ಮಹಿಳಾ ಪೊಲೀಸ್ ಡ್ರೆಸ್ ಚೇಂಜ್ ವಿಡಿಯೋ ಸೆರೆ ಹಿಡಿದ ನ್ಯೂಸ್ ಕ್ಯಾಮಾರಾಮ್ಯಾನ್ ವಿರುದ್ಧ ಕೇಸ್!

Suvarna News   | Asianet News
Published : Jan 25, 2020, 08:41 PM IST
ಮಹಿಳಾ ಪೊಲೀಸ್ ಡ್ರೆಸ್ ಚೇಂಜ್ ವಿಡಿಯೋ ಸೆರೆ ಹಿಡಿದ ನ್ಯೂಸ್ ಕ್ಯಾಮಾರಾಮ್ಯಾನ್ ವಿರುದ್ಧ ಕೇಸ್!

ಸಾರಾಂಶ

ಮಹಿಳಾ ಸುರಕ್ಷತೆ ಕುರಿತು ದೇಶದಲ್ಲೇ ಚರ್ಚೆಯಾಗುತ್ತಿದೆ. ಮಹಿಳೆಯರಿಗೆ ಸುರಕ್ಷತೆ ನೀಡಲು ಇದೀಗ ಮಹಿಳಾ ಪೊಲೀಸ್ ಪಡೆ ಕೂಡ ಕಾರ್ಯಸನ್ನದ್ಧವಾಗಿದೆ. ಇದೀಗ ಇದೇ ಮಹಿಳಾ ಪೊಲೀಸ್ ಮೇಲೆ ದೌರ್ಜನ್ಯ ಯತ್ನ ನಡೆದಿದೆ ಮಹಿಳಾ ಪೊಲೀಸ್ ಕೊಠಡಿಯೊಳಗೆ  ಬಟ್ಟೆ ಬದಲಾಯಿಸುವುದನ್ನು ವಿಡಿಯೋ ಚಿತ್ರೀಕರಣ ಮಾಡಿದ ನ್ಯೂಸ್ ಚಾನೆಲ್ ಕ್ಯಾಮಾರಾಮ್ಯಾನ್ ವಿರುದ್ಧ ಕೇಸ್ ದಾಖಲಾಗಿದೆ. ಘಟನೆಯ ವಿವರ ಇಲ್ಲಿದೆ. 

ಅಮರಾವತಿ(ಜ.25): ಮಹಿಳೆ, ಮಕ್ಕಳ ಮೇಲಿನ ದೌರ್ಜ್ಯನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕಾಗಿ ಸರ್ಕಾರ ಹೆಚ್ಚುವರಿ ಮಹಿಳಾ ಪೊಲೀಸರನ್ನು ನೇಮಿಸಿದೆ. ಅಸೆಂಬ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಬಟ್ಟೆ ಬದಲಾಯಿಸುವುದನ್ನು ವಿಡಿಯೋ ಚಿತ್ರೀಕರಣ ಮಾಡಿದ ಮೂವರ ವಿರುದ್ದ ಕೇಸ್ ದಾಖಲಾಗಿದೆ. 

ಇದನ್ನೂ ಓದಿ: ಪ್ರಿಯಕರನ ಜೊತೆಗೆ ಲಾಡ್ಜ್‌ನಲ್ಲಿ ಇರುವಾಗಲೇ ಪತ್ನಿ ಹಿಡಿದ ಪತಿ

 ಕೊಠಡಿಯೊಳಗೆ ಮಹಿಳಾ ಪೊಲೀಸ್ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋ ಚಿತ್ರೀಕರಣ ಮಾಡಿದವರು ವಿವಿದ ನ್ಯೂಸ್ ಚಾನೆಲ್‌ನ ಮೂವರು ಕ್ಯಾಮಾರಮ್ಯಾನ್ ಅನ್ನೋದು ಮತ್ತಷ್ಟು ಆತಂಕಕಾರಿ. ಈ ಘಟನೆ ನಡೆದಿರುವುವ ಆಂಧ್ರಪ್ರದೇಶ ಅಮರಾವತಿಯಲ್ಲಿ ನಡೆದಿತೆ. ಅಸೆಂಬ್ಲಿ ಬಂದೋಬಸ್ತ್‌ಗಾಗಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿತ್ತು. ನಿಯೋಜಿತ ಮಹಿಳಾ ಪೊಲೀಸರಿಗೆ ವಸತಿ ವ್ಯವ್ಯಸ್ಥೆಯನ್ನು ಮಂಡದಾಮ್ ZHP ಶಾಲೆಯಲ್ಲಿ ಮಾಡಲಾಗಿತ್ತು.

