
ಮೈಸೂರು: ಮಾಂಗಲ್ಯಧಾರಣೆಯ ಬಳಿಕ ನವದಂಪತಿಗಳು ಕಲ್ಯಾಣ ಮಂಟಪದಿಂದ ‘ಯುವರತ್ನ’ ಚಿತ್ರದ ಚಿತ್ರೀಕರಣ ಸ್ಥಳಕ್ಕೆ ತೆರಳಿ ನಟ ಪುನೀತ್ ರಾಜಕುಮಾರ್ ಆಶೀರ್ವಾದ ಪಡೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ವಿದ್ಯಾರಣ್ಯಪುರಂ ಸೊಳ್ಳೆಪುರ ನಿವಾಸಿ ಯೋಗೇಶ್ ಹಾಗೂ ಚೈತ್ರಾ ಅವರ ವಿವಾಹ ಮಹೋತ್ಸವವು ಇಲ್ಲಿನ ನಾಗಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ನೆರವೇರಿತು.
ಮಾಂಗಲ್ಯಧಾರಣೆಯ ಬಳಿಕ ನೇರವಾಗಿ ಯುವರತ್ನ ಸಿನಿಮಾ ಚಿತ್ರೀಕರಣ ನಡೆಯು ತ್ತಿದ್ದ ಮಹಾರಾಜ ಕಾಲೇಜಿನ ಸೆಟ್‌ಗೆ ತೆರಳಿದ ನೂತನ ದಂಪತಿ ಆಶೀರ್ವಾದ ಪಡೆದರು. ವಧು- ವರ ಇಬ್ಬರೂ ಪುನೀತ್ ರಾಜಕುಮಾರ್ ಅಭಿಮಾನಿಗಳಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.