ನೀವು ಇಲ್ಲಿಯವರೆಗೂ ಪುನೀತ್ ರಾಜ್‌ಕುಮಾರ್ ಅವರನ್ನು ಚಿತ್ರಗಳಲ್ಲಿ ಪಾತ್ರವಾಗಿ ನೋಡಿದ್ದೀರಿ. ‘ಗಂಧದಗುಡಿ’ಯಲ್ಲಿ ಅವರು ಅವರಾಗಿಯೇ ಕಾಣಿಸಿಕೊಂಡಿದ್ದಾರೆ. ಮೇಕಪ್ ಇಲ್ಲ, ಪವರ್‌ಸ್ಟಾರ್ ಎನ್ನುವ ಪಟ್ಟಇಲ್ಲದ ಪುನೀತ್ ಇಲ್ಲಿದ್ದಾರೆ.
ಪುನೀತ್ ಅವರ ‘ಗಂಧದಗುಡಿ’ ಸಿನಿಮಾ ತೆರೆ ಮೇಲೆ ಬರುತ್ತಿದೆ. ಈ ಹೊತ್ತಿನಲ್ಲಿ ಈ ಚಿತ್ರದ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿರುವ ಮಾತುಗಳು ಇಲ್ಲಿವೆ.
1. ‘ಗಂಧದಗುಡಿ’ ಪ್ರೀ- ರಿಲೀಸ್ ಈವೆಂಟ್ ಮಾಡಿದ್ದು, ವಿಶೇಷವಾಗಿ ಅಭಿಮಾನಿಗಳಿಗಾಗಿ. ಅಭಿಮಾನಿಗಳು, ಸಾರ್ವಜನಿಕರ ಜತೆಗೆ ಕನ್ನಡ ಚಿತ್ರರಂಗವನ್ನು ಆಹ್ವಾನಿಸಿದ್ದೆ, ಎಲ್ಲರೂ ಪ್ರೀತಿಯಿಂದ ಬಂದಿದ್ದು ನೋಡಿ ಖುಷಿ ಮತ್ತು ಸಂತೋಷ ಆಯಿತು. ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ನಾನು ಮತ್ತು ನಮ್ಮ ಕುಟುಂಬ ಚಿರಋುಣಿ ಆಗಿರುತ್ತೇವೆ.
2. ಈ ಚಿತ್ರಕ್ಕೆ ‘ಗಂಧದಗುಡಿ’ ಅಂತ ಹೆಸರು ಹೊಳೆದಿದ್ದು ಸಡನ್ನಾಗಿ. ಡಾ ರಾಜ್‌ಕುಮಾರ್ ಅವರು, ಶಿವಣ್ಣ ಅವರು ‘ಗಂಧದಗುಡಿ’ ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಅದು ಕತೆಯಾಗಿ ಬಂದಿತ್ತು. ಆ ಚಿತ್ರಗಳ ಬಗ್ಗೆ ಮಾತನಾಡುವಾಗ ಈ ಚಿತ್ರಕ್ಕೂ ಅದೇ ಹೆಸರು ಇಟ್ಟರೆ ಹೇಗೆ ಅನಿಸಿತು, ಪುನೀತ್ ಅವರ ಈ ದೃಶ್ಯ ಪಯಣಕ್ಕೂ ‘ಗಂಧದಗುಡಿ’ ಅಂತ ಹೆಸರಿಟ್ಟೆವು.
3. ಅಪ್ಪು ಅವರ ನ್ಯಾಚುರಲ್ ಜರ್ನಿಯ ಕತೆ ಇಲ್ಲಿದೆ. ಅಪ್ಪು ಕಣ್ಣಿನ ಮೂಲಕ ಕರ್ನಾಟಕ ಮತ್ತು ನಾಡಿನ ಪ್ರಕೃತಿಯ ವೈಭವವನ್ನು ನೋಡುತ್ತೀರಿ. ಇದೇ ಈ ಚಿತ್ರದ ವಿಶೇಷತೆ.
