
ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Kannada Serial ) ಜಯದೇವ್ ಮತ್ತೆ ತೊಂದರೆ ಕೊಡ್ತಿದ್ದಾನೆ ಎಂದು ಭೂಮಿಕಾ ಬೇಸರ ಮಾಡಿಕೊಂಡಿದ್ದಾಳೆ. ಅವನ ಮುಂದೆ ತಾಳ್ಮೆ ಕಟ್ಟೆ ಒಡೆಯುತ್ತದೆ, ಸಂಗ್ರಾಮ ಆಗುತ್ತದೆ ಎಂದು ಡೈಲಾಗ್ ಹೊಡೆದಿದ್ದ ಭೂಮಿಕಾ ಈಗ ದೇಶಾಂತರ ಹೋಗುವ ಆಲೋಚನೆ ಮಾಡುತ್ತಿದ್ದಾಳೆ.
ನೀನು ಈ ಮನೆಯಿಂದ ದೂರ ಇದ್ದರೆ ಮಾತ್ರ ನಿನ್ನವರು ಚೆನ್ನಾಗಿ ಇರುತ್ತಾರೆ, ಇಲ್ಲವಾದಲ್ಲಿ ನಿನ್ನ ಮಗಳನ್ನು ಮುಗಿಸಿದ ಹಾಗೆ ನಿಮ್ಮ ಮನೆಯವರನ್ನು ಮುಗಿಸ್ತೀವಿ ಎಂದು ಶಾಕುಂತಲಾ ಬ್ಲ್ಯಾಕ್‌ಮೇಲ್ ಮಾಡಿದ್ದಳು. ಹೀಗಾಗಿ ಭೂಮಿಕಾ ತನ್ನ ಮಗ ಆಕಾಶ್ ದಿವಾನ್, ಮಲ್ಲಿ ಜೊತೆ ಯಾರಿಗೂ ಗೊತ್ತಿಲ್ಲದ ಹಾಗೆ ಯಾವುದೋ ಊರಿನಲ್ಲಿ ವಾಸವಿದ್ದಳು.
ಭೂಮಿಕಾಳನ್ನು ಊರೂರು ಅಲೆದು ಹುಡುಕಿದ್ದ ಗೌತಮ್‌ಗೆ ಕುಶಾಲನಗರದಲ್ಲಿಯೇ ಇದ್ದಾರೆ ಎನ್ನೋದು ಗೊತ್ತಾಗಿತ್ತು. ಭೂಮಿಕಾ ದೂರ ಇರಿ ಎಂದು ಹೇಳಿದ್ದಕ್ಕೆ ಅವನು ಬೆಂಗಳೂರಿಗೆ ಬಂದಿದ್ದನು. ಆದರೆ ಮಲ್ಲಿಯ ಪ್ಲ್ಯಾನ್‌ನಿಂದಾಗಿ ಗೌತಮ್ ಇದ್ದ ವಠಾರದಲ್ಲಿ ಭೂಮಿಕಾ ಇರೋದು ಕೂಡ ಫಿಕ್ಸ್ ಆಗಿತ್ತು. ತನ್ನ ತಂದೆ ಗೌತಮ್ ಎನ್ನೋದು ಆಕಾಶ್‌ಗೆ ಗೊತ್ತಾಗಿತ್ತು.
ಇನ್ನೊಂದು ಕಡೆ ಜಯದೇವ್ ಕದ್ದ ನನ್ನ ಮಗಳು ಎಲ್ಲಿದ್ದಾಳೆ ಎಂದು ಗೌತಮ್ ಹುಡುಕಾಟ ಮಾಡುತ್ತಿದ್ದನು. ಆ ಮಗು ಮಕ್ಕಳ ಸಾಗಾಣಿಕೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ, ಅವಳು ಬದುಕಿದ್ದಾಳೆ ಎನ್ನೋದು ಗೌತಮ್‌ಗೆ ಗೊತ್ತಾಗಿತ್ತು. ಮಗಳನ್ನು ಹುಡುಕಿದರೆ ಭೂಮಿಕಾ ನನ್ನ ಜೊತೆ ಬದುಕುತ್ತಾಳೆ ಎಂದು ಗೌತಮ್ ಆಸೆ ಇಟ್ಟುಕೊಂಡಿದ್ದನು. ಹೀಗೊಮ್ಮೆ ಡ್ರೈವಿಂಗ್‌ಗೆ ಹೋದಾಗ ಅವನಿಗೆ ಒಂದು ಹುಡುಗಿ ಸಿಕ್ಕಿದಳು, ಅವಳಿಗೆ ಯಾರೂ ಇಲ್ಲ ಎಂದು ಅವನು ಆ ಮಗುವನ್ನು ದತ್ತು ತಗೊಂಡನು.
ಜಯದೇವ್ ಮತ್ತೆ ನಮಗೆ ತೊಂದರೆ ಕೊಡ್ತಾನೆ ಎಂದು ಭೂಮಿಕಾ ದೇಶಾಂತರ ಹೋಗುವ ಆಲೋಚನೆಯಲ್ಲಿದ್ದಾಳೆ. ಇನ್ನು ಮಲ್ಲಿಗೂ ಕೂಡ ಆ ಹೆಣ್ಣು ಮಗು ಬದುಕಿದೆ ಎಂದು ಆನಂದ್ ಹೇಳಿದ್ದಾನೆ. ಈ ವಿಷಯವನ್ನು ಅವಳು ಭೂಮಿಗೆ ಹೇಳಿದ್ದಾಳೆ.
ಮಗುವಿನ ಕರೆಗೆ ಭೂಮಿ ಓಗುಡದೆ ಇರುತ್ತಾಳಾ? ಮಗಳಿಗೋಸ್ಕರ ಅವಳು ದೇಶಾಂತರ ಹೋಗದೆ ಇಲ್ಲೇ ಉಳಿದುಕೊಳ್ಳುವ ಸಾಧ್ಯತೆ ಇದೆ. ಗೌತಮ್ ಜೊತೆ ಸೇರಿ ಭೂಮಿ ಕೂಡ ಮಗಳನ್ನು ಹುಡುಕಬಹುದು.
ಕರುಳ ಕುಡಿಯ ಕರೆಗೆ ದೂರ ಹೋದ ಅಮ್ಮ ಹಿಂದಿರುಗಲೇಬೇಕು! ಗೌತಮ್ ದಿವಾನ್- ಭೂಮಿಕಾ ಸದಾಶಿವ ಒಂದಾಗೋ ಅಮೃತ ಘಳಿಗೆ ಬಂದೇಬಿಡ್ತು! ಎಂಬ ಕ್ಯಾಪ್ಶನ್ ಅಡಿಯಲ್ಲಿ ವಾಹಿನಿಯು ಹೊಸ ಪ್ರೋಮೋವನ್ನು ಹಂಚಿಕೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗೌತಮ್, ಭೂಮಿ ಒಂದಾಗುವ ಸಾಧ್ಯತೆಯಿದೆ. ಇದಕ್ಕೂ ಮಿಗಿಲಾಗಿ ಧಾರಾವಾಹಿಯಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.