
- ನಾನು ಮತ್ತೆ ಎಂದಿಗೂ ಇಂಥ ಬೋಲ್ಡ್ ಅಥವಾ ಹಾಟ್ ದೃಶ್ಯ ಹಾಗೂ ಹಾಡಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಮೊದಲೇ ಹೇಳುತ್ತಾ, ನನ್ನ ಕಾಲೆಳೆಯುತ್ತಿದ್ದವರಿಗೆ ನಾನು ಹೇಳೋದು ಇಷ್ಟೆ ಈ ಚಿತ್ರದಲ್ಲಿ ನನ್ನ ಬರೀ ಹಾಡು ಅಥವಾ ಆ ಬೋಲ್ಡ್ ಸೀನ್‌ಗೆ ಮಾತ್ರ ಸೀಮಿತ ಮಾಡಿ ನೋಡಬೇಡಿ.
- ಈ ಹಾಟ್ ಸೀನ್ ಹಿಂದೆ- ಮುಂದೆ ಒಂದಿಷ್ಟು ಕತೆಗಳಿವೆ. ಹಾಗೆ ನಾನು ಯಾಕೆ ಕಾಣಿಸಿಕೊಳ್ಳುತ್ತೇನೆ ಎನ್ನುವುದಕ್ಕೆ ಕಾರಣವೂ ಇದೆ. ಹೀಗಾಗಿ ಸಿನಿಮಾ ನೋಡಿದ ಮೇಲೆ ನಾನು ಅಂಥ ಪಾತ್ರ ಮಾಡಿದ್ದು ಸರಿಯೋ, ತಪ್ಪೋ ಎಂಬುದನ್ನು ಆ ಮೇಲೆ ಮಾತನಾಡಿ. ಕೇವಲ ಟ್ರೇಲರ್ ನೋಡಿ ಇಡೀ ಸಿನಿಮಾ ಬಗ್ಗೆ ಮಾತನಾಡಿದರೆ ಹೇಗೆ?
‘ಲೈಫ್‌ನಲ್ಲಿ ಇನ್ಯಾವತ್ತೂ ಇಂಥ ಪಾತ್ರ ಮಾಡೋಲ್ಲ!’
- ಈ ಬೋಲ್ಡ್ ದೃಶ್ಯಗಳಲ್ಲಿ ನಟಿಸಬೇಕಾದರೆ ನಾನು ಎಷ್ಟು ಮುಜುಗರಕ್ಕೊಳಗಾದೆ ಎಂಬುದು ನನಗೆ ಮಾತ್ರ ಗೊತ್ತು. ಅವತ್ತು ಸೆಟ್‌ನಲ್ಲಿ ನಾನು, ಉಪೇಂದ್ರ, ಛಾಯಾಗ್ರಾಹಕರನ್ನು
ಹೊರತು ಪಡಿಸಿ ಬೇರೆ ಯಾರೂ ಇರಬಾರದು ಎಂದು ಹೇಳಿದ್ದಕ್ಕೆ ಉಪೇಂದ್ರ ಅವರೇ ನನ್ನ ಮಾತಿಗೆ ಬೆಲೆ ಕೊಟ್ಟು, ಎಲ್ಲರನ್ನು ಸೆಟ್‌ನಿಂದ ಆಚೆ ಕಳಿಸಿದರು. ಹಾಗೆ ನೋಡಿದರೆ
ಟ್ರೇಲರ್‌ನಲ್ಲಿ ಬರುವ ರೋಮ್ಯಾಂಟಿಕ್ ಹಾಟ್ ಹಾಡಿಗೆ ಉಪೇಂದ್ರ ಅವರೇ ನಿರ್ದೇಶಕರಂತೆ ಕೆಲಸ ಮಾಡಿದ್ದಾರೆ. ಬೇರೆಯವರು ಸೆಟ್‌ಗೆ ಬರಬಾರದು ಎನ್ನುವ ಕಾರಣಕ್ಕೆ.