Gandhada Gudi ಸಿನಿಮಾ ಬಗ್ಗೆ ಪುನೀತ್ ಪತ್ನಿ ಮಾತು: ಮೊದಲ ಬಾರಿಗೆ ಅಪ್ಪು ಬಗ್ಗೆ ಸಂದರ್ಶನ ನೀಡಿದ ಅಶ್ವಿನಿ
4. ನೀವು ಇಲ್ಲಿಯವರೆಗೂ ಪುನೀತ್ ರಾಜ್‌ಕುಮಾರ್ ಅವರನ್ನು ಚಿತ್ರಗಳಲ್ಲಿ ಪಾತ್ರವಾಗಿ ನೋಡಿದ್ದೀರಿ. ‘ಗಂಧದಗುಡಿ’ಯಲ್ಲಿ ಅವರು ಅವರಾಗಿಯೇ ಕಾಣಿಸಿಕೊಂಡಿದ್ದಾರೆ. ಮೇಕಪ್ ಇಲ್ಲ, ಪವರ್‌ಸ್ಟಾರ್ ಎನ್ನುವ ಪಟ್ಟಇಲ್ಲದ ಪುನೀತ್ ಇಲ್ಲಿದ್ದಾರೆ.
5. ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನಬೆಟ್ಟ, ಕಾಳಿಗುಡಿ... ಹೀಗೆ ಹಲವು ಕಡೆ ಚಿತ್ರೀಕರಣ ಮಾಡಿದ್ದಾರೆ. ನಾನು ಕಾಳಿಗುಡಿ ರಿವರ್‌ನಲ್ಲಿ ಶೂಟಿಂಗ್ ಮಾಡಬೇಕಾದರೆ ಹೋಗಿದ್ದೆ. ಅಪ್ಪುನೇ ಫೋನ್ ಮಾಡಿ, ಇಲ್ಲಿಗೆ ನೀನು ಬರಲೇಬೇಕು. ತುಂಬಾ ಚೆನ್ನಾಗಿದೆ. ಗುಡ್ಡದ ಮೇಲೆ ಹತ್ತಿ ಅಲ್ಲಿಂದ ನಿನಗೆ ಫೋನ್ ಮಾಡುತ್ತಿದ್ದೇನೆ. ಪ್ಲೀಸ್ ಕಂ ಅಂದ್ರು. ಅವರು ಒತ್ತಾಯ ಮಾಡಿದ ಮೇಲೆ ಹೋದೆ. ಬೆಳಗ್ಗಿನ ಜಾವ 4.30ಕ್ಕೆ ಗುಡ್ಡ ಹತ್ತಕ್ಕೆ ಶುರು ಮಾಡಿದ್ದು 6.30ರವರೆಗೂ ಟ್ರೆಕ್ಕಿಂಗ್ ಆಯಿತು. ನಂತರ ಪಾತಗುಡಿ ಎನ್ನುವ ಸಣ್ಣ ಹಳ್ಳಿಯಲ್ಲಿ ಊಟ ಮಾಡಿದೆವು. ಇದು ನನ್ನ ಜೀವನದಲ್ಲಿ ಮರೆಯಲಾಗದ ಪಯಣ ಮತ್ತು ಟ್ರೆಕ್ಕಿಂಗ್.
6. ‘ಗಂಧದ ಗುಡಿ’ ಸಿನಿಮಾ ಎಂದಾಗ ನನಗೆ ಸಂಭ್ರಮವೂ ಹೌದು. ಬೇಸರವೂ ಹೌದು. ಯಾಕೆಂದರೆ ಇಂಥದ್ದೊಂದು ಸಿನಿಮಾ ಮಾಡಿದ್ದು ಮತ್ತು ಅದನ್ನು ಜನ ಸ್ವೀಕರಿಸುತ್ತಿರುವ ರೀತಿ ನೋಡಿ ಹೆಮ್ಮೆ ಮತ್ತು ಖುಷಿ ಆಗುತ್ತಿದೆ. ಆದರೆ, ಅಪ್ಪುನೇ ಇಲ್ಲ ಅನ್ನೋದು ದುಃಖವೂ ಆಗುತ್ತದೆ.
'ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ...' ವರ್ಷದ ಬಳಿಕ ಪುನೀತ್ ಟ್ವಿಟರ್ ಹ್ಯಾಂಡಲ್‌ನಿಂದ ಪೋಸ್ಟ್!
7. ಪುನೀತ್ ಅವರನ್ನು ಪಾರ್ವತಮ್ಮ ಅವರು ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಿಸಿದ್ರು. ಈಗ ನಾನು ನಿರ್ಮಿಸಿರುವ ‘ಗಂಧದ ಗುಡಿ’ ಚಿತ್ರದಲ್ಲಿ ರಿಯಲ್ ಪುನೀತ್ ಪರಿಚಯ ಆಗುತ್ತಾರೆ. ಎಲ್ಲರು ಚಿತ್ರಮಂದಿರಗಳಿಗೆ ಬಂದು ‘ಗಂಧದ ಗುಡಿ’ ನೋಡಿ ಆಶೀರ್ವಾದ ಮಾಡಿ.