
ಚಲನಚಿತ್ರಗಳಲ್ಲಿ ಅಥವಾ ಸೀರಿಯಲ್‌ಗಳಲ್ಲಿ, ನಟಿ ಎಷ್ಟೇ ತೂಕವಿದ್ದರೂ, ನಟರು ಅವರನ್ನು ಸುಲಭವಾಗಿ ಎತ್ತಿ ಅತ್ತಿತ್ತ ತಿರುಗಿಸಿ, ಗಾಳಿಯಲ್ಲಿ ತೇಲಿಸಿ ಬಿಡುತ್ತಾರೆ. ಇದನ್ನು ನೋಡುವ ವೀಕ್ಷಕರಿಗೆ ಒಂದು ಕ್ಷಣ ಎದೆ ಝಲ್ ಎನ್ನಿಸುವುದು ಉಂಟು. ಇದು ಹೇಗೆ ಸಾಧ್ಯ ಎಂದು ಕೂಡ ಅನ್ನಿಸುವುದು ಉಂಟು. ಅಷ್ಟು ಸಲೀಸಾಗಿ ಎತ್ತುವಷ್ಟು ಎಲ್ಲಾ ನಟರು ಬಲಶಾಲಿಗಳೆ, ಅವರು ಅಂಥದ್ದೇನು ತಿನ್ನುತ್ತಾರೆ ಎಂದು ಕೆಲವರು ಪ್ರಶ್ನಿಸಿದರೆ, ಮತ್ತೆ ಕೆಲವು ಹೆಂಗಳೆಯರು ಇದನ್ನು ನೋಡಿ ತಮ್ಮ ಗಂಡನನ್ನು ಮೂದಲಿಸುವುದೂ ಇದೆ. ನೀವೂ ಹಾಗೆ ಒಮ್ಮೆ ಎತ್ತಿಕೊಳ್ಳಿ ಎಂದು ಗಂಡನಿಗೆ ಸವಾಲು ಹಾಕುವುದೂ ಇದೆ.
ಆದರೆ, ಅಸಲಿಗೆ ನಿಜಕ್ಕೂ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಅಷ್ಟು ಸುಲಭದಲ್ಲಿ ನಟಿಯನ್ನು ಎತ್ತಿಕೊಳ್ಳಲು ಎಲ್ಲಾ ನಟರಿಗೂ ಸಾಧ್ಯವಾಗುತ್ತಾ, ಅವರು ನಿಜವಾಗಿಯೂ ನಮಗೆ ಕಾಣಿಸುವಷ್ಟು ಸುಲಭದಲ್ಲಿ ಎತ್ತಿಕೊಳ್ತಾರಾ ಎನ್ನುವ ಪ್ರಶ್ನೆಗೆ ಇಲ್ಲ ಎನ್ನುವುದೇ ಉತ್ತರ. ಅಷ್ಟಕ್ಕೂ ಇದರ ಹಿಂದೆ ಇರುವುದು ಶೂಟಿಂಗ್ ತಂತ್ರಜ್ಞಾನ. ನಾಯಕ, ನಾಯಕಿಯನ್ನು ಎತ್ತುವ ದೃಶ್ಯಗಳಲ್ಲಿ ಯಾವ ರೀತಿಯ ಶೂಟಿಂಗ್ ಸೆಟ್ ಹಾಕಲಾಗುತ್ತದೆ
ಇದನ್ನು ಗ್ರೀನ್ ಟೆಕ್ನಾಲಾಜಿ ಎನ್ನಲಾಗುತ್ತದೆ. ಹಿಂದೆ ಹಸಿರು ಅಥವಾ ನೀಲಿ ಪರದೆಯನ್ನು ಹಾಕಿ, ಅದರಲ್ಲಿ ನಟಿಯನ್ನು ಎತ್ತುವಂತೆ ತೋರಿಸಲಾಗುತ್ತದೆ. ಅಷ್ಟಕ್ಕೂ ಅಸಲಿಗೆ ಅಲ್ಲಿ ನಾಯಕನಾದವ ನಾಯಕಿಯನ್ನು ಕೈಯಿಂದ ಹಿಡಿದಿರುತ್ತಾನೆ ಅಷ್ಟೇ. ಆಕೆಯನ್ನು ಮೇಲಕ್ಕೆ ಹಿಡಿಯುವ ಸಂದರ್ಭದಲ್ಲಿ ಕೆಳಗಡೆ ಸಪೋರ್ಟ್‌ಗೆ ಟೇಬಲ್ ಇತ್ಯಾದಿಗಳನ್ನು ಹಾಕಿರಲಾಗುತ್ತದೆ. ಕೊನೆಗೆ ಆ ಪರದೆಯನ್ನು ತೆರೆದು ವೀಕ್ಷಕರಿಗೆ ತೋರಿಸುವ ಕಾರಣ, ಸಪೋರ್ಟ್‌ಗೆ ಇಟ್ಟಿರುವ ಎಲ್ಲವೂ ಮಾಯವಾಗಿ ನಾಯಕನಾದವ, ನಾಯಕಿಯನ್ನು ಈಸಿಯಾಗಿ ಎತ್ತಿದಂತೆ ಕಾಣಿಸುತ್ತದೆ ಅಷ್ಟೇ.
ಇಲ್ಲಿ ಸೀರಿಯಲ್ ಒಂದರ ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿದರೆ, ಇಂಥ ದೃಶ್ಯ ಯಾವ ರೀತಿ ಮಾಡಲಾಗುತ್ತದೆ ಎನ್ನುವುದನ್ನು ನೋಡಬಹುದಾಗಿದೆ. ನಟ ಸುರ್ಜಿತ್ಕುಮಾರ್ ಇದನ್ನು ಶೇರ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.