- ಚಿತ್ರರಂಗದಲ್ಲಿ ಇದೇನು ಹೊಸದಲ್ಲ. ಯಾರೂ ಮಾಡದೆ ಇರೋದನ್ನು ನಾನು ತೆರೆ ಮೇಲೆ ಮಾಡಿಲ್ಲ. ಈಗಾಗಲೇ ಸಾಕಷ್ಟು ನಟಿಯರು ಇಂಥ ದೃಶ್ಯಗಳಲ್ಲಿ ನಟಿಸಿದ್ದಾರೆ. ಆದರೂ ನನ್ನ ಯಾಕೆ ಅಂಥ ನಟಿ ಎಂದು ನೋಡುತ್ತಿದ್ದಾರೋ ನನಗೆ ಗೊತ್ತಿಲ್ಲ. ‘ಐ ಲವ್ ಯು’ ಚಿತ್ರಕ್ಕೆ ನಾನು ನಾಯಕಿ ಎಂಬುದನ್ನೇ ಯಾರೂ ಗುರುತಿಸುತ್ತಿಲ್ಲ ಎನ್ನುವ ಬೇಸರ ಇದೆ.
- ಕೆಲವರಂತೂ ರಚಿತಾ ರಾಮ್ ಅವರಿಗೆ ಯಾವುದೇ ಅವಕಾಶಗಳಿಲ್ಲ. ಈ ಕಾರಣಕ್ಕೆ ಇಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ನನಗೆ ಸಾಕಷ್ಟು ಅವಕಾಶಗಳು ಇವೆ. ಯಾವ ಚಿತ್ರವನ್ನು ಯಾವಾಗ ಒಪ್ಪಿಕೊಳ್ಳಬೇಕೆಂಬ ಜ್ಞಾನ ನನಗೂ ಇದೆ. ಸದ್ಯಕ್ಕೆ ಶಿವಣ್ಣ ಜತೆ ‘ಆನಂದ್’ ಚಿತ್ರದಲ್ಲಿ ನಟಿಸುತ್ತಿರುವೆ.
ರಕ್ಷಿತಾ ಪ್ರೇಮ್ ಕೈಯಲ್ಲಿ ತಗಲ್ಲಾಕ್ಕೊಂಡ್ರಾ ಡಿಂಪಲ್ ಕ್ವೀನ್?
- ಆರ್ ಚಂದ್ರು ನಿರ್ದೇಶಿಸಿ, ಉಪೇಂದ್ರ ನಾಯಕನಾಗಿ ನಟಿಸಿರುವ ಈ ‘ಐ ಲವ್ ಯು’ ಚಿತ್ರದಲ್ಲಿ ನಾನು ಫೀಮೇಲ್ ವರ್ಷನ್ ಆಫ್ ಉಪೇಂದ್ರ. ನನ್ನ ಪಾತ್ರಕ್ಕೆ ಈ ಚಿತ್ರದಲ್ಲಿ ಎಷ್ಟು ಮಹತ್ವ ಇದೆ ಎಂಬುದನ್ನು ನೀವು ಸಿನಿಮಾ ನೋಡಿದರೆ ಗೊತ್ತಾಗುತ್ತದೆ. ಜೂನ್ 14ರಂದು ಎರಡೂ ಭಾಷೆಯಲ್ಲಿ ಸಿನಿಮಾ ಬರುತ್ತಿದೆ. ಮೊದಲ ಬಾರಿಗೆ ಟಾಲಿವುಡ್‌ಗೂ ಹೋಗುತ್ತಿರುವೆ. ನನ್ನ ಪಾಲಿಗೆ ಇದು ದೊಡ್ಡ ಸಿನಿಮಾ.
ಪ್ರೇಮ್ ಚಿತ್ರದ ವಿಶೇಷ ಪಾತ್ರದಲ್ಲಿ ರಚಿತಾ
ರಚಿತಾ ರಾಮ್ ಮತ್ತೊಂದು ದೊಡ್ಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಹೊಸ ಸಿನಿಮಾ ‘ಏಕ್ ಲವ್‌ಯಾ’ ಚಿತ್ರದ ವಿಶೇಷ ಪಾತ್ರದಲ್ಲಿ ರಚಿತಾ ಅಭಿನಯಿಸಲಿದ್ದಾರೆ. ರಕ್ಷಿತಾ ಪ್ರೇಮ್ ನಿರ್ಮಾಣದ ಸಿನಿಮಾ ಇದು. ರಕ್ಷಿತಾ ಸಹೋದರ ರಾಣಾ ಇದೇ ಮೊದಲು ನಾಯಕರಾಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.