
ತಮಿಳು ಚಿತ್ರನಟ ಧನುಷ್ ತಮ್ಮ ಇಬ್ಬರು ಮಕ್ಕಳಾದ ಯಾತ್ರಾ ಹಾಗೂ ಲಿಂಗಾ ಜೊತೆ ಹಿಂದೂ ಪವಿತ್ರ ತೀರ್ಥ ಕ್ಷೇತ್ರ ತಿರುಪತಿ ಬಾಲಾಜಿ ದರ್ಶನ ಪಡೆದಿದ್ದಾರೆ. ಇಂದು ಬೆಳಗಿನ ಜಾವ ಧನುಷ್ ಮತ್ತು ಅವರ ಇಬ್ಬರು ಪುತ್ರರಾದ ಯಾತ್ರಾ ಮತ್ತು ಲಿಂಗ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಕ್ಕಳ ಜೊತೆ ಧನುಷ್ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋ ವೀಡಿಯೋಗಳು ವೈರಲ್ ಆಗಿವೆ. ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರನ್ನು ಮದುವೆಯಾಗಿದ್ದ ಧನುಷ್ 2024ರಲ್ಲಿ ಪರಸ್ಪರ ವಿಚ್ಛೇದನ ಪಡೆದಿದ್ದು, ಇತ್ತೀಚೆಗೆ ಧನುಷ್ ಹೆಸರು ಸೀತಾರಾಮಂ ನಟಿ ಮೃಣಾಲ್ ಠಾಕೂರ್ ಅವರ ಹೆಸರಿನೊಂದಿಗೆ ಥಳುಕು ಹಾಕುತ್ತಿದ್ದು, ಅವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ. ಇಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದೆಲ್ಲಾ ವರದಿಯಾಗಿದ್ದವು. ಈ ಊಹಾಪೋಹಾಗಳ ಮಧ್ಯೆ ಧನುಷ್ ಅವರು ತಮ್ಮ ಇಬ್ಬರು ಹದಿಹರೆಯದ ಪುತ್ರರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಮೂವರು ಕೂಡ ದಕ್ಷಿಣ ಭಾರತದ ಸಾಂಪ್ರದಾಯಿಕ ಶೈಲಿಯಲ್ಲಿ ಬಿಳಿ ರೇಷ್ಮೆ ಪಂಚೆ ಹಾಗೂ ಬಿಳಿ ಶಾಲು ಸುತ್ತಿಕೊಂಡು ದೇವರ ದರ್ಶನ ಪಡೆದರು. ವಿಡಿಯೋದಲ್ಲಿ, ಲಿಂಗಾ ತನ್ನ ತಂದೆಯನ್ನು ಜನಸಂದಣಿಯಿಂದ ರಕ್ಷಿಸಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಧನುಷ್ ಅವರ ಮ್ಯಾನೇಜರ್ ಶ್ರೇಯಸ್ ಕೂಡ ಅವರೊಂದಿಗೆ ಇದ್ದರು ಮತ್ತು ಜನಸಂದಣಿಯಿಂದ ಅವರನ್ನು ರಕ್ಷಿಸಲು ಯಾತ್ರಾ ಮತ್ತು ಲಿಂಗಾ ಅವರ ಕೈಗಳನ್ನು ಹಿಡಿದಿರುವುದನ್ನು ಕಾಣಬಹುದು.
ಇದನ್ನೂ ಓದಿ: ಟ್ರೋಲ್ ಆಗ್ತಿದೆ ಪಲಾಶ್ ಮುಚ್ಚಲ್ ನಡಿಗೆ: ಮಹಿಳಾ ಕ್ರಿಕೆಟರ್ಸ್ ನಡೆಯಕ್ಕೂ ಆಗದಂಗೆ ಥಳಿಸಿದ್ರಾ ಕೇಳಿದ ನೆಟ್ಟಿಗರು
ಸಿನಿಮಾದ ವಿಚಾರಕ್ಕೆ ಬರುವುದಾದರೆ ಧನುಷ್ ಕೊನೆಯದಾಗಿ ನಿರ್ದೇಶಕ ಆನಂದ್ ಎಲ್ ರಾಯ್ ಅವರ ತೇರೆ ಇಷ್ಕ್ ಮೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು . ಈ ಚಿತ್ರವು ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಹಾಗೆಯೇ ತಮ್ಮ ಮುಂಬರುವ ಸಿನಿಮಾವಾದ ಕಾರದ ಶೂಟಿಂಗ್ ಈಗಾಗಲೇ ಮುಕ್ತಾಯವಾಗಿದ್ದು, ಈ ಚಿತ್ರದಲ್ಲಿ ಮಮಿತಾ ಬೈಜು, ಜಯರಾಮ್, ಸೂರಜ್ ಮತ್ತು ವೆಂಜರಮೂಡು ಮತ್ತು ಇತರ ಹಲವರು ನಟಿಸಿದ್ದಾರೆ.
ಇತ್ತೀಚೆಗಷ್ಟೇ ಧನುಷ್ ಮೃಣಾಲ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ಸುದ್ದಿಯಾಗಿತ್ತು.ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನ ಇವರು ಹಸೆಮಣೆ ಏರುತ್ತಾರೆ ಎಂಬ ಗಾಸಿಪ್ ಜೋರಾಗಿದೆ.
ಇದನ್ನೂ ಓದಿ: ಮೃತ ಸೋದರನ ಮೂವರು ಸ್ನೇಹಿತರಿಂದಲೇ 6 ವರ್ಷದ ಬಾಲಕಿಯ ಗ್ಯಾಂಗ್*ರೇಪ್: ಆರೋಪಿಗಳೆಲ್ಲರೂ 10ರಿಂದ 14 ವರ್ಷದೊಳಗಿನವರು
ಮೃಣಾಲ್ ನಟನೆಯ ಸನ್ ಆಫ್ ಸರ್ದಾರ್ 2' ಚಿತ್ರದ ವಿಶೇಷ ಸ್ಕ್ರೀನಿಂಗ್‌ಗೆ ಧನುಷ್ ಮುಂಬೈಗೆ ಬಂದಾಗ ಇಬ್ಬರ ಸಂಬಂಧದ ಬಗ್ಗೆ ವದಂತಿಗಳು ಶುರುವಾದವು. ಇಬ್ಬರೂ ಕೈ ಕೈ ಹಿಡಿದು, ಕಿವಿಯಲ್ಲಿ ಪಿಸುಗುಟ್ಟುತ್ತಾ ಮಾತನಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇದಾದ ನಂತರ ಮೃಣಾಲ್ ಠಾಕೂರ್, ಧನುಷ್ ಅವರ 'ತೇರೆ ಇಷ್ಕ್ ಮೇ' ಚಿತ್ರದ ರ‍್ಯಾಪ್-ಅಪ್ ಪಾರ್ಟಿಗೆ ಹಾಜರಾಗಿದ್ದರು. ಆದರೆ ಅವರು ಆ ಚಿತ್ರದ ಭಾಗವಾಗಿರಲಿಲ್ಲ. ಅಲ್ಲದೆ, ಮೃಣಾಲ್ ಅವರು ಧನುಷ್ ಅವರ ಇಬ್ಬರು ಸಹೋದರಿಯರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡಿದ್ದಾರೆ. ಹೀಗಾಗಿಯೇ ಇವರ ಸಂಬಂಧದ ಬಗ್ಗೆ ಗಾಸಿಪ್ ಜೋರಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.