
ಬಿಗ್ ಬಾಸ್ ಮನೆ ಪ್ರವೇಶ ಪಡೆದಿದ್ದ ಸ್ಪರ್ಧಿಗಳು ಮೊದಲ ದಿನವೇ ಸುಪ್ರೀಂ ಕೋರ್ಟಿನ 377ನೇ ನಿಯಮದ ಬಗ್ಗೆ ಚರ್ಚೆಯಾಯಿತು. ನನ್ನ ನೀನು ಗೆಲ್ಲಲಾರೆ ಸಾಂಗ್ ಮೂಲಕ ಆರಂಭವಾದ ಮನೆಯಲ್ಲಿ ಬಿಗ್ ಬಾಸ್ ನೀಡಿದ ನಾಮಿನೇಶನ್ ಟಾಸ್ಕ್ ತಲೆಬಿಸಿಹುಟ್ಟುಹಾಕಿತು.
ಬಿಗ್ ಬಾಸ್ ಮನೆ ಪ್ರವೇಶ ಮಾಡಿದ ಸ್ಪರ್ಧಿಗಳು ಯಾರ್ಯಾರು?
ಶಶಿ ಮತ್ತು ರೀಮಾ ನಡುವಿನ ವಾದದ ವೇಳೆ ಮಧ್ಯೆ ಮಾತನಾಡಿದ ಆ್ಯಂಡಿಯನ್ನು ಸುಮ್ಮನಿರಿಸಲು ಜಯಶ್ರೀ ಜಾಗದಿಂದ ಎದ್ದು ಬಂದರು. ಬಂದಿದ್ದಲ್ಲದೇ ಅವರು ಮಾತನಾಡುತ್ತಿದ್ದ ವೇಳೆ ನೀನು ಮಾತನಾಡಬಾರದು ಎಂದು ಹೇಳಿದ್ದಲ್ಲದೇ ಸಲುಗೆಯಿಂದ ಒಂದು ಏಟು ನೀಡಿದರು. ಇದೇ ವಿಚಾರ ಮನೆಯಲ್ಲಿ ಚರ್ಚೆ ಹುಟ್ಟುಹಾಕಿತು. ರಶ್ಮಿ ಸಹ ಆ್ಯಂಡಿ ಬೆಂಬಲಕ್ಕೆ ಧಾವಿಸಿ ಜಯಶ್ರೀ ಜತೆ ವಾದ ಮಾಡಿದರು.
ಕನ್ನಡ ಬಿಗ್‌ಬಾಸ್ ದಿಟ್ಟ ನಿರ್ಧಾರ, ಮನೆ ಪ್ರವೇಶ ಮಾಡಿದ ಗೇ!
ಇಷ್ಟು ಸೀಸನ್ ಗಳಲ್ಲಿ ಸ್ಪರ್ಧಿಗಳ ನಡುವೆ ತನ್ನಿಂದ ತಾನೇ ವಾದ ಹುಟ್ಟಿಕೊಳ್ಳುತ್ತಿತ್ತು. ಆದರೆ ಈ ಸಾರಿ ಬಿಗ್ ಬಾಸ್ ತಾವೇ ಮುಂದಾಗಿ ಇಬ್ಬರು ನಡುವೆ ವಾದ ಹುಟ್ಟುಹಾಕಿಸಿ ನಾಮಿನೇಶನ್ ಪ್ರಕ್ರಿಯೆ ನಡೆಸಿದ್ದು ವಿಶೇಷ. ತಾವು ಯಾಕೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಬೇಕು ಎಂದು ಅವರವರೇ ಸಮರ್ಥನೆ ಮುಂದಿಟ್ಟುಕೊಂಡರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.