ನವದೆಹಲಿ(ಜ.27): ಭಾರತದ ಆಟೋಮೊಬೈಲ್(Automobile) ಕ್ಷೇತ್ರದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುವ ಮಹೀಂದ್ರ(Mahindra) ಇದೀಗ ಕಾರ್ಗೋ ಎಲೆಕ್ಟ್ರಿಕ್(Cargo Electric) ವಾಹನ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ಮಹೀಂದ್ರ ಇಂದು ಇ ಆಲ್ಫಾ ಕಾರ್ಗೋ(e Alfa Cargo) ರಿಕ್ಷಾ ಬಿಡುಗಡೆ ಮಾಡಿದೆ. ಕೇವಲ 1.44 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ)ಬೆಲೆಗೆ ನೂತನ ಆಲ್ಫಾ ಕಾರ್ಗೋ ವಾಹನ ಲಭ್ಯವಿದೆ.
ಹೊಚ್ಚ ಹೊಸ ಎಲೆಕ್ಟ್ರಿಕ್ 3 ಚಕ್ರದ ವಾಹನ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಆಲ್ಫಾ ಕಾರ್ಗೋ ವಾಹನ ಖರೀದಿಸುವ ಮಾಲೀಕ ಪ್ರತಿ ವರ್ಷ ಇಂಧನಕ್ಕೆ ಹಾಕುವ 60,000 ರೂಪಾಯಿ ಉಳಿತಾಯ ಮಾಡಲು ಸಾಧ್ಯವಿದೆ. ಇಷ್ಟೇ ಅಲ್ಲ ಅತ್ಯಂತ ಕಡಿಮೆ ಬೆಲೆಗೂ ಕಾರ್ಗೋ ವಾಹನ ಲಭ್ಯವಿದೆ. ಇದೀಗ ಇತರ ಕಾರ್ಗೋ ವಾಹನಗಳಿಗೆ ಭಾರಿ ಹೊಡೆತ ಬಿದ್ದಿದೆ.
ಮಹೀಂದ್ರ ಇ ಕಾರ್ಗೋ ವಾಹನ ಪ್ರತಿ ಕಿಲೋಮೀಟರ್ ವೆಚ್ಚ ಕೇವಲ 59 ಪೈಸೆ ಮಾತ್ರ. ಅಂದರೆ ಎಲೆಕ್ಟ್ರಿಕ್ ಪ್ರತಿ ಯೂನಿಟ್ ಬೆಲೆ 8 ರೂಪಾಯಿ ಹಾಗೆ ಗಣನೆಗೆ ತೆಗೆದುಕೊಂಡರೆ ಪ್ರತಿ ಕಿಲೋಮೀಟರ್ 59 ಪೈಸೆ ಮಾತ್ರವಾಗಿದೆ. ಇನ್ನು ಕಾರ್ಗೋ ಪ್ಲೇಲೋಡ್ 310 ಕೆಜಿ ಹೊಂದಿದೆ.
ಮಹೀಂದ್ರ ಇ ಕಾರ್ಗೋ ಸುಲಭ ಚಾರ್ಜಿಂಗ್ ಮಾಡಲು ಸಾಧ್ಯವಿದೆ. 1.5 kW ಪೀಕ್ ಪವರ್ ಸಾಮರ್ಥ್ಯ ಹೊಂದಿದ ಮಹೀಂದ್ರ ಇ ಕಾರ್ಗೋ ಗರಿಷ್ಠ ಸ್ಪೀಡ್ 25 ಕಿಲೋಮೀಟರ್ ಪ್ರತಿ ಗಂಟೆಗೆ. 48 V/15 ಬೋರ್ಡ್ ಚಾರ್ಜಿಂಗ್‌ನಲ್ಲಿ ಸುಲಭವಾಗಿ ಚಾರ್ಜ್ ಮಾಡಿಕೊಳ್ಳಹುದು. ಇದನ್ನು ಸುಲಭವಾಗಿ ಹೇಳುವುದಾದರೆ ಮೊಬೈಲ್ ಫೋನ್ ರೀತಿಯಲ್ಲಿ ಮಹೀಂದ್ರ ಇ ಕಾರ್ಗೋ ವಾಹನ ಚಾರ್ಜ್ ಮಾಡಿಕೊಳ್ಳಬಹುದು. ಮಹೀಂದ್ರ ಇ ಕಾರ್ಗೋ ಭಾರತದ 300 ಮಹೀಂದ್ರ ಔಟ್‌ಲೆಟ್‌ಗಳಲ್ಲಿ ಲಭ್ಯವಿದೆ. ಒಂದು ವರ್ಷ ವಾರೆಂಟಿಯನ್ನು ಮಹೀಂದ್ರ ನೀಡುತ್ತಿದೆ.
