ಶ್ರೀದೇವಿ ಮೇಲಿನ ಪ್ರೀತಿಯನ್ನು ಅನಿಲ್ ಕಪೂರ್ ವ್ಯಕ್ತಪಡಿಸುತ್ತಿದ್ದುದು ಹೀಗೆ

Published : Dec 06, 2018, 03:07 PM ISTUpdated : Dec 06, 2018, 03:11 PM IST
ಶ್ರೀದೇವಿ ಮೇಲಿನ  ಪ್ರೀತಿಯನ್ನು ಅನಿಲ್ ಕಪೂರ್ ವ್ಯಕ್ತಪಡಿಸುತ್ತಿದ್ದುದು ಹೀಗೆ

ಸಾರಾಂಶ

ಶ್ರೀದೇವಿ ಎಂದರೆ ಅನಿಲ್ ಕಪೂರ್‌ಗೆ ಅಪಾರ ಗೌರವ | ತೆರೆ ಮೇಲೆ ಇವರಿಬ್ಬರ ಕಾಂಬಿನೇಶನ್ ಅದ್ಭುತ | ಶ್ರೀದೇವಿ ಮೇಲಿನ ಪ್ರೀತಿಯನ್ನು ಅನಿಲ್ ಕಪೂರ್ ಸಂದರ್ಶನವೊಂದರಲ್ಲಿ ವ್ಯಕ್ತಪಡಿಸಿದ್ದಾರೆ 

ಮುಂಬೈ (ಡಿ. 06): ಅಪ್ರತಿಮ ಸುಂದರಿ, ಚಿತ್ರರಂಗದ ದಂತಕತೆ ಶ್ರೀದೇವಿ ಅಕಾಲಿಕ ಮರಣ ಹೊಂದಿದ್ದು ಎಲ್ಲರಿಗೂ ಬೇಸರದ ಸಂಗತಿ. ತಮ್ಮ ಮನೋಜ್ಞ ಅಭಿನಯ, ಸೌಂದರ್ಯ, ನೃತ್ಯದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. 

ಶ್ರೀದೇವಿ ಮೈದುನ ಅನಿಲ್ ಕಪೂರ್ ಆಕೆಯ ಬಗೆಗಿನ ಇಂಟರೆಸ್ಟಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ.  ಅನಿಲ್ ಕಪೂರ್ ಶ್ರೀದೇವಿಯನ್ನು ಭೇಟಿಯಾದಾಗಲೆಲ್ಲಾ ಕಾಲಿಗೆ ಬೀಳುತ್ತಿದ್ದರಂತೆ. ಸಂದರ್ಭ, ಸ್ಥಳ, ಎದುರಿಗೆ ಯಾರಿದ್ದಾರೆ,ಇಲ್ಲ ಎಂಬುದೆಲ್ಲಾ ನೋಡದೇ ಕಾಲಿಗೆ ಬೀಳುತ್ತಿದ್ದರಂತೆ. ಇದರಿಂದ ಶ್ರೀದೇವಿ ಬಹಳ ಮುಜುಗರ ಅನುಭವಿಸುತ್ತಿದ್ದರಂತೆ.  ಹೀಗೆಲ್ಲಾ ಮಾಡಬೇಡ ಎಂದು ಹೇಳುತ್ತಿದ್ದರು ಎಂದು ಅನಿಲ್ ಕಪೂರ್ ಹೇಳಿದ್ದಾರೆ. 

"ಶ್ರೀದೇವಿ ಅಂದರೆ ನನಗೆ ಅಪಾರ ಅಭಿಮಾನ. ಅವರ ಅಭಿನಯಕ್ಕೆ ಮನಸೋತಿದ್ದೇನೆ. ನಾನು ಆ ಚಿತ್ರದಲ್ಲಿ ಇರಲಿ, ಇಲ್ಲದಿರಲಿ ಶ್ರೀದೇವಿಯ ಪ್ರತಿ ಸೀನನ್ನು ಕುಳಿತು ನೋಡುತ್ತಿದ್ದೆ. ಅವರು ಪಾತ್ರದೊಳಗೆ ಪರಾಕಾಯ ಪ್ರವೇಶ ಮಾಡುವುದನ್ನು ನೋಡುವುದೇ ಸೊಗಸು" ಎಂದು ಅನಿಲ್ ಕಪೂರ್ ಹೇಳಿದ್ದಾರೆ. 

‘ಒಬ್ಬ ಕಲಾವಿದನಾಗಿ ನಾನು ಶ್ರೀದೇವಿ ಜಿ ಜೊತೆ ಕೆಲಸ ಮಾಡಿದ್ದು ನನ್ನ ಪುಣ್ಯ ಎಂದುಕೊಳ್ಳುತ್ತೇನೆ. ನನ್ನ ಕರಿಯರ್ ಗೆ ಅವರ ಕೊಡುಗೆ ಬಹಳಷ್ಟಿದೆ. ಅಪಾರ ಪ್ರತಿಭೆಯನ್ನು ಹೊಂದಿದ ಅದ್ಭುತ ನಟಿಯಿವರು‘ ಎಂದು ಶ್ಲಾಘಿಸಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