ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವೆ ವಿಚ್ಛೇದನ ಆಗುತ್ತಿದೆ. ಮಗಳು ಆರಾಧ್ಯಳ ಕಾರಣಕ್ಕೆ ಇಬ್ಬರು ವಿಚ್ಛೇದನ ಪಡೆಯದೇ ಬದುಕಲು ನಿರ್ಧರಿಸಿದ್ದಾರೆ ಎಂಬಿತ್ಯಾದಿ ಗಾಸಿಪ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇವೆ. ಇದರ ಜೊತೆ ಜೊತೆಗೆ ಐಶ್ವರ್ಯಾ ರೈ ಅವರ ಹಳೆಯ ಸಂಬಂಧಗಳ ಗಾಸಿಪ್‌ಗಳು ಮುನ್ನೆಲೆಗೆ ಬಂದಿವೆ.
ನವದೆಹಲಿ: ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವೆ ವಿಚ್ಛೇದನ ಆಗುತ್ತಿದೆ. ಬಚ್ಚನ್ ಮನೆಯ ಸೊಸೆ ಐಶ್ವರ್ಯಾ ರೈ ಮಗಳೊಂದಿಗೆ ತನ್ನ ಅತ್ತೆ ಮಾವ ಅವರಿರುವ ಮನೆಯನ್ನು ಬಿಟ್ಟು ಬೇರೆಯೇ ವಾಸ ಮಾಡುತ್ತಿದ್ದಾರೆ. ಆದರೆ ಮಗಳು ಆರಾಧ್ಯಳ ಕಾರಣಕ್ಕೆ ಇಬ್ಬರು ವಿಚ್ಛೇದನ ಪಡೆಯದೇ ಬದುಕಲು ನಿರ್ಧರಿಸಿದ್ದಾರೆ ಎಂಬಿತ್ಯಾದಿ ಗಾಸಿಪ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇವೆ. ಇದರ ಜೊತೆ ಜೊತೆಗೆ ಐಶ್ವರ್ಯಾ ರೈ ಅವರ ಹಳೆಯ ಸಂಬಂಧಗಳು ಅಭಿಷೇಕ್ ಬಚ್ಚನ್ ಅವರ ಹಳೆಯ ಸಂಬಂಧಗಳು ಹಳೆ ವೀಡಿಯೋಗಳು ಆಗಾಗ ಮುನ್ನೆಲೆಗೆ ಬರುತ್ತಲೇ ಇದೆ. ಅದೇ ರೀತಿ ಈಗ ವಿವೇಕಾ ಒಬೇರಾಯ್ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ನಡುವಿನ ಸಂಬಂಧದ ವಿಚಾರದ ಬಗ್ಗೆ ವಿವೇಕ್ ಒಬೇರಾಯ್ ಅವರ ತಂದೆ ನಿರ್ಮಾಪಕ ಸುರೇಶ್ ಒಬೇರಾಯ್ ಮಾತನಾಡಿರುವ ವಿಚಾರವೊಂದು ಸಾಕಷ್ಟು ವೈರಲ್ ಆಗಿದೆ.
ಹೇಳಿ ಕೇಳಿ ವಿವೇಕ್ ಒಬೇರಾಯ್ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರು ಬಾಲಿವುಡ್‌ನ ಒಂದು ಕಾಲದ ಜೋಡಿ ಹಕ್ಕಿಗಳು ಎಂಬುದು ಬಹುತೇಕರಿಗೆ ಗೊತ್ತೇ ಇದೆ. ಆದರೆ ಈ ಜೋಡಿಯ ಪ್ರೇಮ ಮದುವೆಯವರೆಗೂ ತಲುಪದೇ ಮಧ್ಯೆಯೇ ಬ್ರೇಕಪ್ ಆಗಿತ್ತು. ಐಶ್ವರ್ಯಾ ರೈ ಜೊತೆ ಬ್ರೇಕಪ್ ನಂತರ ವಿವೇಕ್ ಒಬೇರಾಯ್ ಕರ್ನಾಟಕ ಮೂಲದ ಅದರಲ್ಲೂ ಮಂಗಳೂರಿನ ಬಂಟ ಸಮುದಾಯದವರೇ ಆದ ಉದ್ಯಮಿ ಹಾಗೂ ರಾಜಕಾರಣಿ ಜೀವರಾಜ್ ಆಳ್ವ ಅವರ ಪುತ್ರಿ ಪ್ರಿಯಾಂಕಾ ಆಳ್ವರನ್ನು 2010ರಲ್ಲಿ ಮದುವೆಯಾಗಿದ್ದರು. ಈ ಜೋಡಿಗೆ ಓರ್ವ ಮಗನಿದ್ದಾನೆ.
