ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾದ ’ಉರಿ’ ಚಿತ್ರತಂಡ

By Web DeskFirst Published Feb 18, 2019, 5:06 PM IST
Highlights

ಪುಲ್ವಾಮಾ ಉಗ್ರ ದಾಳಿಗೆ 49 ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆಯನ್ನು ಇಡೀ ವಿಶ್ವವೇ  ಖಂಡಿಸಿದೆ. ಭಯೋತ್ಪಾದನೆ ನಿರ್ನಾಮಕ್ಕೆ ಇಡೀ ದೇಶ ಟೊಂಕ ಕಟ್ಟಿದೆ. 

ಜಮ್ಮು, ಕಾಶ್ಮೀರ (ಫೆ.18): ಪುಲ್ವಾಮಾ ಉಗ್ರ ದಾಳಿಗೆ 49 ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆಯನ್ನು ಇಡೀ ವಿಶ್ವವೇ  ಖಂಡಿಸಿದೆ. ಭಯೋತ್ಪಾದನೆ ನಿರ್ನಾಮಕ್ಕೆ ಟೊಂಕ ಕಟ್ಟಿದೆ. 

ದೇಶಕ್ಕಾಗಿ ಪ್ರಾಣತೆತ್ತ ಯೋಧರ ಕುಟುಂಬಗಳಿಗೆ ದೇಶದ ಪ್ರಮುಖರು, ಸಾರ್ವಜನಿಕರು ನೆರವಿನ ಹಸ್ತ ಚಾಚಿದ್ದಾರೆ. 

ಅಂ.ರಾ.ಕಬಡ್ಡಿ ಲೀಗ್‌ನ ಲಾಭ ಯೋಧರ ಕುಟುಂಬಕ್ಕೆ!

ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಉರಿ ಚಿತ್ರತಂಡ ಹುತಾತ್ಮ ಯೋಧರ ಕುಟುಂಬಗಳಿಗೆ 1 ಕೋಟಿ ಧನ ಸಹಾಯ ಮಾಡಿದೆ.  ಆರ್ಮಿ ವೆಲ್ಫೇರ್ ಫಂಡ್ ಗೆ ಚೆಕ್ ನೀಡಿದೆ. 

ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಸೇರಿದಂತೆ ಸಾಕಷ್ಟು ಮಂದಿ ನೆರವು ನೀಡಿದ್ದಾರೆ. 

ಪುಲ್ವಾಮ ದಾಳಿ: ಹುತಾತ್ಮರ ಕುಟುಂಬಗಳಿಗೆ ಬಿಸಿಸಿಐ 5 ಕೋಟಿ?

2016 ರ ಸೆಪ್ಟೆಂಬರ್ 18 ರಂದು ಉರಿ ಸೇನಾ ನೆಲೆಮೇಲೆ ಪಾಕ್ ಭಯೋತ್ಪಾದಕರು ದಾಳಿ ಮಾಡ್ತಾರೆ. ಈ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಉತ್ತರವಾಗಿ ಭಾರತೀಯ ಸೈನಿಕರು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಾರೆ. ಸರ್ಜಿಕಲ್ ದಾಳಿಗೆ ಭಾರತೀಯ ಸೇನೆ ಹೇಗೆ ತಯಾರಿ ನಡೆಸಿತ್ತು? ಅವರಿಗೆ ಎದುರಾದ ಕಷ್ಟಗಳೇನು ಎಂಬುದನ್ನು ಉರಿ ಸಿನಿಮಾ ಹೇಳುತ್ತದೆ.  ಆದಿತ್ಯ ಧಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 

 

click me!