
ಬೆಂಗಳೂರು (ಅ.22): ಅತ್ತ ಬಾಲಿವುಡ್‌ನಲ್ಲಿ ತನುಶ್ರೀ ದತ್ತಾ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ದಾಖಲಿಸುತ್ತಿದ್ದಂತೆ, ಎಲ್ಲೆಡೆ ಈ ಕೂಗು ಕೇಳಿ ಬರುತ್ತಿದೆ. ತೆಲಗು ಚಿತ್ರರಂಗದಲ್ಲಿ ಸದಾ ಕೇಳಿ ಬರುವ ಈ ಆರೋಪ, ಅಲ್ಲಿ ಗುಲ್ಲೆಬ್ಬಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಬದಲಾಗಿ ಸ್ಯಾಂಡಲ್‌ವುಡ್ ಅನ್ನು #MeToo ಚಂಡಮಾರುತ ಅಪ್ಪಳಿಸುತ್ತಿದೆ.
'ಲೂಸಿಯಾ' ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶೃತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಈ ನಟನೊಂದಿಗೆ 'ವಿಸ್ಮಯ' ಚಿತ್ರ ಮಾಡುವಾಗಲೇ, ನನಗೆ ಕೆಟ್ಟ ಅನುಭವವಾಗಿದೆ ಎನ್ನುವ ಮೂಲಕ ನಟನ ಮತ್ತೊಂದು ಮುಖವನ್ನು ತೆರೆದಿಡಲು ಯತ್ನಿಸಿದ್ದಾರೆ.
#MeTooಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಶೃತಿ ಆರೋಪದ ಬೆನ್ನಲ್ಲೇ ಪರ, ವಿರೋಧ ಹೇಳಿಕೆಗಳು ಕೇಳಿ ಬರುತ್ತಿದ್ದು, ಧರ್ಮ, ಪಂಥದ ಬಣ್ಣವೂ ಈ ಪ್ರಕರಣಕ್ಕೆ ತಗುಲಿಕೊಳ್ಳುತ್ತಿದೆ. ಶೃುತಿ ಆರೋಪ ಹಾಗೂ ಅವರ ಬೆನ್ನಿಗೆ ನಿಂತ ಪ್ರಕಾಶ್ ರೈ, 'ಆ ದಿನಗಳು' ಚೇತನ್, ಕವಿತಾ ಲಂಕೇಶ್.. ಹೀಗೆ ಬಹುತೇಕರು ಎಡ ಪಂಥೀಯರ ಸಾಲಿನಲ್ಲಿ ಗುರುತಿಸಿಕೊಂಡಿದ್ದು, ಇದು ಬೇರೆಯದ್ದೇ ರೂಪ ತಾಳುತ್ತಿದೆ.
ಚೇತನ್ ಹಾಗೂ ಅರ್ಜುನ್ ಸರ್ಜಾ ನಡುವಿನ ಹಣದ ವ್ಯವಹಾರದ ಹಿನ್ನೆಲೆಯಲ್ಲಿ ಶೃತಿಯಿಂದ ಇಂಥದ್ದೊಂದು ಆರೋಪ ಮಾಡಿಸಲಾಗುತ್ತಿದೆ ಎಂಬ ಆರೋಪವೂ ಇದೆ. ಇದೊಂದು ಮೋದಿ ವಿರೋಧಿ, ಆರ್‌ಎಸ್‌ಎಸ್ ವಿರೋಧಿ, ಬಿಜೆಪಿ ವಿರೋಧ ಕುತಂತ್ರ ಎಂಬ ಕೂಗು ಕೇಳಿ ಬರುತ್ತಿದ್ದು, ಸತ್ಯಾಸತ್ಯತೆ ಎನೆಂಬುವುದಿನ್ನೂ ಬಯಲಾಗಬೇಕಿದೆ.
ನಿಜಕ್ಕೂ ಯಾವುದು #MeToo?
"
ಒಳ್ಳೆ ಉದ್ದೇಶದಿಂದ ಆರಂಭವಾದ ಅಭಿಯಾನವೊಂದು ವಿಭಿನ್ನ ದೃಷ್ಟಿಕೋನವನ್ನು ಪಡೆದುಕೊಳ್ಳುತ್ತಿದೆ. ಅಭಿಯಾನದ ಉದ್ದೇಶವೇ ಹಾಳಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಇದನ್ನು ಕೆಲವರು ಬ್ಲ್ಯಾಕ್ ಮೇಲ್ ತಂತ್ರವನ್ನಾಗಿಸಿಕೊಳ್ಳುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಈ ಅಭಿಯಾನದ ನೈಜ ಕಾಳಜಿ ಇರುವ, ಸೂಕ್ತ ರೀತಿಯಲ್ಲಿ ನೊಂದವರಿಗೆ ನ್ಯಾಯ ಸಿಗಬೇಕೆಂದು ಬಯಸುವ 'ಎ ಕೇಜ್ ಆಫ್ ಡಿಸೈರ್ಸ್,' 'ಡನ್ ವಿಥ್ ಮೆನ್,' 'ಐ ಆ್ಯಮ್ ಬಿಗ್, ಸೋ ವಾಟ್?..' ಮುಂತಾದ ಪುಸ್ತಕಗಳ ಲೇಖಕಿ ಶುಚಿ ಸಿಂಗ್ ಕಾರ್ಲಾ #MeTooಗೆ ವ್ಯಾಖ್ಯಾನ ನೀಡಿದ್ದು ಹೀಗೆ...
"
'ನಿಂದನೀಯ ಸಂಬಂಧವೊಂದು ಎಷ್ಟೇ ಕೆಟ್ಟದಾಗಿದ್ದರೂ, #MeToo ಆಗೋಲ್ಲ. ಹಳಸಿದ ಪ್ರೇಮ ಸಂಬಂಧವೊಂದು #MeToo ಅಲ್ಲ. ಪುರುಷನೊಬ್ಬ ನಿಮ್ಮನ್ನು ಫ್ಲರ್ಟ್ ಮಾಡಲು ಯತ್ನಿಸಿದರೆ ಅದೂ ಲೈಂಗಿಕ ದೌರ್ಜನ್ಯವಲ್ಲ. ಒಂದು ಕಾಲದಲ್ಲಿ ಲಾಭ ತಂದು ಕೊಟ್ಟಂಥ ಒಪ್ಪಿಗೆಯುತ ಸಂಬಂಧ, ಆಮೇಲೆ ಮೀ ಟೂ ಎಂದೆನಿಸಿಕೊಳ್ಳುವುದಿಲ್ಲ. ಈ ಅಭಿಯಾನವನ್ನು ನಿಸ್ಸಾರಗೊಳಿಸಬೇಡಿ,' ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಈ ಚಂಡಮಾರುತ ಯಾರು, ಯಾರನ್ನು ಅಪ್ಪಳಿಸಲಿದೆ? ಇದರ ಹೊಡೆತವನ್ನು ತಡೆದುಕೊಳ್ಳುವ ಶಕ್ತಿ ಯಾರಿಗಿದೆ?...ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.