
ಜಾಕಿ ಚಾನ್ ಯಾರಿಗೆ ಗೊತ್ತಿಲ್ಲ ಹೇಳಿ ಫೇಮಸ್ ಮಾರ್ಷಲ್ ಆರ್ಟಿಸ್ಟ್, ಖ್ಯಾತ ನಟ ನಿರ್ಮಾಪಕ. ಇಂದು ಜಾಕಿ ಚಾನ್‌ಗೆ ಪ್ರಪಂಚದೆಲ್ಲೆಡೆ ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ. ಜಾಗತಿಕ ಸಿನಿಮಾದಲ್ಲಿ ಈ ಚೈನೀಸ್ ನಟನಿಗೆ ತನ್ನದೇ ಆದ ಸ್ಥಾನವಿದೆ. ಆದರೆ ಜಾಕಿ ಚಾನ್ ಕುಟುಂಬದ ಕತೆ ಅವರ ಅಪ್ಪ ಅಮ್ಮನ ಕತೆ ಬಹುಶಃ ಬಹುತೇಕರಿಗೆ ಗೊತ್ತಿರಲು ಸಾಧ್ಯವಿಲ್ಲ. ಅವರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ...
ಜಾಗತಿಕ ಸಿನಿಮಾದಲ್ಲಿ ಅತ್ಯಂತ ಗುರುತಿಸಬಹುದಾದ ಮುಖಗಳಲ್ಲಿ ಒಬ್ಬರಾಗುವ ಮೊದಲು ಜಾಕಿ ಚಾನ್ ರಹಸ್ಯ, ಅಪರಾಧಗಳಿಂದ ಎಸ್ಕೇಪ್ ಆಗಿ ರೂಪುಗೊಂಡ ಕುಟುಂಬವೊಂದರಲ್ಲಿ ಜನಿಸಿದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಅವರ ಹುಟ್ಟು ಹಾಗೂ ಬದುಕಿನ ಕತೆ ಯಾವುದೇ ಸಿನಿಮಾಗೂ ಕಡಿಮೆ ಏನಿಲ್ಲ. ಜಾಕಿ ಚಾನ್ ಅವರ ತಂದೆ ಚಾರ್ಲ್ಸ್ ಚಾನ್ ಒಬ್ಬರು ಸ್ಪೈ ಆಗಿದ್ದರೆ ಅವರ ತಾಯಿ ಲೀ ಲೀ ಚಾನ್ ಪೊಲೀಸರಿಗೆ ಬೇಕಾದ ಫೇಮಸ್ ಡ್ರಗ್ ಡೀಲರ್ ಆಗಿದ್ದಳು. ಜಾಕಿ ಚಾನ್ ತಂದೆ ಚಾರ್ಲ್ಸ್ ಚಾನ್, ಚೀನಾದ ಅಂತರ್ಯುದ್ಧದ ಸಮಯದಲ್ಲಿ ರಾಷ್ಟ್ರೀಯತಾವಾದಿ ಚೀನೀ ಸರ್ಕಾರದ ಗೂಢಚಾರರಾಗಿದ್ದರು. 1940 ರ ದಶಕದಲ್ಲಿ ಅವರು ಗುಪ್ತಚರ ಮತ್ತು ಪ್ರತಿ-ಗೂಢಚರ್ಯೆ ಕಾರ್ಯದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅದಕ್ಕೆ ತದ್ವಿರುದ್ಧವಾಗಿ ಅವರ ತಾಯಿ ಲೀ ಲೀ ಚಾನ್ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಡ್ರಗ್ ಡೀಲರ್ ಹಾಗೂ ಜೂಜಾಡುವವಳಾಗಿದ್ದಳು. ಯುದ್ಧಕಾಲದ ಚೀನಾದಲ್ಲಿ ಅಫೀಮು ಕಳ್ಳಸಾಗಣೆದಾರ ಮತ್ತು ಜೂಜಾಡುವ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಳು.
