ಮಹಿಳಾ ಜೈಲಲ್ಲಿ ಭೀಕರ ಗಲಭೆ: 41 ಕೈದಿಗಳನ್ನು ಸುಟ್ಟು, ಶೂಟ್‌ ಮಾಡಿ ಕೊಂದ ಗ್ಯಾಂಗ್‌ಸ್ಟರ್‌ಗಳು

Published : Jun 21, 2023, 01:42 PM IST
ಮಹಿಳಾ ಜೈಲಲ್ಲಿ ಭೀಕರ ಗಲಭೆ: 41 ಕೈದಿಗಳನ್ನು ಸುಟ್ಟು, ಶೂಟ್‌ ಮಾಡಿ ಕೊಂದ ಗ್ಯಾಂಗ್‌ಸ್ಟರ್‌ಗಳು

ಸಾರಾಂಶ

ಮಂಗಳವಾರ ಹೋಂಡುರಾಸ್‌ನ ಮಹಿಳಾ ಜೈಲಿನಲ್ಲಿ ಭೀಕರ ಗಲಭೆ ವರದಿಯಾಗಿದ್ದು, ಈ ಗಲಭೆಯಲ್ಲಿ 41 ಮಹಿಳಾ ಕೈದಿಗಳು ಬಲಿಯಾಗಿರುವ ಆತಂಕಕಾರಿ ಘಟನೆ ನಡೆದಿದೆ.

ತಮಾರಾ (ಹೋಂಡುರಾಸ್‌) ಜೂನ್ 21, 2023: ಸಿನಿಮಾಗಳಲ್ಲಿ ಜೈಲಲ್ಲಿ ಗಲಭೆಯಂತಹ ದೃಶ್ಯಗಳನ್ನು ಸಾಕಷ್ಟು ನೋಡಿರುತ್ತೀರಾ. ಇದೇ ರೀತಿಯ ಘಟನೆಗಳು ನಿಜವಾಗಿಯೂ ಅನೇಕ ಬಾರಿ ನಡೆದಿವೆ. ಇನ್ನು, ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಇಂತಹ ಭಯಾನಕ ಘಟನೆ ನಡೆದಿದೆ ನೋಡಿ..

ಮಂಗಳವಾರ ಹೋಂಡುರಾಸ್‌ನ ಮಹಿಳಾ ಜೈಲಿನಲ್ಲಿ ಭೀಕರ ಗಲಭೆ ವರದಿಯಾಗಿದ್ದು, ಈ ಗಲಭೆಯಲ್ಲಿ 41 ಮಹಿಳಾ ಕೈದಿಗಳು ಬಲಿಯಾಗಿರುವ ಆತಂಕಕಾರಿ ಘಟನೆ ನಡೆದಿದೆ. ಈ ಪೈಕಿ ಹೆಚ್ಚಿನ ಮಹಿಳೆಯರು ಸುಟ್ಟು ಕರಕಲಾಗಿದ್ದು, ಅನೇಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಹಾಗೂ ಹಲವರನ್ನು ಹರಿತ ಆಯುಧಗಳಿಂದ ಭೀಕರವಾಗಿ ಇರಿದು ಕೊಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹೊಂಡುರಾಸ್‌ನ ಅಧ್ಯಕ್ಷರು "ಮಾರಾ" ಸ್ಟ್ರೀಟ್‌ ಗ್ಯಾಂಗ್‌ಗಳನ್ನು ದೂಷಿಸಿದ್ದಾರೆ. ಜೈಲಿನೊಳಗೆ ಈ ಗ್ಯಾಂಗ್ ಹೆಚ್ಚು ಅಧಿಕಾರವೊಂದಿದೆ ಎಂದೂ ತಿಳಿದುಬಂದಿದೆ. 

ಇದನ್ನು ಓದಿ: ನಾಲ್ವರು ಹಿಂದೂಗಳನ್ನೇ ಮದ್ವೆಯಾಗಿರೋ ಲವ್‌ಜಿಹಾದಿಯಿಂದ ಮತ್ತೊಬ್ಳು ಹಿಂದೂ ಯುವತಿ ಕಿಡ್ನ್ಯಾಪ್‌

