EV Charge Station ಅತೀ ದೊಡ್ಡ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ ಆರಂಭ, ಏಕಕಾಲಕ್ಕೆ 1,00 ವಾಹನ ಚಾರ್ಜ್!

By Suvarna News  |  First Published Jan 28, 2022, 8:19 PM IST
  • ದೇಶದಲ್ಲಿ ಅತೀ ದೊಡ್ಡ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್
  • ಏಕಕಾಲಕ್ಕೆ 100 ಎಲೆಕ್ಟ್ರಿಕ್ ಕಾರು ಚಾರ್ಜಿಂಗ್ ಮಾಡಲು ಅವಕಾಶ
  • ಎಲೆಕ್ಟ್ರಿಕ್ ವಾಹನ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಚಾರ್ಜಿಂಗ್ ಸ್ಟೇಶನ್ ಆರಂಭ

ನವದೆಹಲಿ(ಜ.28): ದೇಶದಲ್ಲಿ ಎಲೆಕ್ಟ್ರಿಕ್ ವಾಹನಕ್ಕೆ(Electric Vehicle) ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಇತ್ತ ಹೊಸ ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆಯಾಗುತ್ತಿದೆ. ಕೈಗೆಟುಕುವ ದರದಲ್ಲಿ, ಗರಿಷ್ಠ ಮೈಲೇಜ್ ನೀಡಬಲ್ಲ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಎಲೆಕ್ಟ್ರಿಕ್ ವಾಹನ ಮಾರಾಟವೂ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ಬಳಕೆಗೆ ತಕ್ಕಂತೆ ಚಾರ್ಜಿಂಗ್ ಸ್ಟೇಶನ್(Charging station) ಅಗತ್ಯತೆ ಕೂಡ ಹೆಚ್ಚಾಗಿದೆ. ಇದೀಗ ದೇಶದಲ್ಲಿ ಅತೀ ದೊಡ್ಡ ಚಾರ್ಜಿಂಗ್ ಸ್ಟೇಶನ್ ಗುರುಗಾಂವ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರಂಭಗೊಂಡಿದೆ.

ಗುರುಗಾಂವ್‌ನಲ್ಲಿ ಆರಂಭಿಸಿರುವ ನೂತನ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್ 100 ಎಲೆಕ್ಟ್ರಿಕ್ ಕಾರುಗಳನ್ನು ಏಕಕಾಲಕ್ಕೆ ಚಾರ್ಜ್ ಮಾಡಲು ಸಾಧ್ಯವಿದೆ. ನವಿ ಮುಂಬೈನಲ್ಲಿರುವ 16 AC & 4 DC ಚಾರ್ಜಿಂಗ್ ಸ್ಟೇಶನ್‌ಗಿಂತ ದೊಡ್ಡದಾದ ಸ್ಟೇಶನ್ ಇದಾಗಿದೆ.  Alektrify  ಪ್ರೈವೇಟ್ ಲಿಮಿಟೆಡ್ ಕಂಪನಿ ಈ ಚಾರ್ಜಿಂಗ್ ಸ್ಟೇಶನ್ ಆರಂಭಿಸಿದೆ.

Latest Videos

undefined

EV Charging at Home: ಇನ್ನುಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಮನೆಯಲ್ಲಿಯೇ ಚಾರ್ಜ್ ಮಾಡಿ!

ಕೇಂದ್ರ ಸರ್ಕಾರದ ನಿರ್ದೇಶನದಂತೆ ಎಲ್ಲಾ ಸುರಕ್ಷತಾ ಪರಿಕ್ಷೆಗಳನ್ನು ಮಾಡಲಾಗಿದೆ. ಸಾರ್ವಜನಿಕರಿಗೆ ಸುಲಭವಾಗಿ ತಮ್ಮ ವಾಹನಗಳನ್ನು ಚಾರ್ಜ್ ಮಾಡಲು ಹಾಗೂ ಅತೀ ಕಡಿಮೆ ಸಮಯದಲ್ಲಿ ಫಾಸ್ಟ್ ಚಾರ್ಜಿಂಗ್ ಮೂಲಕ ವಾಹನ ಚಾರ್ಜಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿರುವ ಕಾರಣ ಚಾರ್ಜಿಂಗ್ ಸ್ಟೇಶನ್ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ Alektrify ಚಾರ್ಜಿಂಗ್ ಸ್ಟೇಶನ್ ಕಾರ್ಯನಿರ್ವಹಿಸಲಿದೆ ಎಂದು  Alektrify ಹೇಳಿದೆ.

