ಟೈಟಲ್ ಮೂಲಕವೇ ಕುತೂಹಲ ಹುಟ್ಟಿಸಿರುವ ಚಿತ್ರ ‘ತೋತಾಪುರಿ’. ಜತೆಗೆ ಇದು ‘ನೀರ್‌ದೋಸೆ’ ಖ್ಯಾತಿಯ ನಿರ್ದೇಶಕ ವಿಜಯ ಪ್ರಸಾದ್ ಹಾಗೂ ಜಗ್ಗೇಶ್ ಕಾಂಬಿನೇಷನ್ ಸಿನಿಮಾ ಎನ್ನುವುದು ಕೂಡ ಈ ಚಿತ್ರದ ಮೇಲಿರುವ ಮತ್ತೊಂದು ಕುತೂಹಲ. ಈಗ ಈ ಚಿತ್ರದ ಮತ್ತೊಂದು ಇಂಟರೆಸ್ಟಿಂಗ್ ಸಂಗತಿ ಹೊರಬಿದ್ದಿದೆ
ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ ‘ಕೆಜಿಎಫ್’ ಮಾದರಿಯಲ್ಲೇ ಈ ಚಿತ್ರವೂ ಎರಡು ಭಾಗಗಳಲ್ಲಿ ಬರುತ್ತಿದೆಯಂತೆ. ಮೊದಲ ಭಾಗದ ಕೊನೆಯಲ್ಲಿ ಚಾಪ್ಟರ್ 2ನಲ್ಲಿ ಏನಾಗಲಿದೆ ಎನ್ನುವ ಸುಳಿವು ನೀಡಲಿದೆಯಂತೆ ಚಿತ್ರತಂಡ.
ಬೇರೆ ಭಾಷೆಗಳಲ್ಲಿ ಜಗ್ಗೇಶ್ ನಟಿಸದಿರಲು ಕೊಟ್ಟ ಕಾರಣವಿದು!
‘ತೋತಾಪುರಿ’ಗೆ ಈಗಾಗಲೇ 90 ದಿನಗಳ ಚಿತ್ರೀಕರಣ ಮುಗಿದಿದೆ. ಇನ್ನು 60 ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ. ಸದ್ಯ ಕೇರಳ ಮತ್ತು ಮೈಸೂರು ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್ ನಡೆಸಿದೆ. ಈ ನಡುವೆ ಈಗ ಅದರ ಚಾಪ್ಟರ್ 2 ಸಂಗತಿ ಬಯಲಾಗಿದೆ. ಚಿತ್ರದ ಎರಡು ಭಾಗಗಳ ಅವಧಿ ಕೇವಲ ಒಂದೂವರೆ ಗಂಟೆ ಮಾತ್ರ ಆಗಿರಲಿದೆಯಂತೆ. ಹಾಗಾಗಿ ಸಂಪೂರ್ಣ ಚಿತ್ರವನ್ನು ಒಮ್ಮೆಗೆ ತೋರಿಸುವುದಕ್ಕಿಂತ, ಎರಡೂ ಭಾಗದಲ್ಲಿ ತಂದರೆ ಚೆನ್ನಾಗಿರುತ್ತದೆ ಎನ್ನುವ ಉದ್ದೇಶ ಚಿತ್ರತಂಡಕ್ಕಿದೆ. ಕುತೂಹಲ ಅಂದ್ರೆ, ಎರಡನೇ ಭಾಗದ ಚಿತ್ರದ ಶೀರ್ಷಿಕೆಗೆ ಟ್ಯಾಗ್‌ಲೈನ್ ಏನಿರುತ್ತೆ ಎನ್ನುವುದು. ಜಗ್ಗೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದಲ್ಲಿ ಅದಿತಿ ಪ್ರಭುದೇವ್, ಸುಮನ್ ರಂಗನಾಥ್ ಇದ್ದಾರೆ.
26 ವರ್ಷದ ಹಿಂದೆ ಜಗ್ಗೇಶ್ ಮಾಡಿದ Rap ಸಾಂಗ್ ಈಗ ರಿಲೀಸ್!