ಕಾಡು ಜನರ ಟಾಸ್ಕ್..ಹೆಣ್ ಮಕ್ಕಳ ಮೇಲೆ ಕೈ ಹಾಕಿದ್ರಾ ಆನಂದ್?

Published : Oct 30, 2018, 10:37 PM ISTUpdated : Oct 30, 2018, 10:41 PM IST
ಕಾಡು ಜನರ ಟಾಸ್ಕ್..ಹೆಣ್ ಮಕ್ಕಳ ಮೇಲೆ ಕೈ ಹಾಕಿದ್ರಾ ಆನಂದ್?

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ ಹೊಸ ಟಾಸ್ಕ್ ಶುರುವಾಗಿದೆ. ಎರಡನೇ ವಾರದ ಲಕ್ಸುರಿ ಬಜೆಟ್ ಟಾಸ್ಕ್ ‘ಬಾಗಿಲು ತೆಗೆಯೇ ಶೇಷಮ್ಮಾ’ ಸಖತ್ ಮಜಾ ಕೊಡುತ್ತಿದೆ. ನಾಡಿನಲ್ಲಿದ್ದವರನ್ನು ಬಿಗ್ ಬಾಸ್ ಕಾಡಿಗೆ ಕಳುಹಿಸಿದ್ದಾರೆ. ಕಾಡಿನಿಂದ ನಾಡಿಗೆ ಬಂದರೆ ಸೋಲು ಎಂಬ ತಂತ್ರವನ್ನು ಹಣೆದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹೊಸ ಟಾಸ್ಕ್ ಶುರುವಾಗಿದೆ. ಎರಡನೇ ವಾರದ ಲಕ್ಸುರಿ ಬಜೆಟ್ ಟಾಸ್ಕ್ ‘ಬಾಗಿಲು ತೆಗೆಯೇ ಶೇಷಮ್ಮಾ’ ಸಖತ್ ಮಜಾ ಕೊಡುತ್ತಿದೆ. ನಾಡಿನಲ್ಲಿದ್ದವರನ್ನು ಬಿಗ್ ಬಾಸ್ ಕಾಡಿಗೆ ಕಳುಹಿಸಿದ್ದಾರೆ. ಕಾಡಿನಿಂದ ನಾಡಿಗೆ ಬಂದರೆ ಸೋಲು ಎಂಬ ತಂತ್ರವನ್ನು ಹಣೆದಿದ್ದಾರೆ.

ಸೋಮವಾರದ ನಾಮಿನೇಶನ್ ನಂತರ, ಲವ್ ಸ್ಟೋರಿಗಳ ನಂತರ ಪಕ್ಕಾ ಟಾಸ್ಕ್ ಶುರುವಾಗಿದೆ. ಕಾಡು ಜನರಂತೆ ಬದುಕಬೇಕು ಮನೆ ಹೊರಗೆ ಇರಬೇಕು..ಒಳಗೆ ಪ್ರವೇಶ  ಮಾಡಿದರೆ ಸೋಲು ಎಂಬ ನಿಯಮಕ್ಕೆ ಅನುಸಾರವಾಗಿ ನಾಯಕ ರವಿ ಒಳಗೊಂಡಂತೆ ಎಲ್ಲ ಸ್ಪರ್ಧಿಗಳು ಮನೆ ಹೊರಗೆ ಮಲಗಿದ್ದಾರೆ. ಡ್ರೆಸ್ ಬದಲಿಸಿದ ಕಾರಣಕ್ಕೆ ಕವಿತಾ ಗೌಡ, ನಿಯಮ್ ಉಲ್ಲಂಘಿಸಿದ್ದಕ್ಕೆ ಆಟದಿಂದ ಹೊರಬಿದ್ದಿದ್ದಾರೆ.

ಮತ್ತೆ 11 ಜನ ನಾಮಿನೇಟ್, Rapid ರಶ್ಮಿಗೆ ಎಲ್ಲೆಲ್ಲೂ ವಿರೋಧಿಗಳೇ!

ಟಾಸ್ಕ್ ಆರಂಭವಾದಾಗ ಸಖತ್ ಗಲಾಟೆ ನಡೆಯಿತು. ಹೆಣ್ಣು ಮಕ್ಕಳ ಮೇಲೆ ಬೇಕೆಂತಲೇ ಕೈ ಹಾಕುತ್ತಿದ್ದಾನೆ ಎಂಬ ಆರೋಪ ಬಸ್ ಕಂಡಕ್ಟರ್ ಆನಂದ ಮಾಲಗತ್ತಿ ಮೇಲೆ ಕೇಳಿಬಂತು. ರೀಮಾ ಗಂಭೀರಬಾಗಿ ಆರೋಪ ಮಾಡಿದರು. ಇನ್ನೊಂದು ಕಡೆ ಸಂಗೀತ ನಿರ್ದೇಶಕ ನವೀನ್ ಮತ್ತು ಸ್ನೇಹಾ ಸಖತ್ತಾಗೆ ಕಚ್ಚಾಡಿಕೊಂಡರು. ಆನಂದ್ ಗೆ ಏಟು: ಎರಡು ಗುಂಪುಗಳ ಕಿತ್ತಾಟದಲ್ಲಿ ಆನಂದ್ ಗೆ ತೊಡೆಯ ಮೇಲೆ ಗಾಯವೊಂದು ಆಗಿದ್ದು ಉಳಿದ ಸ್ಪರ್ಧಿಗಳು ಮೇಲಕ್ಕೆ ಕುಳ್ಳಿರಿಸಿದರು.

ಸಕಲ ಬಿಗ್ ಬಾಸ್ ಮನೆ ಕತೆಗಳು.. ಒಂದಕ್ಕಿಂತ ಒಂದು ಭಿನ್ನ,,!

ಒಟ್ಟಿನಲ್ಲಿ ಬೆಡ್ ಮೇಲೆ ಪವಡಿಸುತ್ತಿದ್ದ ಬಿಗ್ ಬಾಸ್ ಗಳು ಇಂದು ಮನೆ ಹೊರಗಡೆ ನಿದ್ದರಿಸಿದರು. ಬಿಗ್ ಬಾಸ್ ಕೊಟ್ಟ ಬಿರಿಯಾನಿ ಆಮಿಷಕ್ಕೂ ಬಲಿಯಾಗಲಿಲ್ಲ. ಹೊಟ್ಟೆಯಿಂದ ಆಲೋಚನೆ ಮಾಡದೇ ತಲೆಯಿಂದ ಆಲೋಚನೆ ಮಾಡುತ್ತ ಉಪವಾಸವೇ ಮಲುಗಿದ್ರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2025ರ IMDbಯ ಟಾಪ್ 10 ಜನಪ್ರಿಯ ಚಿತ್ರಗಳ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಪರಿಮಳ
ರಾಜ್ಯದ ಗಡಿ ಆನೇಕಲ್‌ನಲ್ಲಿ ದರ್ಶನ್ 'ಡೆವಿಲ್‌'ಗೆ ಹೀಗೆಲ್ಲಾ ಆಗ್ತಿದ್ಯಾ?