’ಲವ್ ಹ್ಯಾಕರ್ಸ್’ ಜೊತೆ ಸೇರಿಕೊಂಡ್ರಾ ಪ್ರಿಯಾ ವಾರಿಯರ್?

Published : Apr 28, 2019, 02:36 PM IST
’ಲವ್ ಹ್ಯಾಕರ್ಸ್’  ಜೊತೆ ಸೇರಿಕೊಂಡ್ರಾ ಪ್ರಿಯಾ ವಾರಿಯರ್?

ಸಾರಾಂಶ

ಲವ್ ಹ್ಯಾಕರ್ಸ್ ಜೊತೆ ಸೇರಿಕೊಂಡ ಪ್ರಿಯಾ ವಾರಿಯರ್ | ಬಾಲಿವುಡ್ ಎರಡನೇ ಸಿನಿಮಾದಲ್ಲಿ ಪ್ರಿಯಾ ವಾರಿಯರ್ | 

ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಒರು ಅಡಾರ್ ಲವ್ ಚಿತ್ರದ ನಂತರ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈ ಸಿನಿಮಾ ನಂತರ ಇವರ ಸ್ಟಾರ್ ಬದಲಾಯಿತು ಎಂದರೆ ತಪ್ಪಾಗಲಿಕ್ಕಿಲ್ಲ. 

ಆಟೋರಾಜ ಶಂಕರ್‌ ನಾಗ್‌ ಚಿತ್ರಮಂದಿರಕ್ಕೆ ಮತ್ತೆ ಜೀವ!

ಇದೀಗ ಹೊಸ ಸುದ್ದಿ ಮೂಲಕ ಮತ್ತೊಮ್ಮೆ ಅಭಿಮಾನಿಗಳಿಗೆ ಸರ್ಪ್ರೆಸ್ ಕೊಟ್ಟಿದ್ದಾರೆ. ಪ್ರಿಯಾ ಲವ್ ಹ್ಯಾಕರ್ಸ್ ಜೊತೆ ಸೇರಿಕೊಂಡು ಸೈಬರ್ ಕ್ರೈಮ್ ನಲ್ಲಿ ಭಾಗಿಯಾಗಿದ್ದಾರೆ. ಅರೇ ಪ್ರಿಯಾ ಹೀಗ್ಯಾಕೆ ಮಾಡಿದ್ರು ಎಂದು ಯೋಚಿಸ್ತಿದ್ದೀರಾ? ಗಾಬರಿಯಾಗಬೇಡಿ. ಲವ್ ಹ್ಯಾಕರ್ಸ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕಮಲ್ ಹಾಸನ್ ಪುತ್ರಿ ಮದುವೆಗೆ ಬಿತ್ತು ಪ್ರೇಮಿಯಿಂದ ಬಿಗ್ ಬ್ರೀಕ್ ?

ಇದು ಪ್ರಿಯಾ ಅವರ ಎರಡನೇ ಬಾಲಿವುಡ್ ಸಿನಿಮಾ. ಇನ್ನು ಲವ್ ಹ್ಯಾಕರ್ಸ್ ಎನ್ನುವ ಸಿನಿಮಾ ಬಗ್ಗೆ ನೋಡುವುದಾದರೆ ಚಿತ್ರದ ಟೈಟಲ್ಲೇ ಹೇಳುವಂತೆ ಇದು ಸೈಬರ್ ಬಗ್ಗೆ ಇರುವ ಸಿನಿಮಾ. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಹ್ಯಾಕಿಂಗ್ ಜಾಸ್ತಿಯಾಗುತ್ತಿದೆ. ಈ ಹ್ಯಾಕಿಂಗ್ ಸುತ್ತ ನಡೆಯುವ ಕಥೆಯನ್ನು ಇಟ್ಟುಕೊಂಡು ಮಾಡಿದ ಸಿನಿಮಾ ಇದು. ಸೈಬರ್ ಸುಳಿಗೆ ಸಿಲುಕಿದ ಹುಡುಗಿಯೊಬ್ಬಳು ಹೇಗೆ ಅದರಿಂದ ಹೊರ ಬರುತ್ತಾಳೆ ಎಂಬುದೇ ಈ ಚಿತ್ರದ ತಿರುಳು. 

ಬಾಲಿವುಡ್ ನಲ್ಲಿ ಇದು ಪ್ರಿಯಾರ ಎರಡನೇ ಚಿತ್ರ. ಶ್ರೀದೇವಿ ಬಂಗ್ಲೋ ಸಿನಿಮಾದ ನಂತರ ಲವ್ ಹ್ಯಾಕರ್ಸ್ ಜೊತೆ ಸೇರಿಕೊಂಡಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?