ಮಾಧ್ಯಮಗಳಿಂದ ಬೇಜಾರಾಗಿ ಆತ್ಮಹತ್ಯೆಗೆ ಶರಣಾದ್ರಾ ಸುಶಾಂತ್..! ಅಂಕಿತಾ ಹೇಳಿದ್ದಿಷ್ಟು..!

By Suvarna News  |  First Published Aug 3, 2020, 4:22 PM IST

ಬಾಲಿವುಡ್ ನಟ ಸುಶಾಂತ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು 50 ದಿನಗಳ ಸನಿಹ ತಲುಪಿದೆ. ಇಷ್ಟೂ ದಿನ ಮೌನವಾಗಿದ್ದ ಸುಶಾಂತ್ ಮಾಜಿ ಗೆಳತಿ ಅಂಕಿತಾ ಲೋಖಂಡೆ ಇದೀಗ ತಮ್ಮ ಗೆಳೆಯನ ಬಗ್ಗೆ ಮಾತನಾಡುತ್ತಿದ್ದಾರೆ. ಇತ್ತೀಚಗೆ ಅಂಕಿತ ನೀಡಿರುವ ಹೇಳಿಕೆ ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.


ಬಾಲಿವುಡ್ ನಟ ಸುಶಾಂತ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು 50 ದಿನಗಳ ಸನಿಹ ತಲುಪಿದೆ. ಇಷ್ಟೂ ದಿನ ಮೌನವಾಗಿದ್ದ ಸುಶಾಂತ್ ಮಾಜಿ ಗೆಳತಿ ಅಂಕಿತಾ ಲೋಖಂಡೆ ಇದೀಗ ತಮ್ಮ ಗೆಳೆಯನ ಬಗ್ಗೆ ಮಾತನಾಡುತ್ತಿದ್ದಾರೆ. ಇತ್ತೀಚಗೆ ಅಂಕಿತ ನೀಡಿರುವ ಹೇಳಿಕೆ ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.

ತಮ್ಮ ಬಗ್ಗೆ ಬರೆದಿರುವುದನ್ನು ಓದಿ ಬೇಜಾರಾಗುತ್ತಿದ್ದರು ಸುಶಾಂತ್ ಬಗ್ಗೆ ಹೇಳಿದ್ದಾರೆ ಕಿರುತೆರೆ ನಟಿ ಅಂಕಿತಾ. ಇದೀಗ ಹಲವು ಇಂಟರ್‌ ವ್ಯೂಗಳಲ್ಲಿ ನಟ ಸುಶಾಂತ್ ಬಗ್ಗೆ ಅಂಕಿತಾ ಮಾತನಾಡುತ್ತಿದ್ದಾರೆ.

Tap to resize

Latest Videos

ಮತ್ತೆ ಶುರುವಾಗಲಿದೆ ಸುಶಾಂತ್ ಸಿಂಗ್ ಫೇವರೇಟ್ ಸೀರಿಯಲ್..!

ಸುಶಾಂತ್ ಅವರ ಬಗ್ಗೆ ಪ್ರಕಟವಾಗುತ್ತಿದ್ದ, ಬರೆಯುತ್ತಿದ್ದ ವಿಚಾರಗಳಿಂದ ಬೇಗನೆ ಬೇಜಾರಾಗುತ್ತಿದ್ದರು. ಯಾವುದೇ ವಿಚಾರ ಬರೆದಿದ್ದರೂ ಅದು ಸುಶಾಂತ್ ಮೇಲೆ ಬೇಗ ಪರಿಣಾಮ ಬೀರುತ್ತಿತ್ತು. ತಮ್ಮ ಕೆರೆಯರ್ ಬಗ್ಗೆ ಸುಶಾಂತ್ ಬಹಳ ಸೂಕ್ಷ್ಮ ಮತ್ತು ಭಾವುಕರಾಗಿದ್ದರು ಎಂದಿದ್ದಾರೆ.

