ಸಸ್ಯಾಧರಿತ ಮೊಟ್ಟೆ ಹಾಗೂ ಮಾಂಸದಿಂದ ಪರಿಸರ ಮಾಲಿನ್ಯ ತಪ್ಪಿಸಲು ಸಾಧ್ಯವಿದೆ. ಓರಿಜನಲ್ ಮೊಟ್ಟೆ, ಮಾಸಂದಷ್ಟೇ ಈ ಸಸ್ಯಾಧರಿತ ಮೊಟ್ಟೆ, ಮಾಂಸ ಕೂಡ ರುಚಿಕರವಾಗಿರುತ್ತೆದ.
ಮೊಟ್ಟೆ ಹಾಗೂ ಮಾಂಸ ಎಲ್ಲವೂ ಸಸ್ಯಾಹಾರವಾದರೆ ಹೇಗೆ? ಸಾಧ್ಯವೇ ಇಲ್ಲ ಅಲ್ಲವೇ? ಮೊಟ್ಟೆಗೆ ಕೋಳಿಯನ್ನೇ ಆಶ್ರಯಿಸಬೇಕು, ಮಾಂಸಹಾರಕ್ಕೆ ಕೋಳಿ, ಮೇಕೆ, ಕುರಿ, ದನವೇ ಬೇಕು ಅಲ್ಲವೇ? ಹಾಗಾಗಿ ಬಹಳಷ್ಟು ಜನರಿಗೆ ಕೆಲವೊಮ್ಮೆ ಮೊಟ್ಟೆ ತಿನ್ನಬೇಕು ಎನ್ನಿಸಿದರೂ ತಿನ್ನುವುದಿಲ್ಲ, ಮಾಂಸವನ್ನು ಮುಟ್ಟಲು ಹೋಗುವುದಿಲ್ಲ. ಆದರೆ, ಈ ಎಲ್ಲವೂ ಸಸ್ಯಾಹಾರವಾದರೆ ಹೇಗೆ?
ಹೌದು. ಕೋಳಿ ಮೊಟ್ಟೆಯಷ್ಟೇ ಎಲ್ಲ ರೀತಿಯಿಂದಲೂ ಇರುವ ವೆಗಾನ್ ಎಗ್(ಸಸ್ಯಹಾರಿ ಮೊಟ್ಟೆ) ತಯಾರಿಸಲಾಗಿದೆ. ಅಂದರೆ ಇದು ಸಸ್ಯಗಳನ್ನಾಧರಿಸಿ ಮಾಡಿರುವ ಮೊಟ್ಟೆ. ಜೊತೆಗೆ, ಶೀಘ್ರವೇ ಸಸ್ಯಾಧರಿತ ಮಟನ್, ಚಿಕನ್, ಗೋಮಾಂಸವನ್ನು ಸಿದ್ಧಪಡಿಸುವ ಕೆಲಸವನ್ನು ದಿಲ್ಲಿಯ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಮಾಡುತ್ತಿದೆ. ಈ ವಿಷಯದ ದಿಲ್ಲಿ ಐಐಟಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಾಹಿತಿ ನೀಡಿದ್ದನ್ನು ನೀವು ನೆನಪಿಸಿಕೊಳ್ಳಬಹುದು.
