ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!

ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!

Published : Jun 11, 2026, 06:19 PM IST

ಮೂರು ತಿಂಗಳ ಹಿಂದೆ ಹೆತ್ತು ಹೊತ್ತು ಆಡಿಸಿದ ಅಮ್ಮನೇ ಪ್ರಿಯಕರನಿಗಾಗಿ ಮಗುವಿನ ಉಸಿರು ನಿಲ್ಲಿಸಿದ್ಲು.. ನಂತರ ಅಮಾಯಕಳಂತೆ ನಾಟಕವಾಡಿದ್ರು.. ಆದ್ರೆ ಅಪ್ಪನ ಹೋರಾಟ ಇವತ್ತು ಕೊಲೆಗಾರರ ನಿಜ ಬಣ್ಣ ಬಯಲಾಗಿದೆ.

ಮೂರು ತಿಂಗಳ ಹಿಂದೆ ಹೆತ್ತು ಹೊತ್ತು ಆಡಿಸಿದ ಅಮ್ಮನೇ ಪ್ರಿಯಕರನಿಗಾಗಿ ಮಗುವಿನ ಉಸಿರು ನಿಲ್ಲಿಸಿದ್ಲು.. ನಂತರ ಅಮಾಯಕಳಂತೆ ನಾಟಕವಾಡಿದ್ರು.. ಆದ್ರೆ ಅಪ್ಪನ ಹೋರಾಟ ಇವತ್ತು ಕೊಲೆಗಾರರ ನಿಜ ಬಣ್ಣ ಬಯಲಾಗಿದೆ. ಪ್ರಿಯಾಂಕಾಳ ಪ್ರಿಯಕರ ಅಂದರ್​ ಆಗಿದ್ದಾನೆ.. ಆದ್ರೆ ಪೊಲೀಸರ ತನಿಖೆಯಲ್ಲಿ ಈ ಪ್ರಿಯಕರ ಶಾಕಿಂಗ್​ ಮಾಹಿತಿಗಳನ್ನ ಹೊರಹಾಕಿದ್ದಾನೆ.. ಆ ಮಗುವನ್ನ ಯಾಕೆ..? ಹೇಗೆ ಕೊಂದ್ರು ಅನ್ನೋದನ್ನ ಡಿಟೇಲಾಗಿ ಹೇಳಿದ್ದಾನೆ.. ಅಷ್ಟೇ ಅಲ್ಲ ಪ್ರಿಯಾಂಕ ಮತ್ತು ಈತನ ಲವ್​ ಸ್ಟೋರಿ ಬಗ್ಗೆ ಕೂಡ ಬಾಯಿಬಿಟ್ಟಿದ್ದಾನೆ.. ಹಾಗಾದ್ರೆ ಮಗುವನ್ನ ಅಮ್ಮನೇ ಕೊಂದ ಕೇಸ್​ಗೆ ಸಿಕ್ಕಿರೋ ಹೊಸ ಟ್ವಿಸ್ಟ್​​ ಏನು.?