ಆದರೆ ಸ್ಪೈ ಆಗಿ ಕೆಲಸ ಮಾಡುತ್ತಿದ್ದ ಚಾರ್ಲ್ಸ್ ಲೀ ಲೀಯನ್ನು ಬಂಧಿಸಿದಾಗ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದಾರೆ. ಲೀಲೀ ಕ್ರಿಮಿನಲ್ ಆಗಿದ್ದರೂ ಚಾರ್ಲ್ಸ್‌ಗೆ ಆಕೆಯ ಮೇಲೆ ಪ್ರೀತಿ ಮೂಡಿದೆ. ನಂತರ ಆಕೆಗೆ ಗಂಭೀರ ಶಿಕ್ಷೆ ಆಗೋದನ್ನು ತಪ್ಪಿಸಲು ಚಾರ್ಲ್ಸ್ ಚಾನ್ ಸಹಾಯ ಮಾಡಿದಾಗ ಅವರ ಹಾದಿಗಳು ಬದಲಾದವು. 1949 ರಲ್ಲಿ ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರದ ವಿಜಯದ ನಂತರ ಇಬ್ಬರೂ ಅಂತಿಮವಾಗಿ ವಿವಾಹವಾಗಿ ಬಂಧಿಸಲ್ಪಡುವ ಭಯದಿಂದ ಚೀನಾದಿಂದ ಪಲಾಯನ ಮಾಡಿದರು. ಸುಳ್ಳು ಹೆಸರುಗಳಲ್ಲಿ ಹಾಂಗ್ ಕಾಂಗ್‌ನಲ್ಲಿ ನೆಲೆಸಿದರು. ವರ್ಷಗಳ ಕಾಲ ಜಾಕಿ ಚಾನ್‌ಗೂ ತಮ್ಮ ಪೋಷಕರ ಗತಕಾಲದ ಬದುಕಿನ ಬಗ್ಗೆ ತಿಳಿದಿರಲಿಲ್ಲ. ಅವರು ತನ್ನ ಹೆತ್ತವರು ಕೇವಲ ಅಡುಗೆಯವರು ಹಾಗೂ ಮನೆ ಕೆಲಸ ಮಾಡುವವರು ಎಂದೇ ತಿಳಿದಿದ್ದರು. ಆದರೆ 1990 ರ ದಶಕದಲ್ಲಿ ಅವರ ತಂದೆಯೇ ಅವರ ಗುಪ್ತ ಗುರುತುಗಳು ತಮ್ಮ ಮೂಲ ತಮಗಿರುವ ರಾಜಕೀಯ ಅಪಾಯಗಳ ಬಗ್ಗೆ ಹೇಳಿದ ನಂತರವೇ ಅವರಿಗೆ ತಮ್ಮ ಪೋಷಕರ ಹಿನ್ನೆಲೆಯ ಬಗ್ಗೆ ತಿಳಿದಿತು. ನಂತರ ಇವರ ಜೀವನ ಕತೆಯನ್ನೇ ಆಧರಿಸಿ ಟ್ರೇಸಸ್ ಆಫ್ ದಿ ಡ್ರ್ಯಾಗನ್ ಎಂಬ ಸಾಕ್ಷ್ಯಚಿತ್ರವನ್ನು ಕೂಡ ನಿರ್ಮಾಣ ಮಾಡಲಾಯ್ತು. ಇದು ಜಾಕಿ ಚಾನ್ ಅವರ ಆರಂಭಿಕ ಜೀವನ ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ತಿಳಿಸುತ್ತದೆ. ಒಂದು ಹಂತದಲ್ಲಿ ಜಾಕಿಚಾನ್ ಪೋಷಕರು ಆತನನ್ನು ಮಾರುವುದಕ್ಕೆ ಯತ್ನಿಸಿದ್ದರು. ಆದರೆ ಸ್ನೇಹಿತನೋರ್ವನ ಮನವೊಲಿಕೆಯಿಂದಾಗಿ ಅವರು ಅದರಿಂದ ಹಿಂದೆ ಸರಿದರು ಎಂಬ ಮಾಹಿತಿ ಇದೆ.
