ಕರಣ್​ ಷೋನಲ್ಲಿ ಅಮಿತಾಭ್​ ಪುತ್ರಿ ಶ್ವೇತಾ, ಐಶ್ವರ್ಯ ಬಗ್ಗೆ ಹೇಳಿದ್ದೇನು? ಕುತೂಹಲದ ವಿಡಿಯೋ ವೈರಲ್​

By Suvarna News  |  First Published Dec 19, 2023, 5:16 PM IST

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಮಧ್ಯೆ ಯಾರು ಉತ್ತಮ ಕಲಾವಿದರು ಎಂದು ಕೇಳಿದ ಪ್ರಶ್ನೆಗೆ ಶ್ವೇತಾ ಉತ್ತರವಿದು. ಇದು ಹೊಟ್ಟೆಕಿಚ್ಚಲ್ಲದೇ ಮತ್ತೆ ಇನ್ನೇನು?


ಸದ್ಯ ಬಿ-ಟೌನ್​ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ವಿಚ್ಛೇದನದ ಸುದ್ದಿ.  ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದೆ. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್‌ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದಾಗಿನಿಂದ ಒಂದರ ಮೇಲೊಂದು ಘಟನೆಗಳು ಇವರಿಬ್ಬರೂ ಡಿವೋರ್ಸ್​ ಪಡೆದುಕೊಳ್ಳುತ್ತಿದ್ದಾರೆ ಎನ್ನುವತ್ತಲೇ ಬೆರಳು ಮಾಡಿ ತೋರಿಸುತ್ತಿದೆ.

ಅದೇ ಇನ್ನೊಂದೆಡೆ, ಐಶ್ವರ್ಯ ರೈ ಜೊತೆ ಅಭಿಷೇಕ್​ ಮನೆಯವರ ಸಂಬಂಧ ಹದಗೆಟ್ಟಿಗೆ ಎಂದೇ ಹೇಳಲಾಗುತ್ತದೆ. ಇತ್ತೀಚೆಗೆ ನಡೆದಿದ್ದ ಐಶ್​ ಪುತ್ರಿಯ ಶಾಲಾ ವಾರ್ಷಿಕೋತ್ಸವದಲ್ಲಿ ಕುಟುಂಬಸ್ಥರು ಎಲ್ಲಾ ಸರಿ ಇರುವಂತೆ ಪೋಸ್​ ಕೊಟ್ಟಿದ್ದರೂ ಯಾವುದೂ ಸರಿಯಿಲ್ಲ ಎಂದೇ ಹೇಳಲಾಗುತ್ತಿದೆ. ಅದರಲ್ಲಿಯೂ ಬಹುತೇಕರಿಗೆ ತಿಳಿದಿರುವಂತೆ ಐಶ್ವರ್ಯ ರೈ ಅವರನ್ನು ತಮ್ಮ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳುವುದು ಅಮಿತಾಭ್​ ಪುತ್ರಿ ಶ್ವೇತಾ ಬಚ್ಚನ್​ ಅವರಿಗೆ ಇಷ್ಟವಿರಲಿಲ್ಲ. ಅವರಿಗೆ ನಟಿ ಕರಿಷ್ಮಾ ಕಪೂರ್​ ಅವರನ್ನು ತಂದುಕೊಳ್ಳುವ ಮನಸ್ಸು ಇತ್ತು. ಐಶ್ವರ್ಯ ರೈ ಅಭಿಷೇಕ್​ ಲೈಫ್​ಗೆ ಎಂಟ್ರಿ ಕೊಡುವ ಮೊದಲು ಅಭಿಷೇಕ್​, ಕರಿಷ್ಮಾ ಜೊತೆ ಡೇಟಿಂಗ್​ನಲ್ಲಿದ್ದರು. ಆದರೆ ಕೊನೆಗೆ ಅವರ ಸಂಬಂಧ ಮುರಿದು ಬಿತ್ತು. ಆಗಿನಿಂದಲೂ ಶ್ವೇತಾ ಅವರಿಗೆ ಐಶ್ವರ್ಯ ಕಂಡರೆ ಅಷ್ಟಕ್ಕಷ್ಟೇ ಎನ್ನಲಾಗುತ್ತದೆ. 

Tap to resize

Latest Videos

ಐಶ್ವರ್ಯ ರೈಯನ್ನು ಅಭಿಷೇಕ್​ ಬಚ್ಚನ್​ ಮದ್ವೆಯಾಗಿದ್ದೇಕೆ? ಕಾಫಿ ವಿತ್​ ಕರಣ್​ನಲ್ಲಿ ನಟ ಹೇಳಿದ್ದೇನು?

