ಹಳೇ ಚಿತ್ರಮಂದಿರಕ್ಕೆ ಹೊಸ ಲುಕ್ ನೀಡಿ 614 ಸೀಟ್‌ಗಳ ಶಂಕರ್‌ನಾಗ್ ಥಿಯೇಟರ್ ರೀ ಒಪನ್ ಮಾಡಲಾಗುತ್ತಿದೆ.
ಎವರ್ ಗ್ರೀನ್ ಆ್ಯಕ್ಟರ್ ಆಟೋರಾಜ ಶಂಕರ್‌ನಾಗ್ ಚಿತ್ರಮಂದಿರವನ್ನು ಶಂಕರ್‌ನಾಗ್ ಸ್ವಾಗತ ಓನಿಕ್ಸ್ ಎಂದು ಮರುನಾಮಕರಣವಾಗಿದೆ. ಈ ಚಿತ್ರಮಂದಿರಕ್ಕೆ ಅತಿ ದೊಡ್ಡ 14 ಮೀಟರ್ ಎಲ್‌ಇಡಿ ಪರದೆ ಹಾಗೂ 3ಡಿ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು ಇದು ಚೀನಾ ಹಾಗೂ ಮಲೇಷ್ಯಾ ನಂತರ ಬೆಂಗಳೂರಿನಲ್ಲೇ ಇರುವುದು.
ವಿಶೇಷವೇನೆಂದರೆ ಇದರಲ್ಲಿ 560 ಸೀಟುಗಳು ಇರುವ ಈ ಚಿತ್ರಮಂದಿರದಲ್ಲಿ ಮೊದಲು ಇಂಗ್ಲಿಷ್ ಸಿನಿಮಾಗಳನ್ನು ಮಾತ್ರ ಪ್ರದರ್ಶನ ಮಾಡಲಾಗುತ್ತಿತ್ತು. ಆನಂತರ ಕನ್ನಡ ಸಿನಿಮಾಗಳನ್ನು ಪ್ರದರ್ಶನ ಶುರು ಮಾಡಿ ಸುಮಾರು 38 ವರ್ಷಗಳ ಕಾಲ ಮನೋರಂಜನೆ ನೀಡಿದೆ.
ಮೊದಲು ಈ ಚಿತ್ರಮಂದಿರಕ್ಕೆ 'ಸಿಂಪೋನಿ' ಎಂದು ಹೆಸರಿತ್ತು ಆದರೆ 1991 ರಲ್ಲಿ ಶಂಕರ್‌ನಾಗ್ ನಿಧನದ ನಂತರ ಇದನ್ನು ಶಂಕರ್‌ನಾಗ್ ಚಿತ್ರಮಂದಿರ ಎಂದು ನಾಮಕರಣ ಮಾಡಲಾಗಿತ್ತು.