ಬೆತ್ತಲೆ ಮದುವೆ ನೋಡುವ ಚಾನ್ಸ್ ಮಿಸ್! ಮುರಿದು ಬಿತ್ತು ರಾಖಿ ಮದುವೆ

Published : Dec 07, 2018, 11:11 AM ISTUpdated : Dec 07, 2018, 11:37 AM IST
ಬೆತ್ತಲೆ ಮದುವೆ ನೋಡುವ ಚಾನ್ಸ್ ಮಿಸ್! ಮುರಿದು ಬಿತ್ತು ರಾಖಿ ಮದುವೆ

ಸಾರಾಂಶ

ಮುಂಬೈ ಮಾಯ ನಗರಿಯ ಡ್ರಾಮಾ ಕ್ವೀನ್ ಎಂದೆ ಖ್ಯಾತಿಯಾದ ರಾಖಿ ಸಾವಂತ್ ಮದುವೆ ಮುರಿದು ಬಿದ್ದಿದೆ. ಅದರಲ್ಲೂ ತನ್ನ ಮದುವೆ ನಗ್ನ ಮುದುವೆ ಎಂದು ಹೇಳಿ ಹೈ ಅಟೆನ್ಷನ್ ಪಡೆದಿದ್ದ ರಾಖಿ ಈಗ ಫುಲ್ ಡಿಸಪಾಯಿಂಟ್ ಆಗಿದ್ದಾರೆ. ಕೆವಲ 20 ದಿನ ಉಳಿದಿದ್ದ ಮದುವೆ ಸ್ಟಾಪ್ ಆಗಿದೆ. ಮತ್ತೊಂದು ವಿಚಾರವನ್ನೂ ಬಿಚ್ಚಿಟ್ಟಿದ್ದಾರೆ...ಏನದು?

ಮದುವೆ ಆಗುತ್ತೇನೆ ಎಂದು 1 ಕೋಟಿ ಪಡೆದಿದ್ದ ವಿಚಾರ! ಮದುವೆಯ ಫುಲ್ ಅಪ್‌ಡೇಟ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.

ರಾಖಿಗೂ ಕೂಡಿ ಬಂತು ಕಂಕಣ ಭಾಗ್ಯ

ಮದುವೆ ಮುರಿದಿದ್ದಕ್ಕೆ ದೀಪಕ್ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ರಾಖಿ ಮೂರು ದಿನಗಳಿಂದ ಊಟ ಮಾಡಿಲ್ವಂತೆ ಈ ದುಃಖದಲ್ಲಿ ಕಣ್ಣೀರು ಹರಿದು ಕಾಡಿಗೆಯೂ ಅಳಿಸಿದೆ ಎಂದು ಹೇಳಿಕೊಂಡಿದ್ದಾರೆ.

ಮದುವೆಗೂ ಮುನ್ನ ಕನ್ಯತ್ವ ಪ್ರೂವ್ ಮಾಡಿದ ರಾಖಿ

ಫಸ್ಟ್ ನೈಟ್‌ನೂ ಲೈವ್ ಮಾಡುವುದಾಗಿ ಹೇಳಿದ್ದ ರಾಖಿ, ಈಗ ಫಸ್ಟ್ ನೈಟ್ ಮಾಡಿಕೊಳ್ಳುವವರನ್ನು ನೋಡಿ ಬೇಜಾರು ಮಾಡಿಕೊಂಡಿದ್ದಾರೆ. 'ಪ್ರಿಯಾಂಕ ಬಿಳಿ ಬಣ್ಣದ ಗೌನ್ ಧರಿಸಿ ನಿಕ್ ಜೊತೆ ಮದುವೆಯಾಗಿದ್ದಾಳೆ, ದೀಪಿಕಾ ಕೆಂಪು ಬಣ್ಣದ ಗೌನ್ ಧರಿಸಿ ಮದುವೆಯಾಗಿದ್ದಾಳೆ. ಆದರೆ ನಾನಿನ್ನೂ ಗೌನ್ ಕೂಡ ಹೊಲಿಸಿಲ್ಲ. ಅದಕ್ಕೆ ದೀಪಕ್ ಐ ಹೇಟ್ ಯೂ' ಎಂದು ವಿಡಿಯೊ ಮಾಡಿ ಕೂಗಾಡಿದ್ದಾರೆ! ನನ್ನ ಕನಸು ಈಗ ಯಾರಪ್ಪ ಈಡೇರಿಸುತ್ತಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

'ಮೋದಿ, ಶಾರುಖ್, ಸಲ್ಮಾನ್ ಅಷ್ಟೇ ಅಲ್ಲ, ಡೊನಾಲ್ಡ್ ಟ್ರಂಪ್ ಎಲ್ಲರೂ ಬರುವರಿದ್ದರು, ಇದರಿಂದ ಎಷ್ಟು ಅವಮಾನವಾಗಿದೆ ಹಾಗು ಸಮಸ್ಯೆ ಎದುರಿಸಬೇಕು ಗೊತ್ತಾ? ಈ ಕೊನೆಯ ಕ್ಷಣದಲ್ಲಿ ಮರಿನಾ ಕುವರ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡು ಮೋಸ ಮಾಡಿದಿಯಾ' ಎಂದೆಲ್ಲಾ ನೋವನ್ನು ಹೊರ ಹಾಕಿದ್ದಾರೆ.

ಬೆತ್ತಲೆ ಮದುವೆ ಆಗ್ತಾರಂತೆ ರಾಖಿ ಸಾವಂತ್!

ನಿನ್ನಂತ ಹುಡುಗನ್ನು ಮದುವೆಯಾಗಲು 1 ಕೊಟಿ ವಧು ದಕ್ಷಿಣೆ ಪಡೆದಿದ್ದೆ. ಈಗ ಆ ಹಣ ಖರ್ಚಾಗಿದೆ, ಕಾರಣ ತಾವು ಅದನ್ನು ಹಿಂತಿರುಗಿಸುವುದಿಲ್ಲ! ಏನು ಬೇಕಾದರೂ ಮಾಡಿಕೋ ಎಂದು ಅವಾಜ್ ಹಾಕಿದ್ದಾರೆ. ಕೈಗೆ ಹಾಕಿರುವ ವಜ್ರದ ಉಂಗುರವನ್ನೂ ವಾಪಸ್ ಮಾಡುವುದಿಲ್ಲ ಎಂದಿದ್ದಾಳೆ.

 

ಇನ್ನು ಮುಂದೆ ಏನು ಮಾಡುತ್ತಾರೆ? ಮತ್ತೊಮ್ಮೆ ಸ್ವಯಂವರ ಮಾಡಿ ಹುಡುಗನನ್ನು ಹುಡುಕುತ್ತಾರಾ? ಇಲ್ಲವಾದರೆ ದೀಪಕ್ ಹಿಂದಿರುಗಿ ಬರುತ್ತಾರಾ ಮತ್ತೆಲ್ಲ ಡ್ರಾಮಾವನ್ನೂ ವೇಟ್ ಮಾಡಿ ನೋಡಬೇಕು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!