಿಲನ್​ ಸುಸ್ತೋ ಸುಸ್ತು...

By Suchethana DFirst Published Jun 18, 2024, 9:18 PM IST
Highlights

ಪುಟ್ಟಕ್ಕನ ಮಕ್ಕಳು ವಿಲನ್​  ರಾಜಿಗೆ ಕಾಡ್ತಿದೆ ಹೆಣ್ಣು ದೆವ್ವ. ಪುಟ್ಟಕ್ಕನ ಸಹವಾಸಕ್ಕೆ ಹೋಗಬೇಡ ಎಂದು ಎಚ್ಚರಿಕೆ! 
 

ಸಹನಾ ಬದುಕಿದ್ದಾಳೆ.  ಆದರೆ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಆಕೆ ಸತ್ತೇ ಹೋಗಿದ್ದಾಳೆ ಎಂದುಕೊಂಡಿದ್ದಾರೆ. ಆದರೆ ಸಹನಾ ದೇವಸ್ಥಾನ ಒಂದರಲ್ಲಿ ಕೆಲಸಕ್ಕಿದ್ದುಕೊಂಡು ಅಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ. ಸತ್ತಿದ್ದು ಸಹನಾ ಅಲ್ಲ, ಆದರೆ ಅವಳ ಬ್ಯಾಗ್​ ಕದ್ದುಕೊಂಡು ಹೋಗಿದ್ದ ಕಳ್ಳಿ. ಮನೆ ಬಿಟ್ಟ ಸಹನಾ ಬಸ್​ನಲ್ಲಿ ಹೋಗುವಾಗ ಪಕ್ಕದಲ್ಲಿಯೇ ಇದ್ದಳು ಈ ಕಳ್ಳಿ. ಸಹನಾ ನಿದ್ದೆಗೆ ಜಾರಿದಾಗ ಅವಳ ಎಲ್ಲಾ ಬ್ಯಾಗ್​ ಸೇರಿದಂತೆ ಎಲ್ಲಾ ಸಾಮಾನು ತೆಗೆದುಕೊಂಡು ಓಡಿ ಹೋಗಿದ್ದಾಳೆ. ಓಡಿ ಹೋಗುವ ಸಮಯದಲ್ಲಿ ಅಪಘಾತವಾಗಿ ಅವಳು ಸತ್ತುಹೋಗಿದ್ದಾಳೆ. ಮುಖ ಚಚ್ಚಿದ್ದರಿಂದ ಅವಳ ಗುರುತು ಹಿಡಿಯಲು ಯಾರಿಗೂ ಸಾಧ್ಯವಾಗಲಿಲ್ಲ. ಅವಳ ಬಳಿ ಸಹನಾಗೆ ಸೇರಿದ ಎಲ್ಲಾ ವಸ್ತುಗಳು ಇದ್ದುದರಿಂದ ಪೊಲೀಸರು ಇದು ಸಹನಾ ಇರಬಹುದು ಎಂದಾಗ, ಖುದ್ದು ಪುಟ್ಟಕ್ಕನೇ ಸಹನಾ ಎಂದು ಗುರುತಿಸಿ, ಅಂತ್ಯಕ್ರಿಯೆ ಮಾಡಲಾಗಿದೆ.

ಇದೀಗ ಮನೆಯಲ್ಲಿ ಸಹನಾಳ ಶ್ರಾದ್ಧಕಾರ್ಯ ನಡೆಯುತ್ತಿದೆ. ಯಾರ ಕಣ್ಣಿಗೂ ಬೀಳಬಾರದು ಎಂದುಕೊಂಡ ಸಹನಾ ಬೆಂಗಳೂರಿನಲ್ಲಿ ಬೀದಿ ಬದಿಯ ವ್ಯಾಪಾರ ಮಾಡುತ್ತಿರುತ್ತಾಳೆ. ಆದರೆ ವ್ಯಾಪಾರ ಮಾಡಲು ಲೈಸೆನ್ಸ್​ ಬೇಕಿರುತ್ತದೆ. ಅದಕ್ಕಾಗಿ ಆಧಾರ್​ ಕಾರ್ಡ್​ ತರಲು ಹೇಳುತ್ತಾರೆ ಅಧಿಕಾರಿಗಳು. ಮನೆಗೆ ಮಾಸ್ಕ್​ ಹಾಕಿಕೊಂಡು ಬರುವ ಸಹನಾ ಅಲ್ಲಿ ತನ್ನದೇ ಶ್ರದ್ಧಾಕಾರ್ಯ ನಡೆಯುತ್ತಿರುವುದನ್ನು ನೋಡುತ್ತಾಳೆ. ಅವಳಿಗೆ ಏನು ಮಾಡುವುದು ತಿಳಿಯುವುದಿಲ್ಲ. ಅಲ್ಲಿಯೇ ಇದ್ದ ಪುಟ್ಟಕ್ಕನ ಸವತಿ ರಾಜಿ ಸಹನಾ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡುತ್ತಾಳೆ. ಅವಳ ಶೀಲವನ್ನು ಶಂಕಿಸುವಂಥ ಮಾತನಾಡುತ್ತಾಳೆ. ಸಾಲದು ಎನ್ನುವುದಕ್ಕೆ ಪುಟ್ಟಕ್ಕನ ಮನಸ್ಸನ್ನು ನೋಯಿಸುತ್ತಾಳೆ.

