ನವದೆಹಲಿ(ಜ.30): ಭಾರತದಲ್ಲಿ ವರ್ಷಗಳ ಹಿಂದೆ ಮೋಟಾರು ವಾಹನ ನಿಯಮ(motor vehicle act) ತಿದ್ದುಪಡಿ ತರಲಾಗಿದೆ. ಈ ಮೂಲಕ ಟ್ರಾಫಿಕ್ ನಿಯಮ(Traffic Rules) ಉಲ್ಲಂಘಿಸುವ ಸವಾರರಿಗೆ ದುಬಾರಿ ದಂಡ, ಕಠಿಣ ಶಿಕ್ಷೆ ಜಾರಿಗೊಳಿಸಲಾಗಿದೆ. ಇದರಲ್ಲಿ ಕುಡಿದು ವಾಹನ ಚಲಾಯಿಸಿದರೆ ಅತೀ ದೊಡ್ಡ ಪ್ರಕರಣವಾಗಿ ಪರಿಗಣಿಸಲಾಗಿದ್ದು, 10,000 ರೂಪಾಯಿ ದಂಡ, ಲೈಸೆನ್ಸ್ ರದ್ದು, ಜೈಲು ಶಿಕ್ಷೆ ಕಠಿಣ ನಿಯಮ ಜಾರಿಯಲ್ಲಿದೆ. ಇದೀಗ ಸುಪ್ರೀಂ ಕೋರ್ಟ್(Supreme Court) ಇದೇ ಡ್ರಿಂಕ್ ಅಂಡ್ ಡ್ರೈವ್(Drink And Drive) ವಿಚಾರದಲ್ಲಿ ಯಾವುದೇ ವಿನಾಯಿತಿ ಇಲ್ಲ. ಅತೀ ದೊಡ್ಡ ಅಪರಾಧಕ್ಕೆ ಕಠಿಣ ಶಿಕ್ಷೆ ಅನುಭವಿಸಲೇಬೇಕು ಎಂದಿದೆ.
ಕುಡಿದು ವಾಹನ ಚಲಾಯಿಸಿ ನಡೆದ ಅತೀ ಸಣ್ಣ ಅಪಘಾತ(Accident) ಪ್ರಕರಣ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜಸ್ಟೀಸ್ ಎಂಆರ್ ಶಾ ಹಾಗೂ ಜಸ್ಟೀಸ್ ಬಿವಿ ನಾಗರತ್ನ ಪೀಠ ಈ ಸೂಚನೆ ನೀಡಿದೆ. ಕುಡಿದು ವಾಹನ ಚಲಾಯಿಸಲು ಯಾರಿಗೂ ಅನುಮತಿ ಇಲ್ಲ. ಡ್ರಿಂಕ್ ಅಂಡ್ ಡ್ರೈವ್ ವೇಳೆ ನಡೆಸದ ಅತೀ ಸಣ್ಣ ಅಪಘಾತ, ಯಾವುದೇ ಪ್ರಾಣ ಹಾನಿ, ವಾಹನಕ್ಕೆ ಹೆಚ್ಚಿನ ಹಾನಿ ಸಂಭವಿಸದಿದ್ದರೂ ಸಣ್ಣ ಪ್ರಕರಣವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಡ್ರಿಂಕ್ & ಡ್ರೈವ್ ಮಾಡಿದ್ರೆ ಆಫೀಸ್‌ಗೂ ಬರುತ್ತೆ ನೊಟೀಸ್!
ಸರ್ಕಾರಿ ಉದ್ಯೋಗಿ ಬ್ರಿಜೇಶ್ ಚಂದ್ರ ದ್ವೇವೇದಿ ಪ್ರಕರಣದಿಂದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. , P.A.C.ಯ 12 ಬೆಟಾಲಿಯನ್‌ನಲ್ಲಿ ಟ್ರಕ್ ಡ್ರೈವರ್ ಆಗಿದ್ದ ಬ್ರಿಜೇಶ್ ಕುಂಭಮೇಳದ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ವೇಳೆ ಫತೇಹಪುರದಿಂದ ಅಲಹಾಬಾದ್‌ಗೆ ಟ್ರಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಜೀಪ್ ಹಿಂಭಾಗಕ್ಕೆ ಟ್ರಕ್ ಡಿಕ್ಕಿ ಹೊಡೆದಿತ್ತು. ಟ್ರಕ್ ಡ್ರೈವರ್ ಬ್ರಿಜೇಶ್ ಮದ್ಯ ಸೇವಿಸಿ ಡ್ರೈವಿಂಗ್ ಮಾಡಿದ ಕಾರಣ ಈ ಅಪಘಾತ ಸಂಭವಿಸಿತ್ತು.
