ಸಹ ನಟಿಯರ ಬಗ್ಗೆ ಅನುಷ್ಕಾ ಹೇಳುವುದೇನು?

Published : Feb 18, 2019, 10:34 AM IST
ಸಹ ನಟಿಯರ ಬಗ್ಗೆ ಅನುಷ್ಕಾ ಹೇಳುವುದೇನು?

ಸಾರಾಂಶ

ಬಹುತೇಕ ನಟಿಯರಿಗೆ ಒಂದು ಕೊರಗು ಇದ್ದೇ ಇರುತ್ತದೆ. ಅದು ತಾವು ಎಷ್ಟೇ ಕಷ್ಟ ಬಿದ್ದರೂ ಕೆಲವು ವೇಳೆ ನಟರಿಗೆ ಸಿಕ್ಕಷ್ಟು ಪ್ರಾಮುಖ್ಯತೆ ನಮಗೆ ದಕ್ಕುವುದಿಲ್ಲ ಎನ್ನುವುದು. ಇದಕ್ಕೆ ಕೆಲವರು ಓಪನ್ ಆಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಈಗ ಆ ಸರದಿ ಅನುಷ್ಕಾ ಶರ್ಮಾ ಅವರದ್ದು.

ಸ್ವಲ್ಪ ಖಾರವಾಗಿಯೇ ಸಂದರ್ಶನವೊಂದರಲ್ಲಿ ತಮ್ಮ ಅಸಮಾಧಾನ ತೋಡಿಕೊಂಡ ಅನುಷ್ಕಾ ಪ್ರಕಾರ ನಟಿಯರಿಗೆ ಜವಾಬ್ದಾರಿ ಹೆಚ್ಚು. ಸಿನಿಮಾ ಮತ್ತು ವೈಯುಕ್ತಿಕ ಬದುಕನ್ನು ಒಂದು ಹಳಿಯ ಮೇಲೆ ಸಾಗಿಸಿಕೊಂಡು ಹೋಗಬೇಕಾದದ್ದು ಅವರ ಬಹುಮುಖ್ಯ ಸವಾಲು. ಆದರೆ ನಮ್ಮಲ್ಲಿ ಹಲವರು ನಟಿಯರ ಬಗ್ಗೆ ಹೆಚ್ಚು ಟೀಕೆಗಳನ್ನೇ ಮಾಡುತ್ತಾ ಬಂದಿದ್ದಾರೆ. ಆದರೆ ನಮಗೆ ಇರುವ ಬ್ಯುಸಿ ಶೆಡ್ಯೂಲ್‌ಗಳಲ್ಲಿ ಈ ರೀತಿ ನಾನ್‌ಸೆನ್ಸ್ ಆಗಿ ನಡೆದುಕೊಳ್ಳಲು ಸಮಯವೇ ಸಿಕ್ಕುವುದಿಲ್ಲವಂತೆ.

ಅಲ್ಲದೇ ಕೆಲಸಕ್ಕೆ ಬದ್ಧತೆ ತೋರುವುದರಲ್ಲಿಯೇ ಹೆಚ್ಚು ಸಮಯ ಕಳೆಯುತ್ತೇನೆ. ನನ್ನ ಸಹ ನಟಿಯರು, ಇತರ ನಟಿಯರೂ ನನ್ನಂತೆಯೇ ಇರುತ್ತಾರೆ. ಹಾಗಾಗಿ ನನ್ನಂತೆಯೇ ಅವರೂ ಎಂದುಕೊಳ್ಳುತ್ತೇನೆ ಎನ್ನುವ ಅನುಷ್ಕಾಗೆ ಸಹೋದ್ಯೋಗಿ ನಟಿಯರ ಬಗ್ಗೆ ಇರುವ ಅಪಾರ ಪ್ರೀತಿಯನ್ನು ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ. 

ನಟಿಯರಿಗೆ ಜವಾಬ್ದಾರಿ ಹೆಚ್ಚು. ಸಿನಿಮಾ ಮತ್ತು ವೈಯುಕ್ತಿಕ ಬದುಕನ್ನು ಒಂದು ಹಳಿಯ ಮೇಲೆ ಸಾಗಿಸಿಕೊಂಡು ಹೋಗಬೇಕಾದದ್ದು ಅವರ ಬಹುಮುಖ್ಯ ಸವಾಲು - ಅನುಷ್ಕಾ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