ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಬೈಪೋಲಾರ್ ಡಿಸಾರ್ಡ್‌ರ್ ಇತ್ತು ಎಂಬ ಮಾತುಗಳು ಕೇಳಿ ಬಮದ ಬೆನ್ನಲೇ ಇದೀಗ ನಟ ಸಾಯುವ ಕಲವೇ ಗಂಟೆ ಮುನ್ನ ನೋವಿಲ್ಲದೆ ಸಾಯೋದು ಹೇಗಂತ ಗೂಗಲ್ ಮಾಡಿರುವುದು ಬೆಳಕಿಗೆ ಬಂದಿದೆ. ಸುಶಾಂತ್ ಮನಸಿನಲ್ಲೇನಿತ್ತು..?
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಬೈಪೋಲಾರ್ ಡಿಸಾರ್ಡ್‌ರ್ ಇತ್ತು ಎಂಬ ಮಾತುಗಳು ಕೇಳಿ ಬಮದ ಬೆನ್ನಲೇ ಇದೀಗ ನಟ ಸಾಯುವ ಕಲವೇ ಗಂಟೆ ಮುನ್ನ ತನ್ನದೇ ಹಸೆರನ್ನು ಗೂಗಲ್ ಮಾಡಿರುವುದು ಬೆಳಕಿಗೆ ಬಂದಿದೆ.
ಸುಶಾಂತ್‌ಗೆ ಬೈಪೊಲಾರ್ ಡಿಸಾರ್ಡರ್ ಇತ್ತು. ಆತ ಅದಕ್ಕಾಗಿ ಔಷಧವನ್ನೂ ತೆಗೆದುಕೊಳ್ಳುತ್ತಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಜೂನ್ 14ರಂದು ಮುಂಬೈನ ಫ್ಲಾಟ್‌ನಲ್ಲಿ ನಟ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಸುಶಾಂತ್ ಪೈನ್‌ಲೈಸ್ ಡೆತ್ ಹಾಗೂ ಕೆಲವೇ ದಿನ ಆತ್ಮಹತ್ಯೆ ಮಾಡಿಕೊಂಡ ದಿಶಾ ಸಾಲ್ಯಾನ್ ಬಗ್ಗೆಯೂ ಓದಿದ್ದ ಎಂಬುದನ್ನು ತಿಳಿಸಿದ್ದಾರೆ.
ಸುಶಾಂತ್ ಸಾವಿನ ತನಿಖೆಗೆ ಬಂದ IPS ಅಧಿಕಾರಿಗೆ ಕ್ವಾರೆಂಟೈನ್..!
ಜೂನ್ 8ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ದಿಶಾ ಬಗ್ಗೆ ಗೂಗಲ್ ಮಾಡಿದ್ದ ನಟ ಸಾಯುವ ಕೆಲವು ಗಂಟೆ ಮುನ್ನ ತನ್ನದೇ ಹೆಸರನ್ನು ಹಾಕಿ ಗೂಗಲ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಟ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ನಿಂದ ಈ ಮಾಹಿತಿ ಸಿಕ್ಕಿದೆ. 14ನೇ ಮಹಡಿಯಿಂದ ಬಿದ್ದು ಮೃತಪಟ್ಟ ದಿಶಾ ಸಾವಿನಿಂದ ಸುಶಾಂತ್ ನೊಂದಿರಬಹುದು ಎಂದೂ ಪೊಲೀಸರು ತಿಳಿಸಿದ್ದಾರೆ.
ಮಾಧ್ಯಮಗಳಿಂದ ಬೇಜಾರಾಗಿ ಆತ್ಮಹತ್ಯೆಗೆ ಶರಣಾದ್ರಾ ಸುಶಾಂತ್..! ಅಂಕಿತಾ ಹೇಳಿದ್ದಿಷ್ಟು..!
ಸುಶಾಂತ್‌ಗೆ ಬೈಪೊಲಾರ್ ಡಿಸಾರ್ಡರ್ ಇತ್ತು. ಅದಕ್ಕಾಗಿ ಚಿಕಿತ್ಸೆಯನ್ನೂ ತೆಗೆದುಕೊಳ್ಳುತ್ತಿದ್ದ. ಔಷಧವೂ ಇತ್ತು. ಎಲ್ಲವನ್ನೂ ಡೀಪ್ ಆಗಿ ಹುಡುಕುತ್ತಿದ್ದದ್ದೇ ಸುಶಾಂತ್ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹೇಳಿರುವಂತೆ ಪ್ರಕರಣದ ತನಿಖೆಯಲ್ಲಿ ಯಾವುದೇ ರಾಜಕಾರಣಿಯ ಹೆಸರು ಕೇಳಿ ಬಂದಿಲ್ಲ. ಯಾವುದೇ ಪಕ್ಷದ ಯಾವುದೇ ರಾಜಕಾರಣಿಯ ಬಗ್ಗೆ ಸಾಕ್ಷಿಗಳು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವು: ಈಗ ಇ.ಡಿ. ಎಂಟ್ರಿ, ಪ್ರೇಯಸಿಗೆ ಸಂಕಷ್ಟ
ಘಟನೆಗೆ ಸಂಬಂಧಿಸಿ ಈಗಾಗಲೇ 56 ಜನರ ಹೇಳಿಕೆಗಳನ್ನು ಪಡೆಯಲಾಗಿದೆ. ಇಲ್ಲಿ ರಿಯಾ ಚಕ್ರವರ್ತಿ ಖಾತೆಗೆ ಹಣ ವರ್ಗಾಯಿಸಿರುವ ಕುರುಹುಗಳೂ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.