ಶಾರುಖ್ ಪುತ್ರನನ್ನು ತಬ್ಬಿಕೊಂಡ ಆರಾಧ್ಯ ಬಚ್ಚನ್ : ಅಮ್ಮನಂತೆ ಮಗಳು ಎಂದ ನೆಟ್ಟಿಗರು
ಈಗ ವಿವೇಕ್ ಓಬೇರಾಯ್ ಅವರ ತಂದೆ ಸುರೇಶ್ ಓಬೇರಾಯ್ ಅವರು ಅನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರ ಅಜ್ಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಇದೇ ವೇಳೆ ಸಿನಿಮಾ ವೆಬ್‌ಸೈಟ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಭಾಗಿಯಾದ ಅವರಿಗೆ ತಮ್ಮ ಮಗ ವಿವೇಕ್ ಒಬೇರಾಯ್ ಹಾಗೂ ಐಶ್ವರ್ಯಾ ರೈ ನಡುವಿನ ಸಂಬಂಧದ ಬಗ್ಗೆ ಕೇಳಿದ್ದಾರೆ. ಈ ವೇಳೆ ಮಾತನಾಡಿದ ಸುರೇಶ್ ಒಬೇರಾಯ್, ಈ ಸಂಬಂಧದ ಬಗ್ಗೆ ನನಗೆ ವಿವೇಕ್ ಒಬೇರಾಯ್ ಏನು ಹೇಳಿರಲಿಲ್ಲ, ಆದರೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರಿಂದ ಮಗನ ಈ ವಿಚಾರ ತಿಳಿದು ಬಂದಿತ್ತು. ಈ ವೇಳೆ ಸುರೇಶ್ ಒಬೇರಾಯ್ ಅವರು, ತಮ್ಮ ಮಗ ವಿವೇಕ್ ಒಬೇರಾಯ್ ಅವರಿಗೆ ಸಹನಟಿಯರ ಜೊತೆ ಪ್ರೇಮ ಸಂಬಂಧಗಳನ್ನು ಇರಿಸಿಕೊಳ್ಳದಂತೆ ಸಲಹೆ ನೀಡಿದ್ದರಂತೆ..
ಜಾಗರೂಕರಾಗಿರುವಂತೆ ನೀವು ನಿಮ್ಮ ಮಗನಿಗೆ ಸೂಚಿಸಿದ್ದೀರಾ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಸುರೇಶ್ ಒಬೇರಾಯ್, 'ನೋಡಿ ನಿಮ್ಮ ಮನೆಗೆ ನಿಮ್ಮ ಮಗನ ಸ್ನೇಹಿತರು ಬಂದರೆ ನೀವು ಏನು ಮಾಡುತ್ತೀರಿ, ನೀವು ಅವರನ್ನು ಪ್ರೀತಿಯಿಂದ ನೋಡುತ್ತೀರಿ, ಐಶ್ವರ್ಯಾ ಅವರನ್ನು ಕೂಡ ನಾನು ಅದೇ ರೀತಿ ನೊಡಿದೆ ಆದರೆ ಅದಕ್ಕಿಂತ ಹೆಚ್ಚಾಗಿ ನನಗೇನು ಗೊತ್ತಿರಲಿಲ್ಲ, ಹಾಗೂ ಅವರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಶಾಲಾ ವಾರ್ಷಿಕೋತ್ಸವದಲ್ಲಿ ಮಗಳು ಆರಾಧ್ಯ ನಟನೆಗೆ ಅಮ್ಮ ಐಶ್ವರ್ಯಾ ರೈ ರಿಯಾಕ್ಷನ್ ಹೇಗಿತ್ತು: ವೀಡಿಯೋ ವೈರಲ್