ಅಪಘಾತದಲ್ಲಿ ಅದೃಷ್ಷವಶಾತ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಜೀಪ್‌ನಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿಲ್ಲ. ಜೀಪ್ ಹಿಂಭಾಗದ ಬಂಪರ್ ಪುಡಿಯಾಗಿತ್ತು. ಇದನ್ನು ಹೊರತು ಪಡಿಸಿದರೆ ಇತರ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಪೀಠ, ಇಲ್ಲಿ ಅಪಘಾತದ ಪ್ರಮಾಣ ಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಯಾವುದೇ ಅಪಾಯ ಸಂಭವಿಸದಿದ್ದರೂ ಕುಡಿದು ವಾಹನ ಚಲಾಯಿಸಿರುವುದೇ ಅತೀ ದೊಡ್ಡ ಅಪರಾಧ. ಈ ಘಟನೆ ಅದೃಷ್ಠದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಪ್ರತಿ ಬಾರಿ ಹೀಗೆ ಆಗಬೇಕು ಎಂದಿಲ್ಲ. ಕುಡಿದು ವಾಹನ ಚಲಾಯಿಸಲು ಯಾರಿಗೂ ಅನುಮತಿ ಇಲ್ಲ. ಇತರರ ಜೀವದೊಂದಿಗೆ ಚೆಲ್ಲಾಟವಾಡಲು ಸಾಧ್ಯವಿಲ್ಲ. ಹೀಗಾಗಿ ಪ್ರಕರಣ, ಅಪಘಾತ ಎಷ್ಟೇ ಸಣ್ಣದಾದರೂ ಗಂಭೀರವಾಗಿ ಪರಿಗಣಿಸಿ ಕಠಿಣ ಶಿಕ್ಷೆ ನೀಡಬೇಕು. ದುಬಾರಿ ದಂಡ ತೆರಲೇಬೇಕು. ಕುಡಿದು ವಾಹನ ಚಲಾಯಿಸಿದರೆ ಯಾವುದೇ ವಿನಾಯಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಹೇಳಿದೆ.
ಡ್ರಿಂಕ್ & ಡ್ರೈವ್‌ಗಿಂತ ಟಚ್ ಸ್ಕ್ರೀನ್ ಬಳಸುವುದು ಅತ್ಯಂತ ಅಪಾಯಕಾರಿ; ಕಾರಣ ಇಲ್ಲಿದೆ!
ಮೋಟಾರು ವಾಹನ ನಿಯಮ ಉಲ್ಲಂಘನೆಗಳಲ್ಲಿ ಡ್ರಿಂಕ್ ಅಂಡ್ ಡ್ರೈವ್ ಅತೀ ದೊಡ್ಡ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ಮೊದಲ ಬಾರಿ ಡ್ರಂಕ್ ಅಂಡ್ ಡ್ರೈವ್‌ಗೆ 10,000 ರೂಪಾಯಿ ದಂಡ, ಎರಡನೇ ಬಾರಿಗೆ 20,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿಗೆ ದುಬಾರಿ ದಂಡದ ಜೊತೆಗೆ ಲೈಸೆನ್ಸ್ ಕೂಡ ರದ್ದಾಗಲಿದೆ. ಹೀಗಾಗಿ ಡ್ರಿಂಕ್ ಅಂಡ್ ಡ್ರೈವ್ ಮಾಡದಂತೆ ಪೊಲೀಸರು ಪದೇ ಪದೇ ಎಚ್ಚರಿಕೆ ನೀಡುತ್ತಲೇ ಇದ್ದಾರೆ.