ಮುಂದುವರಿದ ಲಾಕ್‌ಡೌನ್ ಹೀರೋ ಸೋನು ಸೋದ್ ಅವರ ಸಮಾಜಮುಖಿ ಕಾರ್ಯ
ಈ ಸಸ್ಯಾಧರಿತ ಮಾಂಸಮಾವಾಗಲೀ, ಮೊಟ್ಟೆಯಾಗಲಿ ರುಚಿ ಮತ್ತು ಪ್ರೋಟಿನ್‌ಗಳ ದೃಷ್ಟಿಯಿಂದ ಮೂಲ ಮೊಟ್ಟೆ ಅಥವಾ ಮಾಂಸಕ್ಕಿಂತ ಕಡಿಮೆ ಏನೂ ಇಲ್ಲ. ಓರಿಜನಲ್ ಮೊಟ್ಟೆ ಹಾಗೂ ಮಾಂಸ, ಚಿಕನ್‌ಗಳು ಯಾವೆಲ್ಲ ಆರೋಗ್ಯಕಾರಿ ಸಂಗತಿಗಳನ್ನು ಒಳಗೊಂಡಿವೆಯೋ ಆ ಎಲ್ಲ ಸಂಗತಿಗಳನ್ನು ಇವು ಒಳಗೊಂಡಿವೆ. ಮತ್ತು ನೋಡಲು ಅದೇ ರೀತಿಯಲ್ಲೂ ಇರುತ್ತವೆ. ಇಲ್ಲಿ ನೀವು ಯಾವುದೇ ವ್ಯತ್ಯಾಸವನ್ನು ನೀವು ಗುರುತಿಸಲಾರರಿ. ಅಷ್ಟರಮಟ್ಟಿಗೆ ಡಿಟ್ಟೋ ಆಗಿರುತ್ತಿವೆ.
ಹೆಸರು ಬೇಳೆಯಿಂದ ಮೊಟ್ಟೆ!
ಮೊಟ್ಟೆಯನ್ನು ಹೆಸರು ಬೇಳೆಯಿಂದ ಮಾಡಲಾಗಿದ್ದು, ಕಳೆದ ವರ್ಷವೇ ನಡೆದ ಸೆಪ್ಟೆಂಬರ್ 21ರಂದು ಇಂಡಸ್ಟ್ರೀ ಡೇ ದಿನದಂದು ನಡೆದ ಪ್ರದರ್ಶನದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಐಐಟಿ ದಿಲ್ಲಿಯ ಸೆಂಟ್ರಲ್ ಫಾರ್ ರೂರಲ್ ಡೆವಲಪ್‌ಮೆಂಟ್‌ನ ಅಸಿಸ್ಟಂಟ್ ಪ್ರೊಫೆಸರ್ ಕಾವ್ಯ ದಶೋರಾ ಅವರ ನೇತೃತ್ವದಲ್ಲಿ ಈ ಹೆಸರು ಬೇಳೆ ಮೊಟ್ಟೆಯನ್ನು ತಯಾರಿಸಲಾಗಿದೆ.
ನೀವು ಈ ಸಸ್ಯಾಧರಿತ ಅಂಡಾ ಭುರ್ಜಿ(ಮೊಟ್ಟೆ)ಯನ್ನು plantmade.in ವೆಬ್‌ಸೈಟ್‌ನಿಂದ ಖರೀದಿಸಬಹುದಾಗಿದೆ.
ಎಲ್ಲ ಪ್ರೋಟಿನ್ ಇದೆ
ಈ ಹೆಸರು ಬೇಳೆ ಮೊಟ್ಟೆಯ ವಿಶೇಷ ಏನೆಂದರೆ, ಓರಿಜನಲ್ ಮೊಟ್ಟೆ ಅಂದರೆ ಕೋಳಿ ಮೊಟ್ಟೆಯಲ್ಲಿರುವ ಎಲ್ಲ ನೈಸರ್ಗಿಕ ಸಂಗತಿಗಳನ್ನು ಒಳಗೊಂಡಿದೆ. ಅಂದರೆ, ಓರಿಜನಲ್ ಮೊಟ್ಟೆಯಲ್ಲಿರುವ ಪ್ರೋಟಿನ್‌ಗಳಿರುತ್ತವೆ. ರುಚಿಯಲ್ಲೂ ಯಾವುದೇ ವ್ಯತ್ಯಾಸವಿರುವುದಿಲ್ಲ ಮತ್ತು ನೋಡಲು ಕೂಡ ಅದೇ ರೀತಿಯಲ್ಲಿರುತ್ತದೆ.