ಸುಶಾಂತ್ ಬಗ್ಗೆ ಏನಾದರೂ ಕೆಟ್ಟದಾಗಿ ಬರೆದರೆ ಅದು ಸುಶಾಂತ್ ಮೇಲೆ ದೊಡ್ಡ ಪರಿಣಾಮ ಬೀರುತ್ತಿತ್ತು. ಅಂಕಿತಾ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದರೂ ಸುಶಾಂತ್‌ಗೆ ಬೇಜಾರಾಗುತ್ತಿತ್ತು ಎಂಬುದನ್ನು ಅವರು ತಿಳಿಸಿದ್ದಾರೆ.

ದೀಪವು ನಿನ್ನದೆ..ಗಾಳಿಯೂ ನಿನ್ನದೆ.. ಸುಶಾಂತ್ ಸಾವಿನ ನಂತರ ಅಂಕಿತಾ ಮೊದಲ ಪೋಸ್ಟ್

ಬಹಳ ಚಿಕ್ಕ ಹಳ್ಳಿಯಿಂದ ಬಂದ ಸುಶಾಂತ್ ತಮ್ಮ ಕಠಿಣ ಪ್ರಯತ್ನದಿಂದ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದರು.  ತಮ್ಮ ಸ್ವಂತ ಶ್ರಮದಿಂದಲೇ ಬೆಳೆದು ಬಂದಿದ್ದರಿಂದ ತಮ್ಮ ಸ್ವಭಾವ, ಇಮೇಜ್ ಬಗ್ಗೆ ಸುಶಾಂತ್‌ಗೆ ಬಹಳ ಕಾಳಜಿ ಇತ್ತು ಎಂದಿದ್ದಾರೆ ಅಂಕಿತಾ.

ಸುಶಾಂತ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಜೊತೆ ಚಾಟ್‌ ಮಾಡುವುದೆಂದರೆ ಇಷ್ಟ. ಬಾಲಿವುಡ್‌ನಲ್ಲಿ ಸಕ್ಸಸ್ ಆಗಲು ಅಭಿಮಾನಿಗಳೇ ಕಾರಣ ಎಂದುಕೊಳ್ಳುತ್ತಿದ್ದರು ಸುಶಾಂತ್. ಇಂಡಸ್ಟ್ರಿಯಲ್ಲಿ ಫ್ಯಾನ್ಸ್ ಹೊರತಾಗಿ ಬೇರೆ ಯಾರೂ ತನ್ನ ಪರ ಇಲ್ಲ ಎಂದು ಬಲವಾಗಿ ನಂಬಿದ್ದರು. ಜನ ತಮ್ಮ ಬಗ್ಗೆ ಏನು ತಿಳಿದುಕೊಂಡಿದ್ದಾರೆ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದರು ಸುಶಾಂತ್ ಎಂದು ಅಂಕಿತಾ ತಿಳಿಸಿದ್ದಾರೆ.

ಸುಶಾಂತ್ ಸಾವಿನ ನಂತರ ಮಾಜಿ ಗೆಳತಿ ಆಡಿದ ಮಾತುಗಳಿವು!

ಸುಶಾಂತ್ ಡಿಪ್ರೆಷನ್‌ನಲ್ಲಿದ್ದರು ಎಂಬ ಮಾತನ್ನು ಅಂಕಿತಾ ತಳ್ಳಿ ಹಾಕಿದ್ದಾರೆ. ಸುಶಾಂತ್ ಖುಷಿ ಖುಷಿಯಾಗಿದ್ದ ವ್ಯಕ್ತಿಯಾಗಿದ್ದು, ಯಾವ ಬಗ್ಗೆಯೂ ಆತ ಡಿಪ್ರೆಷನ್‌ಗೊಳಗಾಗುವುದು ಸಾದ್ಯವಿಲ್ಲ ಎಂದಿದ್ದಾರೆ.

click me!