
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜೂ.21): ಕಾರು ಹಾಗೂ ಬೈಕ್ ಮುಖಾಮುಖಿಯಾಗಿ ಡಿಕ್ಕಿ ಆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಟ್ಟೆಹೊಳೆ ಗೇಟ್ ಬಳಿ ನಡೆದಿದೆ. ಮೃತರನ್ನ 24 ವರ್ಷದ ವಿಶ್ವಾಸ್ ಹಾಗೂ 22 ವರ್ಷದ ದೀಪಿಕಾ ಎಂದು ಗುರುತಿಸಲಾಗಿದೆ. ಅಮೃತ ವಿಶ್ವಾಸ್ ಹಾಗೂ ದೀಪಿಕಾ ಒಬ್ಬರಿಗೊಬ್ಬರು ಪರಿಚಯವೇ ಇಲ್ಲ.
ಸಾವನ್ನಪ್ಪಿದ ದೀಪಿಕಾ ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮೂಲದವಳಾಗಿದ್ದು, ತರೀಕೆರೆ ತಾಲೂಕಿನ ಬೆಲೇನಹಳ್ಳಿ ನಿವಾಸಿ ಕಾರ್ತಿಕ್ ಸ್ನೇಹಿತೆ. ಮೃತ ವಿಶ್ವಾಸ್ ಕೂಡ ಕಾರ್ತಿಕ್ ಸ್ನೇಹಿತ. ಇಂದು ಶಿವಮೊಗ್ಗದಲ್ಲಿ ವೃತ್ತಿಯ ಸಂದರ್ಶನ ಇತ್ತು ಎಂಬ ಕಾರಣಕ್ಕೆ ಮೃತ ದೀಪಿಕಾ ಸ್ನೇಹಿತೆ ಜೊತೆ ಗುಂಡ್ಲುಪೇಟೆಯಿಂದ ತರೀಕೆರೆಗೆ ಆಗಮಿಸಿದ್ದಳು.
ಇಬ್ಬರು ಯುವತಿಯರು ಬಂದಿದ್ದ ಕಾರಣ ಮೃತ ವಿಶ್ವಾಸ್ ಸ್ನೇಹಿತ ಕಾರ್ತಿಕ್ ಅವರನ್ನ ತರೀಕೆರೆಯಿಂದ ಬೇಲೆನಹಳ್ಳಿಗೆ ಕರೆದುಕೊಂಡು ಬರಲು ಮತ್ತೊಂದು ಬೈಕಿನಲ್ಲಿ ವಿಶ್ವಾಸ್ ನನ್ನ ಕರೆದುಕೊಂಡು ಹೋಗಿದ್ದನು. ಎರಡು ಬೈಕಿನಲ್ಲಿ ಇಬ್ಬರೂ ಒಬ್ಬರನ್ನ ಕರೆದುಕೊಂಡು ಬರಲು ಹೋಗಿದ್ದರು. ಆದರೆ, ಕಾರ್ತಿಕ್ ಹಾಗೂ ಮತ್ತೋರ್ವ ಮನೆಗೆ ಬಂದಿದ್ದಾರೆ. ಆದರೆ, ವಿಶ್ವಾಸ ಹಾಗೂ ಮತ್ತೋರ್ವ ಯುವತಿ ದೀಪಿಕಾ ಬೇಲೆನಹಳ್ಳಿಗೆ ಬರುವಾಗ ಕಟ್ಟೆಹೊಳೆಯ ಗೇಟ್ ಬಳಿ ಲಾರಿಗೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೇಂದ್ರದಿಂದ ಸರ್ವರ್ ಹ್ಯಾಕ್ ಆರೋಪ: ಜಾರಕಿಹೊಳಿಗೆ ಸಂಸದ ರಮೇಶ ಜಿಗಜಿಣಗಿ ತಿರುಗೇಟು!
ಮೃತ ದೀಪಿಕಾ ಹಾಗೂ ವಿಶ್ವಾಸ್ ಗೆ ಒಬ್ಬರಿಗೊಬ್ಬರು ಗೊತ್ತೇ ಇಲ್ಲ. ಪರಿಚಯವು ಇಲ್ಲ. ಸ್ನೇಹಿತನ ಸ್ನೇಹಿತಯನ್ನು ಕರೆತರಲು ಹೋದಾಗ ಈ ದುರ್ಘಟನೆ ಸಂಭವಿಸಿದ್ದು ಕಾರ್ತಿಕ್ ನ ಸ್ನೇಹಿತ ಹಾಗೂ ಸ್ನೇಹಿತ ಇಬ್ಬರು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