Alektrify ಚಾರ್ಜಿಂಗ್ ಸ್ಟೇಶನ್ ದೇಶದ ಇತರ ಭಾಗದಲ್ಲಿ ಚಾರ್ಜಿಂಗ್ ಸ್ಟೇಶನ್ ಆರಂಭಿಸಲು ಸ್ಪೂರ್ತಿಯಾಗಿದೆ. ದೆಹಲಿ, ಗುರುಗಾಂವ್‌ನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಾಗುತ್ತಿದೆ. ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇದಕ್ಕಾಗಿ ಸಬ್ಸಡಿ ಸೇರಿದಂತೆ ಹಲವು ಯೋಜನೆಗಳನ್ನು ಕೇಂದ್ರದ ಜೊತೆಗೆ ದೆಹಲಿ ಸರ್ಕಾರವೂ ನೀಡುತ್ತಿದೆ.

Electric Vehicles ಟೆಸ್ಲಾಗೆ ವೋಕ್ಸ್‌ವ್ಯಾಗನ್, ಟೊಯೋಟಾ ಸೆಡ್ಡು, ಎಲೆಕ್ಟ್ರಿಕ್ ವಾಹನಕ್ಕೆ 170 ಬಿಲಿಯನ್ ಡಾಲರ್ ಹೂಡಿಕೆ!

ಕೇಂದ್ರ ಸರ್ಕಾರ ಈಗಾಗಲೇ ಹೆದ್ದಾರಿಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್ ಅಳವಡಿಕೆಗೆ ಖಾಸಗಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಹೆದ್ದಾರಿಯದ್ದುಕ್ಕೂ ಚಾರ್ಜಿಂಗ್ ಸ್ಟೇಶನ್ ಅಳವಡಿಸಿ ದೂರ ಪ್ರಯಾಣಕ್ಕೂ ಅನೂಕಲ ಮಾಡಿಕೊಡಲು ಕೇಂದ್ರ ಮುಂದಾಗಿದೆ. ಈ ಕಾರ್ಯ ಪ್ರಗತಿಯಲ್ಲಿದೆ. ಇದರ ಜೊತೆಗೆ ನಗರ ಪ್ರದೇಶ, ಪಟ್ಟಣಗಳಲ್ಲೂ ಚಾರ್ಜಿಂಗ್ ಸ್ಟೇಶನ್ ಅಳವಡಿಕೆ ಮಾಡುತ್ತಿದೆ. 

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ:
ಭಾರತದ ಇದೀಗ  ಅತೀ ಹೆಚ್ಚು ಎಲೆಕ್ಟ್ರಿಕ್ ವಾಹನ ಉತ್ಪಾದನೆಯತ್ತ ಸಾಗುತ್ತಿದೆ. 15 ರಿಂದ 10 ದಿನಕ್ಕೆ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ಬಿಡುಗಡೆಯಾಗುತ್ತಿದೆ. ಇನ್ನು ಎಲೆಕ್ಟ್ರಿಕ್ ಕಾರುಗಳ ಪೈಕಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಹಾಗೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಭಾರತದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಇದರ ಜೊತೆಗೆ ಎಂಜಿ ಮೋಟಾರ್ಸ್ ಸಂಸ್ಥೆಯ ZS ಎಲೆಕ್ಟ್ರಿಕ್ ವಾಹನ, ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಲಭ್ಯವಿದೆ. ಇನ್ನು ಮೂರು ಚಕ್ರ ಎಲೆಕ್ಟ್ರಿಕ್ ವಾಹನಗಳ ಬೈಕಿ ಹಲವು ಕಂಪನಿಗಳ ವಾಹನಗಳು ಲಭ್ಯವಿದೆ. ಇದರಲ್ಲಿ ಮಹೀಂದ್ರ ಮುಂಚೂಣಿಯಲ್ಲಿದೆ. ಇನ್ನು ಸ್ಕೂಟರ್ ವಿಭಾಗದಲ್ಲಿ ಓಲಾ, ಬೌನ್ಸ್, ಸಿಂಪಲ್ ಒನ್, ಒಕಿನಾವಾ, ಎದರ್ ಸೇರಿದಂತೆ 25ಕ್ಕೂ ಹೆಚ್ಚು ಸ್ಕೂಟರ್ ಲಭ್ಯವಿದೆ.

ಕರ್ನಾಟದಲ್ಲಿ ಅತೀ ಹೆಚ್ಚು ಎಲೆಕ್ಟ್ರಿಕ್ ವಾಹನ ಉತ್ಪಾದಕ ಸ್ಟಾರ್ಟ್ಅಪ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಹಬ್ ಆಗಿ ಬೆಂಗಳೂರು ಹೊರಹೊಮ್ಮಿದೆ. ಇದೀಗ ಮುಂಬರುವ ಬಜೆಟ್ ಮೇಲೆ ಎಲ್ಲರ ಗಮನವಿದೆ. ಕಾರಣ ಎಲೆಕ್ಟ್ರಿಕ್ ವಾಹನಕ್ಕೆ ಮತ್ತಷ್ಟು ಉತ್ತೇಜನ ನಿರೀಕ್ಷಿಸಲಾಗಿದೆ 

click me!