ಇದರ ನಡುವೆಯೇ, ಬಹು ವಿವಾದಿತ ಷೋ ಕಾಫಿ ವಿತ್ ಕರಣ್​ನಲ್ಲಿ ಐಶ್ವರ್ಯ ರೈ ಕುರಿತು ಶ್ವೇತಾ ಬಚ್ಚನ್​ ಹೇಳಿರುವ ಮಾತೀಗ ಸಕತ್​ ವೈರಲ್​ ಆಗುತ್ತಿದೆ. ನಟನಾ ವಿಷಯಕ್ಕೆ ಬಂದರೆ ಅಭಿಷೇಕ್​ ಮಾಡಿದ್ದು ಕಡಿಮೆ ಚಿತ್ರಗಳು, ಐಶ್ವರ್ಯ ರೈ ಅವರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಆದರೆ ಅಭಿಷೇಕ್ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಕಾಫಿ ವಿತ್ ಕರಣ್ ಶೋಗೆ ಬಂದಿದ್ದ ಸಮಯದಲ್ಲಿ  ‘ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಮಧ್ಯೆ ಯಾರು ಉತ್ತಮ ಕಲಾವಿದರು’ ಎಂದು ಶ್ವೇತಾ ಅವರನ್ನು ಕರಣ್​ ಕೇಳಿದರು. ಯಾರಾದರೂ ಈ ಪ್ರಶ್ನೆಯನ್ನು ಎದುರಿಸಿದ್ದರೆ ಸಹಜವಾಗಿ ಅರೆ ಕ್ಷಣ ಯೋಚನೆ ಮಾಡಿ ಉತ್ತರ ಹೇಳುತ್ತಿದ್ದರು. ಏಕೆಂದರೆ, ನಟನೆಯ ವಿಷಯಕ್ಕೆ ಬರುವುದಾದರೆ ಯಾರು ಉತ್ತಮ ಎಂದು ಹೇಳುವುದು ಕಷ್ಟವೇ. ಆದರೆ ಶ್ವೇತಾ ಹಾಗೆ ಮಾಡಲಿಲ್ಲ. ಅರೆಕ್ಷಣವೂ ಯೋಚನೆ ಮಾಡದೇ ಅಭಿಷೇಕ್​ ಎಂದಿದ್ದರು. ಇದರಿಂದಲೇ ಅವರಿಗೆ ಐಶ್ವರ್ಯ ರೈ ಅವರನ್ನು ಕಂಡರೆ ಎಷ್ಟು ಸಿಟ್ಟು ಆಗಲೇ ಇತ್ತು ಎನ್ನುವುದು ತಿಳಿಯುತ್ತದೆ ಎಂದಿದ್ದಾರೆ.
 
 ಇದೇ ಷೋನಲ್ಲಿ,  ಅಭಿಷೇಕ್​ ಅವರು ಐಶ್ವರ್ಯ ರೈಯನ್ನು ಮದ್ವೆಯಾಗಿದ್ದೇಕೆ ಎನ್ನುವ ಪ್ರಶ್ನೆಯೂ ಎದುರಾಗಿತ್ತು.  ಐಶ್ವರ್ಯಾ ರೈ ಹಾಗೂ ಅಭಿಷೇಕ್ ಮದ್ವೆಯಾದದ್ದು 2007ರಲ್ಲಿ, ಅಂದರೆ 16 ವರ್ಷಗಳ ಹಿಂದೆ. ಇವರದ್ದು ಪ್ರೇಮ ವಿವಾಹ. ಅಷ್ಟಕ್ಕೂ ಐಶ್ವರ್ಯ ರೈ ಅವರು ಅಭಿಷೇಕ್​ಗಿಂತ ಮೂರು ವರ್ಷ ಚಿಕ್ಕವರು. ಈಚೆಗಷ್ಟೇ ಐಶ್ವರ್ಯ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರೆ, ಅಭಿಷೇಕ್​ ಅವರಿಗೆ ಈಗ 47 ವರ್ಷ ವಯಸ್ಸು. ಐಶ್ವರ್ಯಾ ಮತ್ತು ಅಭಿಷೇಕ್ ಮದುವೆಗೆ ಮುನ್ನವೇ ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಆ ಬಳಿಕ ಇಬ್ಬರ ಮದುವೆಯಾಗಿತ್ತು.  ತಾವು ಏಕೆ ಐಶ್ವರ್ಯ ಅವರನ್ನು ಮದ್ವೆಯಾಗಿದ್ದು ಎಂಬ ಬಗ್ಗೆ ವಿವರಿಸಿದ್ದರು.  ನಾನು ಅಮಿತಾಭ್ ಬಚ್ಚನ್ ಅವರ ಮಗ ಅಥವಾ ನಾನು ಸ್ಟಾರ್ ಎಂಬ ಕಾರಣಕ್ಕಾಗಿ ಐಶ್ವರ್ಯಾ ನನ್ನನ್ನು ಮದುವೆಯಾಗಲಿಲ್ಲ. ಅಲ್ಲದೆ ಆಕೆ ಜಗತ್ತಿನ ಅತ್ಯಂತ ಬ್ಯೂಟಿಫುಲ್ ಗರ್ಲ್ ಎಂಬ ಕಾರಣಕ್ಕೆ ಅಥವಾ ಆಕೆ ಬಾಲಿವುಡ್​ನ ಉತ್ತುಂಗದಲ್ಲಿ ಇದ್ದಳು ಎನ್ನುವ ಕಾರಣಕ್ಕೆ ಮದುವೆಯಾಗಲಿಲ್ಲ. ಬದಲಿಗೆ  ನಾವು ಪ್ರೀತಿಯಲ್ಲಿ ಇದ್ದೆವು. ಹಲವು ವರ್ಷ ಪರಸ್ಪರ ಪ್ರೀತಿಸುತ್ತಿದ್ದೆವು. ಅದಕ್ಕಾಗಿಯೇ ಮದ್ವೆಯಾಗಿದ್ದೇ ವಿನಾ ಈ ರೀತಿ ರೂಮರ್ಸ್​ ಹರಡಬೇಡಿ ಎಂದಿದ್ದರು.

ಐಶ್​-ಅಭಿಷೇಕ್​ ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಸೊಸೆಯನ್ನು ಅನ್​ಫಾಲೋ ಮಾಡಿದ ಅಮಿತಾಭ್​? ಅಸಲಿಯತ್ತೇನು?

Abhishek is just as shocked as the rest of us
byu/Rheallygirl inBollyBlindsNGossip
click me!