
ಪ್ರೀಮಿಯರ್ ಪದ್ಮಿನಿ ಚಿತ್ರದ ಜೊತೆ ನೀವು ಹಾಗೆ ಕನೆಕ್ಟ್ ಆಗುತ್ತೀರಿ. ನಿಮ್ಮ ಕುತೂಹಲವನ್ನು ಅದು ಕೊನೆ ತನಕ ಕಾಯ್ದಕೊಳ್ಳುತ್ತದೆ. ಭಾವನೆಗಳನ್ನು ಸೊಗಸಾಗಿ ಪರಿಭಾವಿಸಿ, ಅದನ್ನು ಯಾವ ಅಲಂಕಾರಗಳೂ ಇಲ್ಲದೇ ಸರಳವಾಗಿ ನಿಮ್ಮ ಮುಂದಿಡಲಾಗಿದೆ. ಪ್ರತಿಯೊಂದು ಪಾತ್ರಕ್ಕೂ ಅರ್ಥವಿದೆ. ಆ ಅರ್ಥವನ್ನು ಸಮರ್ಥವಾಗಿ ಸೆರೆಹಿಡಿಯಲಾಗಿದೆ. ನಿರ್ದೇಶಕರ ಸಂವೇದನೆಯಂತೂ ಅವರು ಸೆರೆಹಿಡಿಯಲು ಯತ್ನಿಸಿದ ಪ್ರತಿಯೊಂದು ಸನ್ನಿವೇಶಗದಲ್ಲೂ ಕಾಣಿಸುತ್ತದೆ. ನಮ್ಮನ್ನು ತಟ್ಟುವುದೂ ಅದೇ. ಅರ್ಜುನ್ ಜನ್ಯ ಈ ಭಾವಗಳಿಗೆ ಸರಿಯಾದ ಅಭಿವ್ಯಕ್ತಿ ನೀಡಿದ್ದಾರೆ. ಸರಳವಾದರೂ ಅತ್ಯುತ್ತಮ ಸಂಗೀತ.
ಚಿತ್ರ ವಿಮರ್ಶೆ: ಪ್ರೀಮಿಯರ್ ಪದ್ಮಿನಿ
ನಟರೂ ಅಷ್ಟೇ. ತಮ್ಮ ಪಾತ್ರಗಳೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಅಭಿನಯವಂತೂ ಅದ್ಭುತ. ಪಾತ್ರಗಳಿಗೆ ತಕ್ಕ ಪಾತ್ರಧಾರಿಗಳನ್ನು ಆಯ್ದುಕೊಂಡ ನಿರ್ದೇಶಕರಿಗೊಂದು ಚಪ್ಪಾಳೆ. ಹಾಗೆಯೇ ತನ್ನ ಕತೆಗೆ ಬೇಕಾದ್ದನ್ನು ಅವರಿಂದ ಹೊರತೆಗೆದ ಪ್ರತಿಭೆ ಕೂಡ ಅದ್ಭುತವೇ.
ಜಗ್ಗೇಶ್ ಸರ್ ಬಗ್ಗೆ ಸಂತೋಷವಾಯಿತು. ನಮ್ಮೆಲ್ಲರ ಹೃದಯಕ್ಕೆ ಹತ್ತಿರವಾದ ಪಾತ್ರ ಅವರದು. ಎಂಥಾ ಕಠಿಣವಾದ ಪಾತ್ರವನ್ನು ಕೂಡ ಲೀಲಾಜಾಲವಾಗಿ ನಿರ್ವಹಿಸಬಲ್ಲ ಸಮರ್ಥ ನಟರು ಅವರು. ಆಗ ತಮಾಷೆಯಾದ ಪಾತ್ರ ಆಯ್ದುಕೊಳ್ಳಲು ನಿರ್ಧರಿಸಿದ್ದರು. ಈಗ ಇಂಥದ್ದೊಂದು ಪಾತ್ರ ಆರಿಸಿಕೊಂಡಿದ್ದಾರೆ. ಅವರೊಳಗಿರುವ ಅರ್ಥಪೂರ್ಣ ಪಾತ್ರಗಳಿಗಾಗಿ ಇರುವ ಹಸಿವನ್ನು ಇದು ತೋರಿಸುತ್ತದೆ. ನಟಿಸದೇ ನಟಿಸುವ ನಿಮಗೊಂದು ಸಲಾಂ. ನಿಮ್ಮ ಮೌನ ಸಾವಿರ ಮಾತುಗಳನ್ನು ಹೇಳುತ್ತದೆ.
ಸಿನಿಮಾ ಕೊನೆಗೊಳ್ಳುವ ರೀತಿಯೂ ಇಷ್ಟವಾಯಿತು. ಅತಿರೇಕವಾಗಲೀ ನಾಟಕೀಯತೆಯಾಗಲೀ ಇಲ್ಲವೇ ಇಲ್ಲ. ನಾವು ಎಷ್ಟೇ ತಡೆಯಲು ಯತ್ನಿಸಿದರೂ ಕೊನೆಯ ಮಾತು ಕೇಳುತ್ತಿದ್ದಂತೆ ಕಣ್ಣ ಹನಿಯೊಂದು ಕೆನ್ನೆಗೆ ಇಳಿಯಿತು.
ಮಧುಬಾಲಾ ಪಾತ್ರಕ್ಕೆ ನನ್ನೇ ಕೇಳಿದ್ದರು: ಶ್ರುತಿ ನಾಯ್ಡು
ಹಾಗಂತ ಸುದೀಪ್ ಟ್ವೀಟ್ ಮಾಡಿದ್ದಾರೆ. ಚಿತ್ರತಂಡಕ್ಕೆ ವಂದನೆ ಸಲ್ಲಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.