ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!

ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!

Published : May 09, 2026, 04:42 PM IST

ಸಿನಿಮಾ ಸೆಲೆಬ್ರಿಟಿಗಳಿಗೆ ಪಾಪರಾಜಿಗಳ ಕಾಟಕ್ಕೆ ಸಾಕಾಗಿ ಹೋಗಿದೆ. ಸಿಕ್ಕ ಸಿಕ್ಕಲ್ಲಿ ಮೊಬೈಲ್​ ಆನ್ ಮಾಡಿಕೊಂಡು ಮನಸೋ ಇಚ್ಚೆ ನಟ ನಟಿಯರ ವಿಡಿಯೋ ಚಿತ್ರೀಕರಿಸಿ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಕಿರಿ ಕಿರಿ ಮಾಡುತ್ತಿದ್ದಾರೆ.

ಸಿನಿಮಾ ಸೆಲೆಬ್ರಿಟಿಗಳಿಗೆ ಪಾಪರಾಜಿಗಳ ಕಾಟಕ್ಕೆ ಸಾಕಾಗಿ ಹೋಗಿದೆ. ಸಿಕ್ಕ ಸಿಕ್ಕಲ್ಲಿ ಮೊಬೈಲ್​ ಆನ್ ಮಾಡಿಕೊಂಡು ಮನಸೋ ಇಚ್ಚೆ ನಟ ನಟಿಯರ ವಿಡಿಯೋ ಚಿತ್ರೀಕರಿಸಿ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಕಿರಿ ಕಿರಿ ಮಾಡುತ್ತಿದ್ದಾರೆ. ಇದರ ವಿರುದ್ಧ ನಮ್ಮ ಕನ್ನಡದ ನಟಿ ಸಪ್ತಮಿ ಗೌಡ ಸಿಕ್ಕಾಪಟ್ಟೆ ಸಿಟ್ಟಾಗಿದ್ದು, ದೊಡ್ಡ ವಿವಾದ ಆಗಿತ್ತು. ಇದೀಗ ಬಾಲಿವುಡ್​ ನಟ ರಣಬೀರ್​ ಕಪೂರ್​​ ಕೆಂಡಕಾರಿದ್ದಾರೆ. ಈಗೀಗ ಈ ಸಿನಿಮಾ ನಟ ನಟಿಯರಿಗೆ ಹೊರ ಪ್ರಪಂಚಕ್ಕೆ ಹೊರಳೋದೇ ದೊಡ್ಡ ಸಂಕಷ್ಟ ಆಗಿದೆ. ಮನೆಯಿಂದ ಆಚೆ ಕಾಲಿಟ್ರೆ ಸಾಕು ರಾಶಿ ರಾಶಿ ಮೊಬೈಲ್​ ಕ್ಯಾಮೆರಾಗಳು ಸುತ್ತುವರೆಯುತ್ತಿವೆ.

ಇದರಿಂದ ಸಿಕ್ಕಾಪಟ್ಟೆ ಕಿರಿ ಕಿರಿ ಆಗ್ತಿರೋ ನಟ ನಟಿಯರು ಮನಸ್ಸಿಗೆ ಬಂದಂತೆ ಬೈಯುತ್ತಿದ್ದಾರೆ. ಇದೀಗ ಬಾಲಿವುಡ್ ನಟ ರಣವೀರ್​ ಕಪೂರ್ ಕೂಡ ಅದೇ ಕೆಲಸ ಮಾಡಿದ್ದು. ಹೌದು, ಸಧ್ಯ ಬಾಲಿವುಡ್​​ನಲ್ಲಿ ರಾಮಾಯಣ ಸಿನಿಮಾ ಮಾಡುತ್ತಿರೋ ರಾಮ ರಣಬೀರ್​ ಕಪೂರ್​ ತನ್ನ ಕುಟುಂಬ ಕರೆದುಕೊಂಡು ಔಟಿಂಗ್ ಹೋಗಿದ್ದಾರೆ. ಆದ್ರೆ ಅಲ್ಲಿ ರಣಬೀರ್​​ ಪತ್ನಿ ಅಲಿಯಾರನ್ನ ಸುತ್ತುವರೆದಿದ್ದು, ಅಭಿಮಾನಿಗಳಲ್ಲ.. ಬದಲಾಗಿ ಹೆಂಗೆ ಬೇಕೋ ಹಂಗೆ ವೀಡಿಯೋ ಚಿತ್ರಿಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡೋ ಪಾಪರಾಜಿಗಳು. ಇವರನ್ನ ನೋಡುತ್ತಿದ್ದಂತೆ ಸಿಟ್ಟಿಗೆದ್ದ ರಣಬೀರ್​​ ಸರಿಯಾಗೆ ಆವಾಜ್ ಹಾಕಿದ್ದಾರೆ.

ಆ ವೀಡಿಯೋ ಕೂಡ ವೈರಲ್ ಆಗುತ್ತಿದೆ.  ಈ ಪಾಪರಾಜಿ ಸಂಸ್ಕೃತಿ ಕನ್ನಡ ಚಿತ್ರರಂಗದಲ್ಲು ಅಗಾಧವಾಗಿ ಬೇರು ಬಿಡುತ್ತಿದೆ. ಇದರಿಂದ ಕನ್ನಡದ ಹಲವು ನಟಿಯರು ಕಿರಿಕಿರಿ ಅನುಭವಿಸಿದ್ದಾರೆ. ಇದರ ವಿರುದ್ಧ ಇತ್ತೀಚೆಗೆ ನಟಿ ಸಪ್ತಮಿ ಗೌಡ ಕೂಡ ಬೇಸರಗೊಂಡಿದ್ರು. ಪಾಪರಾಜಿಗಳಿಂದ ನಮ್ಮ ಗೌರವ ಹಾಳಾಗುತ್ತಿದೆ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ರು. ಆದ್ರೆ ಅವರ ಹಾವಳಿ ಮಾತ್ರ ಕಡಿಮೆ ಆಗಿಲ್ಲ. ಇನ್ನು ಬಾಲಿವುಡ್​ ಸ್ಟಾರ್ಸ್​ ವಿಚಾರಕ್ಕೆ ಬಂದ್ರೆ ಈ ಜೂಮ್ ಹಾಕೋರ ಕಾಟ ತಪ್ಪಿದ್ದಲ್ಲ.. ತಪ್ಪೋದು ಇಲ್ಲ ಅನ್ನೋದು ನಿಜ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more