ಇದನ್ನೂ ಓದಿ: ಸೆಲ್ಫಿ ವಿಡಿಯೋ ಕೇಸ್ : ವಿಚಾರಣೆಗೆ ಹಾಜರಾಗಲು ಟೈಂ ಕೇಳಿದ ಸಂಜನಾ

ಮಹಿಳಾ ಪೊಲೀಸ್ ಅನಾರೋಗ್ಯದ ಕಾರಣ ವಿಶ್ರಾಂತಿಗಾಗಿ ಶಾಲಾ ಕೊಠಡಿಗೆ ಆಗಮಿಸಿದ್ದಾರೆ. ಬಳಿಕ ಪೊಲೀಸ್ ಸಮವಸ್ತ್ರ ಬದಲಾಯಿಸುತ್ತಿರುವಾಗ ಕಿಟಕಿ ಬಳಿಕ ಕ್ಯಾಮಾರ ಇರುವುದು ಗೋಚರಿಸಿದೆ. ತಕ್ಷಣವೇ ಗೊಡೆಯ ಬಳಿಗೆ ಸರಿದು, ಬಟ್ಟೆ ಹಾಕಿ ಹೊರಬರುತ್ತಿದ್ದಂತೆ ಅಪರಿಚತ ವ್ಯಕ್ತಿಯೋರ್ವ ಆಗಮಿಸಿ ಕ್ಷಮಿಸಿ ಎಂದಿದ್ದಾನೆ. ಆದರೆ ನಾನು ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗೆ ದೂರು ನೀಡಿದೆ  ಎಂದು ಮಹಿಳಾ ಪೊಲೀಸ್ ದೂರಿನಲ್ಲಿ ಹೇಳಿದ್ದಾರೆ.

ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿಸಿದ್ಲು : ಕೊಂದೇ ಬಿಟ್ಟ ಪಾಪಿ !.

ಪ್ರಕರಣದ ತನಿಖೆ ಆರಂಭಿಸಿದ ಡಿಎಸ್‌ಪಿ ತೆನಾಲಿ, ನ್ಯೂಸ್ ಚಾಲೆನ್‌ನ ಮೂವರು ಕ್ಯಾಮಾರಾಮ್ಯಾನ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಮಹಿಳಾ ಕೊಠಡಿಗೆ ಯಾರೇ ಪ್ರವೇಶಿಸುವುದಿದ್ದರೂ ಪರವಾನಗಿ ಪಡೆಯಬೇಕು. ಕನಿಷ್ಠ ಬಾಗಿಲು ಬಡಿದು ಒಳಗೆ ಬರಬಹುದೆ ಎಂದು ಕೇಳಿ ಮುಂದೆ ಸಾಗಬೇಕು. ಆದರೆ ಇಲ್ಲಿ ಕ್ಯಾಮಾರಾಮ್ಯಾನ್‌ಗಳು ಉದ್ದೇಶಪೂರ್ವಕವಾಗಿ ಬಟ್ಟೆ ಬದಲಾಯಿಸುವ ವಿಡಿಯೋ ಸೆರೆ ಹಿಡಿಯಲು ಮುಂದಾಗಿದ್ದಾರೆ.

ಮಹಿಳಾ ಪೊಲೀಸ್‌ ಅರಿವಿಗೆ ಬರುತ್ತಿದ್ದಂತೆ ಕ್ಷಮಿಸಿ ಎಂಬ ನಾಟಕ ಆಡಿದ್ದಾರೆ. ಹೀಗಾಗಿ ಮೂವರು ಕ್ಯಾಮಾರಮ್ಯಾನ್ ವಿರುದ್ಧ ಐಪಿಸಿ 354c ವಿರುದ್ಧ ಕೇಸ್ ದಾಖಲಿಸಲಾಗಿದೆ. ಇಷ್ಟೇ ಅಲ್ಲ ಚಿತ್ರೀಕರಿಸಿದ ವಿಡಿಯೋಗಳನ್ನು ವಶಕ್ಕೆ ಪಡೆಯಲಾಗಿದೆ. ನಿರ್ಭಯ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಕ್ಯಾಮರಾಮ್ಯಾನ್‌ಗಳು ಸಂಕಷ್ಟದ ದಿನಗಳು ಆರಂಭಗೊಂಡಿದೆ.

ಮಹಿಳಾ ಕೊಠಿಡಿ ಮಾತು ಬದಿಗಿರಲಿ, ಶಾಲಾ ಆವರಣ ಪ್ರವೇಶಿಸಲು ಮೂವರು ಕ್ಯಾಮರಾಮ್ಯಾನ್ ಅನುಮತಿ ಪಡೆದಿಲ್ಲ. ಶಾಲಾ ಕೊಠಡಿಯೊಳಗೆ ಚಿತ್ರೀಕರಿಸುವ ಅವಶ್ಯಕತೆ ಅಥವಾ ಸಂದರ್ಭವೇ ಇರಲಿಲ್ಲ. ಹೀಗಾಗಿ  ಮೂವರು ಕ್ಯಾಮಾರಮ್ಯಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತೆನಾಲಿ ಸ್ಪಷ್ಟಪಡಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