ಮಹೀಂದ್ರ ಎಲೆಕ್ಟ್ರಿಕ್:
ಮಹೀಂದ್ರ ಎಲೆಕ್ಟ್ರಿಕ್ ದೇಶದ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿದೆ. ಈಗಾಗಲೇ ಮಹೀಂದ್ರ ಎಲೆಕ್ಟ್ರಿಕ್ ಆಟೋ ರಿಕ್ಷಾ ಭಾರತದಲ್ಲಿ ಲಭ್ಯವಿದೆ. ಮಹೀಂದ್ರ ಟ್ರಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾ ಈಗಾಗಲೇ ಭಾರತದ ಮೂಲೆ ಮೂಲೆಗಳಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ಮಹೀಂದ್ರ ಟ್ರಿಯೋದಲ್ಲಿ ಮೂರು ವೇರಿಯೆಂಟ್ ಆಟೋ ರಿಕ್ಷಾ ಲಭ್ಯವಿದೆ. ಇದರಲ್ಲಿ ಟ್ರಿಯೋ ಝೋರ್ ಅನ್ನೋ ಸರುಕು ಸಾಗಾಣೆ ವಾಹನ ಸದ್ಯ ಬಿಡುಗಡೆ ಮಾಡಿರುವ ಆಲ್ಫಾ ಕಾರ್ಗೋ ವಾಹನಕ್ಕಿಂದ ದೊಡ್ಡದಾಗಿದೆ. ಹೀಗಾಗಿ ಇದರ ಬೆಲೆ 2.73 ಲಕ್ಷ ರೂಪಾಯಿ. ಯೋರ್ ವಾಹನದಲ್ಲಿ ಪಿಕ್ ಅಪ್, ಡೆಲಿವರಿ ವ್ಯಾನ್, ಫ್ಲ್ಯಾಟ್ ಬೆಡ್ ವೇರಿಯೆಂಟ್ ಲಭ್ಯವಿದೆ.
ಮಹೀಂದ್ರಿ ಟ್ರಿಯೋ ಆಟೋ ರಿಕ್ಷಾ ಬೆಲೆ 2.7 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಟ್ರಿಯೋ ಆಟೋ ರಿಕ್ಷಾ ವೇಗ ಪ್ರತಿ ಗಂಟೆಗೆ 55 ಕಿಲೋಮೀಟರ್. ಲಿಥಿಯಂ ಐಯಾನ್ ಬ್ಯಾಟರಿ ಈ ಆಟೋ ರಿಕ್ಷಾದಲ್ಲಿ ಬಳಕೆ ಮಾಡಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 130 ಕಿಲೋಮೀಟರ್ ಮೈಲೇಜ್ ರೇಂಜ್ ಹೊಂದಿದೆ. ನಗರ ಸಾರಿಗೆಗೆ ಇದು ಅತ್ಯಂತ ಉಪಯುಕ್ತವಾಗಿದೆ. ಕಾರಣ ಗೇರ್ ಲೆಸ್, ಕ್ಲಚ್ ಲೆಸ್ ಸೇರಿದಂತೆ ಹಲವು ಪ್ರಯೋಜನಗಳು, ಪರಿಸರಕ್ಕೆ ಪೂರಕವಾಗಿರುವ ಎಲೆಕ್ಟ್ರಿಕ್ ಆಟೋ ರಿಕ್ಷಾ ಸಾಲಿಗೆ ಇದೀಗ ಆಲ್ಫಾ ಕಾರ್ಗೋ ಕೂಡ ಸೇರಿಕೊಂಡಿದೆ.
ಮಹೀಂದ್ರ ಈಗಾಗಲೇ XUV300 ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ಶೀಘ್ರದಲ್ಲೇ ಮಹೀಂದ್ರ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.