ಇದನ್ನೂ ಓದಿ: ಹೆಂಡ್ತಿ ತವರಿಗೆ ಹೋಗಿದ್ದೇ ತಪ್ಪಾಯ್ತು: ಅತ್ತೆ ಮನೆಗೆ ಜೆಸಿಬಿ ನುಗ್ಗಿಸಿದ ಅಳಿಯ
ಜಾಕಿ ಚಾನ್ ಅವರ ಈ ಜೀವನಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡ್ತಿದ್ದಾರೆ. ಜಾಕಿ ಚಾನ್ ಅವರ ಬಗ್ಗೆ ಹೇಳುವುದಾದರೆ ಜಾಕಿ ಚಾನ್ ಜನಿಸಿದ್ದು, ಬ್ರಿಟಿಷ್ ಹಾಂಗ್ ಕಾಂಗ್‌ನಲ್ಲಿ 1954ರ ಏಪ್ರಿಲ್ 7ರಂದು. ಅವರ ಮೂಲ ಹೆಸರು ಚಾನ್ ಕಾಂಗ್ ಸಾಂಗ್. 1981ರಲ್ಲಿ ಚಾನ್ ತೈವಾನೀಸ್ ನಟಿ ಜೋನ್ ಲಿನ್ ಅವರನ್ನು ಭೇಟಿಯಾಗಿ ನಂತರ. ಡಿಸೆಂಬರ್ 1982 ರಲ್ಲಿ, ಅವರು ಲಾಸ್ ಏಂಜಲೀಸ್‌ನಲ್ಲಿ ವಿವಾಹವಾದರು. ವಿವಾಹದ ಮರುದಿನವೇ ಅವರ ಮಗ ಜೇಸಿ ಚಾನ್ ಜನಿಸಿದ್ದ. ಈ ಮಧ್ಯೆ ಚಾನ್ ಎಲೈನ್ ಎನ್‌ಜಿ ಯಿ-ಲೀ ಜೊತೆ ಅವರು ಹೊಂದಿದ್ದ ವಿವಾಹೇತರ ಸಂಬಂಧವೂ ಸಾಕಷ್ಟು ಸುದ್ದಿಯಾಗಿತ್ತು. ಆಕೆ ತನ್ನ ಪುತ್ರಿ ಎಟ್ಟಾ ಎನ್‌ಜಿ ಚೋಕ್ ಲ್ಯಾಮ್ ಜನಿಸುವುದಕ್ಕೆ ಮೊದಲು ಸಾರ್ವಜನಿಕವಾಗಿ ಜಾಕಿ ಜಾನ್ ನನ್ನ ಮಗಳ ತಂದೆ ಎಂದು ಹೇಳಿದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಯ್ತು. ಈ ಬಗ್ಗೆ ಜಾಕಿ ಜಾನ್ ಸುದ್ದಿಗೋಷ್ಠಿ ಮಾಡಬೇಕಾಯ್ತು, ಸುದ್ದಿಗೋಷ್ಠಿ ನಡೆಸಿದ ಜಾಕಿ ಚಾನ್ ತಮ್ಮ ಸಂಬಂಧದ ಬಗ್ಗೆ ವಿಷಾದ ವ್ಯಕ್ತಪಡಿಸಿ ಜಗತ್ತಿನ ಅನೇಕ ಪುರುಷರು ಮಾಡುವ ತಪ್ಪನ್ನು ಮಾತ್ರ ನಾನು ಮಾಡಿದ್ದೇನೆ ಎಂದು ಹೇಳಿದ್ದರು.
ಇದನ್ನೂ ಓದಿ:
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.