ಮಲೈಕಾ ಅರೋರಾ ಮಾಜಿ ಪತಿಯನ್ನು ಭೇಟಿಯಾದಾಗ ರಿಯಾಕ್ಟ್ ಮಾಡಿದ್ದು ಹೀಗೆ

Published : Dec 07, 2018, 12:36 PM ISTUpdated : Dec 07, 2018, 12:50 PM IST
ಮಲೈಕಾ ಅರೋರಾ ಮಾಜಿ ಪತಿಯನ್ನು ಭೇಟಿಯಾದಾಗ ರಿಯಾಕ್ಟ್ ಮಾಡಿದ್ದು  ಹೀಗೆ

ಸಾರಾಂಶ

ದೀಪಿಕಾ ಪಡುಕೋಣೆ ಮದುವೆಯಲ್ಲಿ ಅರ್ಬಜ್-ಮಲೈಕಾ ಮುಖಾಮುಖಿ | ಮಾಜಿ ಪತ್ನಿಯನ್ನು ಭೇಟಿಯಾದಾಗ ಮುಜುಗರ ಅನುಭವಿಸಿದ ಅರ್ಬಜ್ ಖಾನ್ | ಮಲೈಕಾ ರಿಯಾಕ್ಟ್ ಹೇಗಿತ್ತು ಗೊತ್ತಾ? 

ಮುಂಬೈ (ಡಿ. 07): ದಾಂಪತ್ಯ ಜೀವನದಿಂದ ಹೊರ ಬಂದು ವಿಚ್ಚೇದನ ಪಡೆದು ಪತಿ-ಪತ್ನಿಯರು ಬೇರೆ ಬೇರೆಯಾದ ಬಳಿಕ ಎದುರಾದರೆ ಹೇಗಿರುತ್ತದೆ? ಒಂದು ರೀತಿ ಮುಜುಗರ, ಸಂದಿಗ್ಧ ಪರಿಸ್ಥಿತಿ ಎದುರಾಗುತ್ತದಲ್ಲ. ಅದೇ ರೀತಿಯ ಸಂದರ್ಭವನ್ನು ಮಲೈಕಾ ಅರೋರಾ, ಅರ್ಬಜ್ ಖಾನ್ ಎದುರಿಸಿದ್ದಾರೆ. 

ಖಾನ್ ಕಿತ್ತೆಸೆದ ಮಲೈಕಾ: ಪದಕಕ್ಕೆ ಅರ್ಜುನ್ ಅಧಿಕೃತ ಎಂಟ್ರಿ!

ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ರಿಸೆಪ್ಷನ್ ಗೆ ಅರ್ಬಜ್ ಖಾನ್ ಹಾಗೂ ಮಲೈಕಾ ಹೋಗಿದ್ದರು. ಅರ್ಬಜ್ ಖಾನ್ ಗರ್ಲ್ ಫ್ರೆಂಡ್ ಜಾರ್ಜಿಯಾ ಅಂದ್ರಾಣಿ ಜೊತೆ ಆಗಮಿಸಿದ್ದರು. ಹೀಗೆ ಸ್ನೇಹಿತರೆಲ್ಲರೂ ಖುಷಿ ಖುಷಿಯಾಗಿ ಮಾತನಾಡುತ್ತಿದ್ದಾಗ ಮಲೈಕಾ ಅರ್ಜುನ್ ಕಪೂರ್ ಜೊತೆ ಅವರ ಆ ಕಡೆಗೆ ಆಗಮಿಸಿದರು. 

ಮಲೈಕಾ ತಮ್ಮ ಕಡೆಗೆ ಬರುತ್ತಿರುವುದನ್ನು ನೋಡಿದ ಅರ್ಬಜ್ ಒಂದುಕ್ಷಣ ತಬ್ಬಿಬ್ಬಾದರು. ಹಾಗೆಯೇ ಹಿಂತಿರುಗಬಹುದೆಂದು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆ ಹುಸಿಯಾಯಿತು. ಮಾಜಿ ಪತಿಯ ಜೊತೆ ಆತ್ಮೀಯತೆಯಿಂದ ಮಾತನಾಡಿ ವಿಶ್ ಮಾಡಿ ಹೊರಟು ಹೋದರು.  ಅರ್ಬಜ್ ಗರ್ಲ್ ಫ್ರೆಂಡ್ ಜಾರ್ಜಿಯಾ ಜೊತೆ  ಬಹಳ ಕ್ಸೋಸಾಗಿ ಮಾತನಾಡಿದ್ದಾರೆ.

ನಾನೇನು ಒಂಟಿಯಲ್ಲ; ಅರ್ಜುನ್ ಕಪೂರ್ ಬಿಚ್ಚಿಟ್ರು ಇಂಟರೆಸ್ಟಿಂಗ್ ಸತ್ಯ

ಮಲೈಕಾ- ಅರ್ಬಜ್ 1998 ರಲ್ಲಿ ವಿವಾಹವಾಗಿದ್ದರು. ದಾಂಪತ್ಯದಲ್ಲಿಬಿರುಕು ಕಾಣಿಸಿಕೊಂಡು 2017 ರಲ್ಲಿ ಬೇರೆ ಬೇರೆಯಾದರು.  ಮಲೈಕಾ ಅರೋರಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾತು ಬಿ ಟೌನ್ ನಲ್ಲಿ ಕೇಳಿ ಬರುತ್ತಿದೆ. ಆದರೆ ಇವರಿಬ್ಬರು ಈ ಬಗ್ಗೆ ಮೌನ ಮುರಿದಿಲ್ಲ. 

ಇತ್ತ ಅರ್ಬಜ್ ಕೂಡಾ ಜಾರ್ಜಿಯಾ ಐಂದ್ರಾಣಿ ಜೊತೆ ರಿಲೇಶನ್ ಷಿಪ್ ಹೊಂದಿದ್ದಾರೆ. 2019 ರಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಅರ್ಬಜ್ ಮನೆಯಲ್ಲಿ ಈಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!