ಈ ಕೇಸ್​​ ಸಂಬಂಧ ಇರೋ ಹೊಸ ಅಪ್​ಡೇಟ್ಸ್​​ ಏನು ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್​​.ಐ.ಆರ್​​. ಆವತ್ತು ಪ್ರವೀಣ್​​ ಆಗಿದ್ದಾಗ್ಲಿ ಅಂತ ಮಗಳನ್ನ ಕರೆದುಕೊಂಡು ಬಂದುಬಿಟ್ಟಿದ್ದಿದ್ರೆ ಇವತ್ತು ಆ ಮಗು ಸುರಕ್ಷಿತವಾಗಿ ಅಪ್ಪನ ಜೊತೆ ಆಟವಾಡಿಕೊಂಡು ಇರುತ್ತಿತ್ತು.. ಆದ್ರೆ ಈ ಮನೆಹಾಳ್​​ ಅಮ್ಮ ಅದಕ್ಕೂ ಅವಕಾಶ ಕೊಡಲಿಲ್ಲ.. ತನ್ನ ಗೆಳೆಯನನ್ನ ಜೊತೆ ಸೇರಿಕೊಂಡು ಆ ಮುದ್ದು ಕಂದಮ್ಮನನ್ನ ಕೊಂದುಬಿಟ್ಟಿದ್ದಾಳೆ.. ಅಷ್ಟಕ್ಕೂ ಆ ಮಗುವನ್ನ ಈ ಕಿರಾತಕರು ಹೇಗೆ ಕೊಂದ್ರು..? ಮಗು ಕೊಂದು ಅವರು ಮಾಡಿದ ನಾಟಕ ಎಂಥದ್ದು..? ಕೆಟ್ಟ ಅಪ್ಪ ಇರ್ತಾನೆ.. ಕೆಟ್ಟ ಅಮ್ಮ ಇರೋದಿಲ್ಲ ಅಂತ ಹೇಳ್ತಾರೆ.. ಅದ್ರೆ ಇಲ್ಲಿ ಎಲ್ಲವೂ ಉಲ್ಟಾ... ಗಂಡನ ಮೇಲಿನ ಕೋಪಕ್ಕೆ, ಪ್ರೀಯಕರನ ಮೇಲಿನ ಮೋಹಕ್ಕೆ ಇವತ್ತು ತಾಯಿಯೇ ಹೆತ್ತ ಮಗುವನ್ನ ಕೊಂದುಬಿಟ್ಟಿದ್ದಾಳೆ.

ಆವತ್ತು ಮಗುವನ್ನ ಕರೆದುಕೊಂಡು ಹೊರಗೆ ಹೋಗಿದ್ದಾರೆ.. ಬಿರಿಯಾನಿ ತಿನ್ನಸಿ ಮನೆಗೆ ಬಂದಿದ್ದಾರೆ.. ನಂತರ ಪ್ರಿಯಾಂಕ ಶಾಪಿಂಗ್​ಗೆ ಅಂತ ಹೊರಗೆ ಹೋಗಿದ್ದಾಳೆ.. ಈ ಟೈಂನಲ್ಲಿ ಆ ಮಗು ಮೋಹನನ ಬಳಿ ಐಸ್​ಕ್ರೀಮ್​ ಕೇಳಿದೆ.. ಅಷ್ಟೇ ಈ ಪಾಪಿ ಆ ಮಗುವಿನ ಹೊಟ್ಟೆಗೆ ಒದ್ದೇಬಿಟ್ಟಿದ್ದಾನೆ.. ಆ ಮಗು ಅಲ್ಲೇ ಕುಸಿದು ಬಿದ್ದು ಪ್ರಾಣಬಿಟ್ಟಿದೆ.. ನಂತರ ತಾಯಿ ಮನೆಗೆ ಬಂದು ನೋಡಿದ್ರೆ ಮಗು ಬದುಕಿಲ್ಲ.. ಈ ಟೈಂನಲ್ಲಿ ರಾಂಗ್​ ಆಗಬೇಕಿದ್ದ ಪ್ರಿಯಾಂಕ.. ಪ್ರಿಯಕರನ ಜೊತೆ ಸೇರಿ ಪೊಲೀಸರಿಂದ ತಪ್ಪಿಸಿಕೊಳ್ಳೋಕೆ ಪ್ಲಾನ್​ ಮಾಡಿದ್ಲು. ದೇವರು ಇದ್ದಾನೆ ಅನ್ನೋದು ನಿಜವಾದ್ರೆ ಈಕೆ ಮಾಡಿರೋ ತಪ್ಪಿಗೆ ತಕ್ಕ ಶಿಕ್ಷೆಯಾಗಲೇಬೇಕು.. ಏನೂ ಅರಿಯದ ಆ ಕಂದಮ್ಮನ ಸಾವಿಗೆ ನ್ಯಾಯ ಕೊಡಿಸಬೇಕು.. ಇಲ್ಲವಾದ್ರೆ ಈ ಪ್ರಿಯಾಂಕಳನಂತವರು ಮತ್ತಷ್ಟು ಜನ ಹುಟ್ಟಿಕೊಳ್ತಾರೆ.

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more