Classroom on Wheels: ಚಲಿಸುವ ಬಸ್‌ನಲ್ಲಿ ಕ್ಲಾಸ್‌ರೂಮ್
ಈ ಸಸ್ಯಾಧರಿತ ಮೊಟ್ಟೆ ಶೂನ್ಯ ಕೊಲೆಸ್ಟ್ರಾಲ್ ಹೊಂದಿದ್ದು, ಅಂಟು ರಹಿತವಾಗಿದೆ. ಹಾಗೆಯೇ ಪ್ರಾಣಿಜನ್ಯದಿಂದ ಬರುವ ಯಾವುದೇ ರೋಗಗಳ ಅಪಾಯವಿರುವುದಿಲ್ಲ. ಅಂದರೆ, ಹಕ್ಕಿಜ್ವರ. ಜೊತೆಗೆ ಪ್ರಾಣಿ ವಧೆಯನ್ನು ತಡೆಯಬೇಕು ಎನ್ನುವ ಕಲ್ಪನೆಗೆ ಇದು ತುಂಬ ನೆರವು ನೀಡುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.
ಹೆಸರು ಬೇಳೆ ರೀತಿಯಲ್ಲೇ ಮಾಕ್ ಮೀಟ್ ಅರ್ಥಾತ್ ಸಸ್ಯಾಧರಿತ ಮಾಂಸ ಕೂಡ ಯಾವುದೇ ಅಪಾಯಕಾರಿ ಮೂಲಗಳನ್ನು ಒಳಗೊಂಡಿಲ್ಲ. ಅದು ಕೂಡ ಓರಿಜನಲ್ ಮಾಂಸದ ರೀತಿಯಲ್ಲೇ ಇರುತ್ತದೆ. ಜೀರೋ ಕೊಲೆಸ್ಟ್ರಾಲ್ ಸೇರಿದಂತೆ ಇನ್ನಿತರ ಅಪಾಯಕಾರಿ ಸಂಗತಿಗಳಿರುವುದಿಲ್ಲ.
ನಿವೃತ್ತಿ ಬಳಿಕವೂ ವಿದ್ಯಾದಾನ ಮಾಡುತ್ತಿರುವ ಶಿಕ್ಷಕ
ಪ್ರಾಣಿಗಳ ವಧೆ ಮೂಲಕ ಮಾಂಸ ಉತ್ಪಾದನೆಯು ಹಸಿರುಮನೆ ಹೊರಸೂಸುವಿಕೆಗೆ ಒಂದು ದೊಡ್ಡ ಅಪಾಯಕಾರಿ ಕಾರಣವಾಗಿದೆ. ಈ ಸಸ್ಯಾಧರಿತ ಉತ್ಪನ್ನಗಳು ಮಾಂಸಾಹಾರಿ ಭಕ್ಷ್ಯಗಳಿಗೆ ರುಚಿಯಾದ, ಆರೋಗ್ಯಕರ ಪರ್ಯಾಯವಾಗಿ ಪರಿಸರವನ್ನು ಉಳಿಸಲು ಕೂಡ ಸಹಾಯಕವಾಗಿವೆ ಎಂದು ಹೇಳಬಹುದು. ಒಂದೊಮ್ಮೆ ದೊಡ್ಡ ಪ್ರಮಾಣದಲ್ಲಿ ಈ ಸಸ್ಯಾಧರಿತ ಮೊಟ್ಟೆ ಹಾಗೂ ಮಾಂಸಗಳು ಮಾರಾಟ ಕಂಡರೆ ಇದರಿಂದ ರೈತರಿಗೂ ಲಾಭವಾಗಲಿದೆ. ಹೆಚ್ಚಿನ ಪ್ರಮಾಣದ ಅಗತ್ಯ ಬೆಳೆಗಳನ್ನು ರೈತರು ಬೆಳೆಯಬೇಕಾಗುತ್ತದೆ. ಆಗ ಕೃಷಿ ಉತ್ಪನ್ನಗಳಿಗೆ ತಕ್ಕ ಬೆಲೆಯೂ ದೊರೆಯುತ್ತದೆ. ಈ ಸಸ್ಯಾಧರಿತ ಮೊಟ್ಟೆ ಮತ್ತು ಮಾಂಸದಿಂದ ಪರಿಸರಕ್ಕೆ ಅನುಕೂಲ ಹಾಗೂ ರೈತರಿಗೂ ಲಾಭವನ್ನು ತಂದುಕೊಡಬಹುದು.