ಪುನೀತ್‌ಗೆ ಬುದ್ಧಿ ಹೇಳೋಕೆ ಮುಂದಾದ ಪ್ರಕಾಶ್ ರೈ?

Published : Jul 02, 2019, 09:14 AM IST
ಪುನೀತ್‌ಗೆ ಬುದ್ಧಿ  ಹೇಳೋಕೆ ಮುಂದಾದ ಪ್ರಕಾಶ್ ರೈ?

ಸಾರಾಂಶ

ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್‌ ರೈ ಮತ್ತೆ ಪರದೆಗೆ ಮರಳಿದ್ದಾರೆ. ಕೆಲವು ತಿಂಗಳುಗಳಿಂದ ಲೋಕಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಪ್ರಕಾಶ್‌ ರೈ, ಈಗ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಚಿತ್ರದ ಮೂಲಕ ಬಿಗ್‌ ಸ್ಕ್ರೀನ್‌ಗೆ ಎಂಟ್ರಿಯಾಗಿದ್ದಾರೆ. ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದ ‘ಯುವರತ್ನ’ ಚಿತ್ರದಲ್ಲಿ ಬಹು ಮುಖ್ಯವಾದ ಪಾತ್ರ ಮಾಡುತ್ತಿದ್ದಾರೆ. ಆ ಮೂಲಕ ಚುನಾವಣೆಯ ಬಳಿಕೆ ಒಪ್ಪಿಕೊಳ್ಳುತ್ತಿರುವ ಮೊದಲ ಚಿತ್ರ ಇದಾಗುತ್ತಿದೆ.

ಪ್ರಿನ್ಸಿಪಾಲ್‌ ಪಾತ್ರದಲ್ಲಿ ರೈ

ಅಂದಹಾಗೆ ಈ ಚಿತ್ರದಲ್ಲಿ ನಟ ಪ್ರಕಾಶ್‌ ರೈ ಅವರು ಕಾಲೇಜಿನ ಪ್ರಿನ್ಸಿಪಾಲ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಯುವ ಸಮುದಾದ ಸುತ್ತ ಸಾಗುವ ಈ ಚಿತ್ರದಲ್ಲಿ ಕಾಲೇಜು ಕಾರಿಡಾರ್‌ ಕತೆಯೂ ಹೆಚ್ಚಾಗಿದೆ.

ಹಿರಿಯ ನಟನ ಮನೆಗೆ ಭೇಟಿ ನೀಡಿ ಆಸೆ ಈಡೇರಿಸಿದ ಯುವರತ್ನ!

ಅಲ್ಲಿ ವಿಲನ್‌, ಇಲ್ಲಿ ಪ್ರಿನ್ಸಿಪಾಲ್‌

ಹಾಗೆ ನೋಡಿದರೆ ಚುನಾವಣೆಗೂ ಮುನ್ನ ಪುನೀತ್‌ರಾಜ್‌ಕುಮಾರ್‌ ಅವರ ಚಿತ್ರದಲ್ಲೇ ಪ್ರಕಾಶ್‌ ರೈ ನಟಿಸಿದ್ದರು. ಅಲ್ಲೂ ಸಂತೋಷ್‌ ಆನಂದ್‌ ರಾಮ್‌ ಅವರೇ ಆ್ಯಕ್ಷನ್‌ ಕಟ್‌ ಹೇಳಿದ್ದರು. ‘ರಾಜಕುಮಾರ’ ಚಿತ್ರದಲ್ಲಿ ಪ್ರಕಾಶ್‌ ರೈ ಅವರು ವಿಲನ್‌ ಪಾತ್ರದಲ್ಲಿ ನಟಿಸಿದ್ದರು. ಆಗ ವಿಲನ್‌ ಆದವರು, ಈಗ ಅದೇ ಜೋಡಿಯ ಚಿತ್ರದಲ್ಲಿ ಪ್ರಿನ್ಸಿಪಾಲ್‌ ಆಗಿದ್ದಾರೆ.

ಪುನೀತ್ ರಾಜ್‌ಕುಮಾರ್‌ಗೆ ಜೊತೆಯಾದ ಕಾನ್‌ಸ್ಟೇಬಲ್ ಸರೋಜ!

ಅರ್ಧ ಚಿತ್ರೀಕರಣ ಎಲ್ಲಿಗೆ ಬಂದಿದೆ?

ಈಗಾಗಲೇ ‘ಯುವರತ್ನ’ ಚಿತ್ರಕ್ಕೆ ಅರ್ಧ ಚಿತ್ರೀಕರಣ ಮುಗಿದಿದೆ. ಸದ್ಯ ಧಾರವಾಡದ ಕಾಲೇಜಿನಲ್ಲಿ ಐದನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಯೇಶಾ ಸೈಗಲ್‌ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಧಿಕಾ ಶರತ್‌ ಕುಮಾರ್‌, ಧನಂಜಯ್‌ ಮುಂತಾದವರು ಚಿತ್ರಕ್ಕೆ ಜತೆಯಾಗಿದ್ದು, ಈಗ ಹೊಸದಾಗಿ ಪ್ರಕಾಶ್‌ ರೈ ಸೇರಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!