ಆಲಿಯಾ ತನ್ನ ಬಗ್ಗೆ ಹೇಳಿಕೊಂಡ 3 ಮಾತುಗಳು!

Published : Feb 19, 2019, 10:05 AM IST
ಆಲಿಯಾ ತನ್ನ ಬಗ್ಗೆ ಹೇಳಿಕೊಂಡ 3 ಮಾತುಗಳು!

ಸಾರಾಂಶ

ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಯಾಗಿ ಮುಗಿದಿವೆ. ಅಲಿಯಾ ಖುಷಿಯಾಗಿದ್ದರೂ, ಬೇಸರದಲ್ಲಿದ್ದರೂ ಅದರ ಜೊತೆ ಜೊತೆಗೆ ಈ ಸಂಬಂಧವನ್ನು ಪೋಣಿಸಿ ರುಚಿಕಟ್ಟಾಗಿಯೂ ಕೆಲವರು ಮಾತನಾಡಿದ್ದಾರೆ. ಇದನ್ನೆಲ್ಲಾ ಸಹಿಸಿಕೊಂಡಿದ್ದ ಅಲಿಯಾ ತನ್ನ ಬಗ್ಗೆ ಮೂರು ವಿಚಾರಗಳನ್ನು ಹೇಳಿಕೊಳ್ಳುವ ಮೂಲಕ ಸಮಗ್ರವಾದ ಉತ್ತರ ನೀಡುವ ಪ್ರಯತ್ನವನ್ನಂತೂ ಮಾಡಿದ್ದಾರೆ.  

* ನಾನು ಸಪ್ಪಗೆ ಕುಳಿತಿದ್ದರೆ ಬಹಳಷ್ಟು ಜನ ಹತ್ತಿರ ಬಂದು ಯಾಕೆ ಸಪ್ಪಗಿದ್ದೀಯಾ, ಏನಾಯಿತು ಎಂದು ಉದ್ವೇಗಕ್ಕೆ ಒಳಗಾಗುತ್ತಾರೆ. ನನಗೆ ಯಾರು ನಾಟಕ ಮಾಡುತ್ತಿದ್ದಾರೆ, ಯಾರು ನಿಜವಾದ ಕಾಳಜಿ ತೋರುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಅಂತವರಿಗೆ ನಾನು ಹೇಳುವುದು, ಸಪ್ಪಗೆ ಇದ್ದೀನಿ ಎಂದರೆ ಏನೋ ಆಗಿದೆ ಎಂದಲ್ಲ. ಬದಲಿಗೆ ನನ್ನೊಳಗೆ ಹೊಸದಾದ ಆಲೋಚನೆಗಳು, ಹೊಸ ದಾರಿಗಳು ತೆರೆದುಕೊಳ್ಳುತ್ತಿವೆ ಎಂದರ್ಥ.

* ನನ್ನ ಮದುವೆಯ ಬಗ್ಗೆ ಸಾಕಷ್ಟು ಜನ ಕೇಳುತ್ತಾರೆ. ಅವರಿಗೆ ನನ್ನ ಮದುವೆಯಿಂದ ಆಗುವ ಪ್ರಯೋಜನ ಏನಿದೆಯೋ ಗೊತ್ತಿಲ್ಲ. ಆದರೆ ನಾನು ಈಗಾಗಲೇ ನನ್ನ ಕೆಲಸದೊಂದಿಗೆ ಮದುವೆಯಾಗಿದ್ದೇನೆ. ನನ್ನ ಕೆಲಸವೇ ಈಗ ನನ್ನ ಸಂಗಾತಿ. ಇದರೊಂದಿಗೆ ಒಳ್ಳೆಯ ಸಂಬಂಧವೊಂದು ನನ್ನ ಜೊತೆಗೆ ಸಂಗಾತಿಯಾಗಿ ನಡೆದುಬರುತ್ತಿದೆ. ಸದ್ಯಕ್ಕೆ ನನಗೆ ಅಷ್ಟು ಸಾಕು.

ಆಲಿಯಾ ಭಟ್ ಪ್ರೀತಿಗೆ ತಂದೆಯಿಂದ ಸಿಕ್ತು ಗ್ರೀನ್ ಸಿಗ್ನಲ್

*ಕಳೆದ ಐದು ವರ್ಷದಲ್ಲಿ ನಾನು ಸಾಕಷ್ಟು ಬದಲಾಗಿದ್ದೇನೆ. ಬೇರೆಯವ ಮಾತಿಗೆ ಅನುಗುಣವಾಗಿ ಬದುಕುವುದಕ್ಕೆ ಆಗುವುದಿಲ್ಲ ಎನ್ನುವ ಅರಿವು ನನಗಾಗಿದೆ. ಸಮಯ ಇದ್ದ ಹಾಗೆಯೇ ಇರುವುದಿಲ್ಲ. ಅದರೊಂದಿಗೆ ನಾವೂ ಬದಲಾಗುತ್ತಿರುತ್ತೇವೆ. ಸಂಬಂಧಗಳೂ ಬದಲಾಗಬಹುದು. ಆದರೆ ವಾಸ್ತವದಲ್ಲಿ ಇರುವ ಸೌಂದರ್ಯವನ್ನು ಸವಿಯುತ್ತಾ ಮುಂದೆ ಸಾಗಬೇಕು ಅಷ್ಟೇ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!