ತೆರೆ ಮೇಲೆ ನಟಿ ಕಲ್ಪನಾ ಆತ್ಮ-ಕಥೆ!

Published : Jul 01, 2019, 03:42 PM ISTUpdated : Jul 01, 2019, 03:51 PM IST
ತೆರೆ ಮೇಲೆ ನಟಿ ಕಲ್ಪನಾ ಆತ್ಮ-ಕಥೆ!

ಸಾರಾಂಶ

ಮತ್ತೆ ನಟಿ ಕಲ್ಪನಾ ಸದ್ದು ಮಾಡುತ್ತಿದ್ದಾರೆ. ಹಾಗಂತ ಅವರ ಆತ್ಮಕತೆ ಸಿನಿಮಾ ಆಗುತ್ತಿದೆಯೇ ಎನ್ನುವ ಅನುಮಾನ ಬೇಡ. ಯಾಕೆಂದರೆ ಅವರ ಆತ್ಮವನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಕಲ್ಪನಾ ಅವರ ಆತ್ಮದ ಸುತ್ತ ಸಾಗುವ ಈ ಚಿತ್ರದ ಹೆಸರು ‘ಕಲ್ಪನಾ ವಿಲಾಸ’.

ಮಹಿಳಾ ಕೇಂದ್ರಿತವಾದ ಹಾರರ್‌ ಸಿನಿಮಾ ಇದು. ಬಹುತೇಕ ಹೊಸಬರೇ ಕೂಡಿರುವ ಸಿನಿಮಾ ಇದಾಗಿರುವುದರಿಂದ ಹೊಸತನ್ನು ನಿರೀಕ್ಷೆ ಮಾಡಬಹುದು ಎಂಬುದಕ್ಕೆ ಚಿತ್ರದ ಪೋಸ್ಟರ್‌ಗಳೇ ಸಾಕ್ಷಿಯಾಗಿವೆ. ಕ್ರೈಂ, ಹಾರರ್‌ ನೆರಳಿನ ಈ ಚಿತ್ರವನ್ನು ನಿರ್ದೇಶಿಸಿರುವುದು ವಿಶ್ವ ಜಿ ಕಡೂರ್‌. ವಿಜಯ್‌ ರಾಮ್‌, ವೇದಾ ಹಾಗೂ ಆಶಿತ್‌ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ ಈ ಚಿತ್ರದಲ್ಲಿ ನಟಿಸಿರುವ ಬಹುತೇಕ ಕಲಾವಿದರು ಐಟಿ ಕ್ಷೇತ್ರದಿಂದ ಬಂದವರು. ಜತೆಗೆ ರಂಗಭೂಮಿ ನಂಟು. ಚಿತ್ರದ ಶೂಟಿಂಗ್‌ ಬಹುತೇಕ ರಾತ್ರಿಯಲ್ಲೇ ಇದ್ದುದ್ದರಿಂದ ಬೆಳಗ್ಗೆ ಕೆಲಸ ಮಾಡಿಕೊಂಡು ರಾತ್ರಿ ಶೂಟಿಂಗ್‌ ಮಾಡಿಕೊಂಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಅಶೋಕ್‌ ಭಾರದ್ವಾಜ್‌.

‘ಹಿರಿಯ ನಟಿ ಕಲ್ಪನಾ ತೀರಿಕೊಂಡ ಬಳಿಕ ಆ ಊರಿನಲ್ಲಿ ಕಲ್ಪನಾ ಆತ್ಮ ಊರಿನಲ್ಲಿ ಓಡಾಡುತ್ತಿದೆ ಅಂತೆಲ್ಲಾ ಊರಿನ ಜನ ಮಾತನಾಡಿಕೊಳ್ಳುತ್ತಿದ್ದರು. ಇದನ್ನೇ ಎಳೆಯಾಗಿಸಿಕೊಂಡು ಕತೆ-ಚಿತ್ರಕಥೆ ಬರೆದಿದ್ದು ಕಾರ್ತಿಕ್‌ ಮರಳಬಾ. ಎಲ್ಲೂ ಕಲ್ಪನಾ ಅವರ ಚಿತ್ರಗಳನ್ನೋ ಅಥವಾ ಅವರ ಫೋಟೋಗಳನ್ನೋ ಬಳಸಿಕೊಂಡಿಲ್ಲ. ಕೇವಲ ಕಲ್ಪನಾ ತೀರಿಕೊಂಡ ಮೇಲೆ ಕೇಳಿ ಬಂದ ಮಾತುಗಳು, ಅದಕ್ಕೂ ತಕ್ಕಂತೆ ದೃಶ್ಯಗಳ ಜೋಡಣೆಯಿಂದ ಈ ಸಿನಿಮಾ ಹುಟ್ಟಿಕೊಂಡಿದೆ’ ಎಂದು ನಿರ್ಮಾಪಕ ಅಶೋಕ್‌ ಭಾರದ್ವಾಜ್‌ ಹೇಳುತ್ತಾರೆ.

ವೈ ಜೆ ಕೆ ಸಂಗೀತ ಸಂಯೋಜಿಸಿದ್ದಾರೆ. ಮನು ದಾಸಪ್ಪ ಕ್ಯಾಮೆರಾ, ವೈಎಸ್‌ ಶ್ರೀಧರ್‌ ಸಂಕಲನ ಈ ಚಿತ್ರಕ್ಕಿದೆ. ಶಿವು ಶರಣಪ್ಪ ಸಂಭಾಷಣೆ ಇದ್ದು, ಈಗಾಗಲೇ ಸೆನ್ಸಾರ್‌ ಕೂಡ ಮುಗಿಸಿದ್ದು, ಯು ಸರ್ಟಿಫಿಕೆಟ್‌ ಸಿಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