ನಟಿ ಅನುಷ್ಕಾ ಶೆಟ್ಟಿ ಮದುವೆಯಾಗ್ತಾ ಇದ್ದಾರಾ? ಇನ್ಸ್ಟಾಗ್ರಾಮ್ ಪೋಸ್ಟ್’ನಲ್ಲಿ ಮದುವೆ ಸುಳಿವು ಕೊಟ್ಟರಾ ಅನುಷ್ಕಾ ಶೆಟ್ಟಿ | ನಿಜನಾ ಈ ಸುದ್ದಿ?
ಮುಂಬೈ (ಅ. 30): ದಕ್ಷಿಣ ಭಾರತದ ಖ್ಯಾತ ನಟಿ, ಕರ್ನಾಟಕದ ದಕ್ಷಿಣ ಕನ್ನಡ ಮೂಲದ ಅನುಷ್ಕಾ ಶೆಟ್ಟಿ ಶೀಘ್ರವೇ ವಿವಾಹವಾಗಲಿದ್ದಾರೆಯೇ? ಇನ್ಸ್ಟಾಗ್ರಾಂನಲ್ಲಿ ಅನುಷ್ಕಾ ಹಾಕಿರುವ ಹೊಸ ಪೋಸ್ಟ್ ಇಂಥದ್ದೊಂದು ಸುಳಿವನ್ನು ನೀಡಿದೆ.
ಹೊಸ ಪೋಸ್ಟ್‌ನಲ್ಲಿ ಅನುಷ್ಕಾ ತಮ್ಮ ಕಾಲಿನ ಚಿತ್ರವನ್ನು ಹಾಕಿಕೊಂಡಿದ್ದು, ಅದರಲ್ಲಿ ಚಿಕ್ಕ ಗಿಡವೊಂದರ 3 ಎಲೆಗಳು ಅವರ ಎಡಗಾಲಿನ ಉಂಗುರದ ಬೆರ ಳನ್ನು ಆವರಿಸಿ ಕೊಂಡಿವೆ. ಇದು ನೋಡಲು ಉಂಗುರ ತೊಟ್ಟಂತೆ ಕಾಣುತ್ತದೆ. ವಿವಾಹಿತ ಮಹಿಳೆಯರು ಇದೇ ಬೆರಳಿಗೆ ಉಂಗುರ ತೊಡುವ ಹಿನ್ನೆಲೆಯಲ್ಲಿ, ಇದು ಅವರು ತಮ್ಮ ವಿವಾಹದ ಬಗ್ಗೆ ನೀಡಿರುವ ಸುಳಿವು ಎಂದು ಆನ್‌ಲೈನ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದೆ. ಆದರೆ ಅನುಷ್ಕಾ ಕುಟುಂಬ ಮೂಲಗಳು ಇದು ಗಾಸಿಪ್ ಎಂದಿವೆ.