ವಿವೇಕ್ ಓಬೇರಾಯ್ ಜೊತೆ ಪ್ರೇಮದ ಗಾಸಿಪ್‌ಗೂ ಮೊದಲು ಐಶ್ವರ್ಯಾ ರೈ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ನಡುವೆ ಸಂಬಂಧವಿತ್ತು ಎಂಬ ವಿಚಾರ ಬಾಲಿವುಡ್‌ನಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಇವರ ವಿಭಿನ್ನ ಧರ್ಮದವರಾದ ಇವರ ಪ್ರೇಮಕ್ಕೆ ಆಗ ಮಹಾರಾಷ್ಟ್ರ ರಾಜಕೀಯದಲ್ಲಿ ಸಾಕಷ್ಟು ಸಕ್ರಿಯವಾಗಿದ್ದ ಶಿವಸೇನೆಯೂ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದಾದ ನಂತರ ಇಬ್ಬರ ನಡುವಿನ ಪ್ರೇಮ ಸಂಬಂಧ ಮುರಿದು ಬಿದ್ದ ನಂತರ ಐಶ್ವರ್ಯಾ ವಿವೇಕ್ ಒಬೇರಾಯ್ ಜೊತೆ ಲವ್‌ನಲ್ಲಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಅಲ್ಲದೇ ಸ್ವತಃ ಪತ್ರಿಕಾಗೋಷ್ಠಿ ನಡೆಸಿದ ವಿವೇಕಾ ಒಬೇರಾಯ್ ಅವರು ಸಲ್ಮಾನ್ ಖಾನ್ ನನಗೆ ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದು ಆರೋಪಿದ್ದರು. ಆದರೆ ಐಶ್ವರ್ಯಾ ರೈ ಅವರು ಮಾತ್ರ ತಮ್ಮ ಹಾಗೂ ವಿವೇಕ್ ಒಬೇರಾಯ್ ನಡುವಣ ಸಂಬಂಧವನ್ನು ಎಂದಿಗೂ ಒಪ್ಪಿಕೊಂಡಿರಲಿಲ್ಲ, ಅಲ್ಲದೇ 2003ರಲ್ಲಿ ಇಬ್ಬರೂ ಪ್ರತ್ಯೇಕಗೊಂಡು ತಮ್ಮದೇ ದಾರಿ ಹಿಡಿದರು. ಇದಾದ ಬಳಿಕ ಐಶ್ವರ್ಯಾ 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು.
ಇದೇ ವೇಳೆ ಅಮಿತಾಭ್ ಬಚ್ಚನ್ ಅವರ ಜೊತೆ ನಿಮ್ಮ ಸಂಬಂಧ ಹೇಗಿತ್ತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಒಬೇರಾಯ್ ಅವರೆಂದು ನನಗೆ ಸ್ನೇಹಿತರಾಗಿರಲಿಲ್ಲ ಎಂದು ಪ್ರತಿಕ್ರಿಯಿಸಿದರು. ಜೊತೆಗೆ ತಮ್ಮ ನಡುವಿನ ಸಂಕೀರ್ಣ ಸಂಕೊಲೆಗಳ ಮಧ್ಯೆಯೇ ಒಬೇರಾಯ್, ಕಿಂಗ್ ಖಾನ್, ಬಚ್ಚನ್ ಮಧ್ಯೆ ಒಳ್ಳೆಯ ಸಂಬಂಧವನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಸುರೇಶ್ ಒಬೇರಾಯ್ ಹೇಳಿದ್ದಾರೆ.
ಅಲ್ಲದೇ ಸಲ್ಮಾನ್ ತಂದೇ ಸಲೀಂ ಖಾನ್ ಸಿಕ್ಕಾಗ ನೀನು ಅವರ ಕಾಲಿಗೆ ಬೀಳಬೇಕು ಅವರನ್ನು ಗೌರವಿಸಬೇಕು ಎಂದೇ ನಾನು ನನ್ನ ಮಗನಿಗೆ ಹೇಳುತ್ತಿರುತ್ತೇನೆ ಎಂದು ಸುರೇಶ್ ಒಬೇರಾಯ್ ಹೇಳಿದ್ದಾರೆ. ಅಲ್ಲದೇ ಈ ವಿವಾದಗಳು ಗಾಸಿಪ್‌ಗಳ ಮಧ್ಯೆ ಐಶ್ವರ್ಯಾ ರೈ ಎಲ್ಲಾದರು ಕಾರ್ಯಕ್ರಮಗಳಲ್ಲಿ ಸಿಕ್ಕಿದರೂ ನಾನು ಯಾರ ಜೊತೆಯೂ ಮಾತನಾಡುವುದಕ್ಕೆ ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ ಸುರೇಶ್ ಒಬೇರಾಯ್.