ಬಲಿಯಾದ 41 ಮಹಿಳಾ ಕೈದಿಗಳಲ್ಲಿ 26 ಮಂದಿಯನ್ನು ಸುಟ್ಟುಹಾಕಿದ್ದರೆ ಮತ್ತು ಉಳಿದವರು ಹೊಂಡುರಾಸ್‌ ರಾಜಧಾನಿ ಟೆಗುಸಿಗಲ್ಪಾದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ತಮಾರಾದಲ್ಲಿರುವ ಜೈಲಿನಲ್ಲಿ ಗುಂಡು ಹಾರಿಸಲಾಯಿತು ಅಥವಾ ಇರಿತಕ್ಕೊಳಗಾದರು ಎಂದು ಹೊಂಡುರಾಸ್‌ನ ರಾಷ್ಟ್ರೀಯ ಪೊಲೀಸ್ ತನಿಖಾ ಸಂಸ್ಥೆಯ ವಕ್ತಾರ ಯೂರಿ ಮೊರಾ ಹೇಳಿದ್ದಾರೆ. ಇನ್ನು, ತೆಗುಸಿಗಲ್ಪಾ ಆಸ್ಪತ್ರೆಯಲ್ಲಿ ಕನಿಷ್ಠ 7 ಕೈದಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶವಗಳನ್ನು ಜೈಲಿನಿಂದ ತೆಗೆದುಹಾಕುತ್ತಿರುವ ವಿಧಿವಿಜ್ಞಾನ ತಂಡಗಳು 41 ಡೆಡ್‌ ಬಾಡಿಗಳನ್ನು ಎಣಿಸಿದ್ದಾರೆ ಎಂದು ಖಚಿತಪಡಿಸುತ್ತದೆ" ಎಂದೂ ಯೂರಿ ಮೊರಾ ಹೇಳಿದರು.
ಜೈಲಿನ ಒಳಗಿನಿಂದ ಸರ್ಕಾರವು ತೋರಿಸಿದ ವಿಡಿಯೋ ಕ್ಲಿಪ್‌ಗಳು ಗಲಭೆಯ ನಂತರ ಕಂಡುಬಂದ ಹಲವಾರು ಪಿಸ್ತೂಲ್‌ಗಳು ಮತ್ತು ಮಚ್ಚು, ಚಾಕು ಇತರ ಬ್ಲೇಡ್ ಆಯುಧಗಳ ರಾಶಿಯನ್ನು ಸಹ ತೋರಿಸಿದೆ. ಹೊಂಡುರಾಸ್‌ ಅಧ್ಯಕ್ಷ ಕ್ಸಿಯೋಮಾರಾ ಕ್ಯಾಸ್ಟ್ರೋ ಅವರು ಈ ಗಲಭೆಯನ್ನು "ಭದ್ರತಾ ಅಧಿಕಾರಿಗಳ ಅರಿವು ಮತ್ತು ಒಪ್ಪಿಗೆಯೊಂದಿಗೆ ಮಾರಾ ಗ್ಯಾಂಗ್‌ನಿಂದ ಯೋಜಿಸಲಾಗಿದೆ" ಎಂದೂ ಹೇಳಿದರು.

ಇದನ್ನೂ ಓದಿ: ಕೇರಳ ಯುವತಿ ನಾಪತ್ತೆ: ಬಲವಂತದ ಮತಾಂತರ, ಮದುವೆ ಮಾಡಿರೋ ಆತಂಕ ವ್ಯಕ್ತಪಡಿಸಿದ ತಂದೆ
ಇನ್ನು, ಈ ಸಂಬಂಧ "ನಾನು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇನೆ!" ಎಂದುಕ್ ಯಾಸ್ಟ್ರೋ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ. ಬ್ಯಾರಿಯೊ 18 ಗ್ಯಾಂಗ್‌ಗೆ ಸೇರಿದ ಕೈದಿಗಳು ಸೆಲ್ ಬ್ಲಾಕ್‌ಗೆ ನುಗ್ಗಿ ಇತರ ಕೈದಿಗಳತ್ತ ಗುಂಡು ಹಾರಿಸಿದ್ದಾರೆ ಅಥವಾ ಬೆಂಕಿ ಹಚ್ಚಿದ್ದಾರೆ ಎಂದೂ ವರದಿಯಾಗಿದೆ.