ರಾಮ ಕರಿಮಣಿ ಕಟ್ಟಾಗೋಯ್ತು! ಆದರೂ ಸೀತೆಯ ಬದುಕಲ್ಲಿ ಮತ್ತೆ ಬರ ಸಿಡಿಲು- ಯಾರೀ ಹೊಸ ಲೇಡಿ?

ಇದನ್ನು ತೆರೆಮನೆಯಲ್ಲಿ ನೋಡುತ್ತಿದ್ದ ಸಹನಾಗೆ ಸಿಟ್ಟು ಬರುತ್ತದೆ. ಹೇಗಾದರೂ ಮಾಡಿ ರಾಜಿಗೆ ಬುದ್ಧಿಕಲಿಸಬೇಕು ಎಂದುಕೊಳ್ಳುತ್ತಾಳೆ. ರಾತ್ರಿ ರಾಜಿ ಮಲಗಿದಾಗ ಮನೆ ಬಾಗಿಲು ಬಡಿಯುತ್ತಾಳೆ. ರಾಜಿ ಹೊರಕ್ಕೆ ಬಂದಾಗ ಯಾರೂ ಕಾಣಿಸುವುದಿಲ್ಲ. ಅವಳು ವಾಪಸ್​ ಹೋಗುವಾಗ ಸಹನಾ ಅವಳ ಜಡೆ ಹಿಡಿದು ಎಳೆಯುತ್ತಾಳೆ. ಭಯದಿಂದ ಹಿಂದಿರುಗಿ ನೋಡಿದ ರಾಜಿ ಸಹನಾಳನ್ನು ನೋಡಿ ದಿಗ್ಭ್ರಮೆಗೊಳ್ಳುತ್ತಾಳೆ. ಏಕೆಂದರೆ ಅವಳು ಕೂಡ ಸಹನಾ ಸತ್ತು ಹೋಗಿದ್ದಾಳೆ ಎಂದುಕೊಂಡಿರುತ್ತಾಳೆ. ಇನ್ನು ನನ್ನ ಅವ್ವನ ಮನೆಯವರಿಗೆ ತೊಂದರೆ ಕೊಟ್ಟರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ ಎಂದು ಹೆದರಿಸುತ್ತಾಳೆ ಸಹನಾ. ಜೀವ ಇದ್ದರೆ ಸಾಕು ಎಂದುಕೊಳ್ಳುವ ರಾಜಿ ಆಯ್ತು ಏನೂ ಮಾಡುವುದಿಲ್ಲ ಎನ್ನುತ್ತಾಳೆ.

ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಭೇಷ್​ ಭೇಷ್​ ಸಹನಾ ಎನ್ನುತ್ತಿದ್ದಾರೆ ನೆಟ್ಟಿಗರು. ಈ ಹಿಂದೆ ಸಹನಾಳನ್ನು ನೆನೆದು ಪುಟ್ಟಕ್ಕ ಕಣ್ಣೀರು ಹಾಕುತ್ತಿದ್ದ ಸಂದರ್ಭದಲ್ಲಿ ನೆಟ್ಟಿಗರು, ಸಹನಾಳಿಗೆ  ಪ್ಲೀಸ್​ ಅವ್ವನಿಗೆ ಕಾಲ್​ ಮಾಡು ಸಹನಾ. ನಿನ್ನ ಅವ್ವನ ಕಣ್ಣೀರು ನೋಡಲು ಆಗ್ತಿಲ್ಲ ಎನ್ನುತ್ತಿದ್ದರು. ಅದಕ್ಕೆ ಮತ್ತೆ ಕೆಲವರು ಡೈರೆಕ್ಟರ್​ ಹೇಳಿದ ಹಾಗೆ ಸಹನಾ ಕೇಳ್ತಾಳೆ ಬಿಡಪ್ಪ, ನೀನ್ಯಾಕೆ ತಲೆ ಕೆಡಿಸಿಕೊಳ್ಳುತ್ತಿ ಎಂದು ಕಾಳೆಯುತ್ತಿದ್ದರು.  ಈಗ ಹೀಗೇ ಭೂತ ಆಗಿ ರಾಜೀನ ಕಾಡುತ್ತಲೇ ಇರು ಅಂತಿದ್ದಾರೆ ಅಭಿಮಾನಿಗಳು. 

ಮಳೆಗಾಲದಲ್ಲಿ ಡೆಲಿವರಿ ಬಾಯ್​ನ ನೆನೆದ ನಟಿ ಪರಿಣಿತಿ ಚೋಪ್ರಾ! ನಾಚಿಕೆಯಾಗ್ಬೇಕು ಅಂದ ನೆಟ್ಟಿಗರು

click me!