ಜೈಲುಗಳೊಳಗಿನ ಅಕ್ರಮ ಚಟುವಟಿಕೆಯನ್ನು ಹತ್ತಿಕ್ಕಲು ಅಧಿಕಾರಿಗಳು ಇತ್ತೀಚಿನ ಪ್ರಯತ್ನಗಳಿಂದ ಗಲಭೆ ಪ್ರಾರಂಭವಾಯಿತು ಎಂದು ದೇಶದ ಜೈಲು ವ್ಯವಸ್ಥೆಯ ಮುಖ್ಯಸ್ಥ ಜೂಲಿಸ್ಸಾ ವಿಲ್ಲಾನ್ಯುವಾ ಸೂಚಿಸಿದ್ದಾರೆ. ಮತ್ತು ಮಂಗಳವಾರದ ಹಿಂಸಾಚಾರವನ್ನು "ಸಂಘಟಿತ ಅಪರಾಧದ ವಿರುದ್ಧ ನಾವು ತೆಗೆದುಕೊಳ್ಳುತ್ತಿದ್ದೇವೆ" ಎಂಬ ಕ್ರಮಗಳಿಗೆ ಪ್ರತಿಕ್ರಿಯೆ ಎಂದೂ ಹೇಳಿದ್ದಾರೆ. ಅಲ್ಲದೆ, "ನಾವು (ಕ್ರಮ ಕೈಗೊಳ್ಳದೆ) ಹಿಂದೆ ಸರಿಯುವುದಿಲ್ಲ" ಎಂದು ವಿಲ್ಲನ್ಯೂವಾ ಗಲಭೆಯ ನಂತರ ದೂರದರ್ಶನದ ಭಾಷಣದಲ್ಲಿ ಹೇಳಿದರು.

ಇದನ್ನೂ ಓದಿ: ದೆಹಲಿ ಬಾಲಕಿ ಬರ್ಬರ ಹತ್ಯೆ ಕೇಸ್‌: 15 ದಿನದ ಹಿಂದೆಯೇ ಸ್ಕೆಚ್‌; ಕೊಲೆಗೆ ಕಾರಣ ಹೀಗಿದೆ.

ದೇಶದ ಜೈಲುಗಳಲ್ಲಿ ಗ್ಯಾಂಗ್‌ಗಳು ವಿಶಾಲವಾದ ನಿಯಂತ್ರಣವನ್ನು ಹೊಂದಿದ್ದು, ಅಲ್ಲಿ ಕೈದಿಗಳು ಸಾಮಾನ್ಯವಾಗಿ ತಮ್ಮದೇ ಆದ ನಿಯಮಗಳನ್ನು ಹೊಂದಿಸುತ್ತಾರೆ ಮತ್ತು ನಿಷೇಧಿತ ಸರಕುಗಳನ್ನು ಮಾರಾಟ ಮಾಡುತ್ತಾರೆ. ಅವರು ಬಂದೂಕುಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಸಮರ್ಥರಾಗಿದ್ದರು, ಹೊಂಡುರಾಸ್‌ ಜೈಲುಗಳಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ.

ಜನರು ಡ್ರಗ್ಸ್, ಗ್ರೆನೇಡ್ ಮತ್ತು ಬಂದೂಕುಗಳಲ್ಲಿ ಕಳ್ಳಸಾಗಣೆ ಮಾಡುವುದನ್ನು ತಡೆಯುವುದು ಸಮಸ್ಯೆಯಾಗಿದೆ" ಎಂದು ಹೊಂಡುರಾಸ್ ಮಾನವ ಹಕ್ಕುಗಳ ತಜ್ಞ ಜೋಕ್ವಿನ್ ಮೆಜಿಯಾ ಹೇಳಿದ್ದು, ಇಂದಿನ ಘಟನೆಗಳು ಅವರು ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ತೋರಿಸುತ್ತವೆ ಎಂದೂ ತಿಳಿಸಿದ್ದಾರೆ. 

ಇದನ್ನೂ ಓದಿ: ಮತ್ತೊಂದು ಲವ್ ಜಿಹಾದ್‌ ಕೇಸ್‌: ಗರ್ಭಿಣಿಗೆ ಮತಾಂತರಕ್ಕೆ ಒತ್ತಾಯಿಸಿ ವಿಷ ಹಾಕಿ ಕೊಂದ ಪಾಪಿಗಳು!

ಶತಮಾನದಲ್ಲೇ ಅತ್ಯಂತ ಭೀಕರವಾದ ಜೈಲು ದುರಂತವು ಹೊಂಡುರಾಸ್‌ನಲ್ಲಿ 2012 ರಲ್ಲಿ ನಡೆದಿದ್ದು, ಕೊಮಯಾಗುವಾ ಪೆನಿಟೆನ್ಷಿಯರಿಯಲ್ಲಿ ಸಂಭವಿಸಿತ್ತು. ಆ ವೇಳೆ 361 ಕೈದಿಗಳು ಅಗ್ನಿ ಜ್ವಾಲೆಗೆ ಬಲಿಯಾಗಿದ್ದರು. 

ಇದನ್ನೂ ಓದಿ: ಕೈದಿಗಳೊಂದಿಗೆ ಜೈಲಲ್ಲೇ ಮಹಿಳಾ ಗಾರ್ಡ್ಸ್‌ ಸೆಕ್ಸ್‌: 18 ಮಂದಿ ವಜಾ, ಮೂವರು ಕಂಬಿ ಹಿಂದೆ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