ಧರ್ಮಕ್ಕೆ ಒಳಿತಾಗುತ್ತದೆ ಎಂದು ಆರೆಸ್ಸೆಸ್‌ ಕಾರ್ಯಕರ್ತನ ಹತ್ಯೆ ಯತ್ನ!

By Kannadaprabha News  |  First Published Jan 25, 2020, 8:04 AM IST

ಕಾರಣ ಹಿಂದೂ ಸಂಘಟನೆಯ ಓರ್ವ ಕಾರ್ಯಕರ್ತನನ್ನು ಹತ್ಯೆ ಮಾಡಲು ನಿರ್ಧರಿಸಿದ್ದೆವು ಎಂದು ಎಸ್‌ಡಿಪಿಐನ ಬಂಧಿತ ಸದಸ್ಯ ಸೈಯದ್‌ ಅಕ್ಬರ್‌ (46) ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.


ಬೆಂಗಳೂರು [ಜ.25]:  ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ರಾಜಧಾನಿಯ ಟೌನ್‌ಹಾಲ್‌ ಬಳಿ ಬಿಜೆಪಿ ಮತ್ತು ಆರೆಸ್ಸೆಸ್‌ ಆಯೋಜಿಸಿದ್ದ ಸಮಾವೇಶದಲ್ಲಿ ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಭಾಗವಹಿಸುವುದಕ್ಕೆ ನಮ್ಮ ಅಸಮಾಧಾನವಿತ್ತು. ಆದ ಕಾರಣ ಹಿಂದೂ ಸಂಘಟನೆಯ ಓರ್ವ ಕಾರ್ಯಕರ್ತನನ್ನು ಹತ್ಯೆ ಮಾಡಲು ನಿರ್ಧರಿಸಿದ್ದೆವು ಎಂದು ಎಸ್‌ಡಿಪಿಐನ ಬಂಧಿತ ಸದಸ್ಯ ಸೈಯದ್‌ ಅಕ್ಬರ್‌ (46) ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಡಿ.22ರಂದು ಟೌನ್‌ಹಾಲ್‌ ಬಳಿ ಆಯೋಜನೆಗೊಂಡಿದ್ದ ದೊಡ್ಡ ಸಮಾವೇಶದಲ್ಲಿ ಹಿಂದೂ ಕಾರ್ಯಕರ್ತರು ಪಾಲ್ಗೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದೆವು. ಈ ಬಗ್ಗೆ ಸಂಘಟನೆಯ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಮುಸ್ಲಿಂ ಧರ್ಮವನ್ನು ವಿರೋಧಿಸುವವರು ಧರ್ಮ ವಿರೋಧಿಗಳು ಎಂದು ಘೋಷಿಸಲಾಗಿತ್ತು ಎಂದು ಹೇಳಿದ್ದಾನೆ ಎನ್ನಲಾಗಿದೆ.

Tap to resize

Latest Videos

ವೇಶ್ಯವಾಟಿಕೆ ದಂಧೆ: ಮೂವರು ಬಾಂಗ್ಲಾ ಪ್ರಜೆಗಳ ಅರೆಸ್ಟ್.

‘ಡಿ.21ರಂದು ಸಾದಿಕ್‌ (ಮತ್ತೊಬ್ಬ ಆರೋಪಿ) ನನಗೆ ಟ್ಯಾನರಿ ರಸ್ತೆಯ ಹಿಂಭಾಗದಲ್ಲಿರುವ ಒಂದು ಪಾರ್ಕ್ಗೆ ಬರುವಂತೆ ಸೂಚಿಸಿದ್ದ. ಸಾದಿಕ್‌ನನ್ನು ಭೇಟಿಯಾದಾಗ ಸಿಎಎ ಮತ್ತು ಎನ್‌ಆರ್‌ಸಿ ಪರವಾಗಿ ಆರ್‌ಎಸ್‌ಎಸ್‌ ಅಥವಾ ಹಿಂದೂ ಸಂಘಟನೆಯಿಂದ ಸಮಾವೇಶದಲ್ಲಿ ಭಾಗವಹಿಸುವ ಯಾವುದಾದರೂ ಮುಖಂಡರೊಬ್ಬರನ್ನು ಕೊಲೆ ಮಾಡಿದರೆ ಮುಸ್ಲಿಂ ಧರ್ಮಕ್ಕೆ ಒಳಿತಾಗುತ್ತದೆ. ಅದಕ್ಕಾಗಿ ಈಗಾಗಲೇ ಸಂಘಟನೆಯ ಹುಡುಗರ ತಂಡವೊಂದು ಸಿದ್ಧವಾಗಿದೆ. ಅದಕ್ಕಾಗಿ ನೀನು ಸಹಾಯ ಮಾಡಬೇಕು ಎಂದು ಸಾದಿಕ್‌ ಹೇಳಿದ್ದ. ಅದರಂತೆ ನಾನು ಕೃತ್ಯ ಎಸಗಲು ನೆರವು ನೀಡಿದ್ದೆ’ ಎಂದು ತಿಳಿಸಿದ್ದಾನೆ ಎಂದು ಹೇಳಲಾಗಿದೆ.

ಮಂಗಳೂರು ಏರ್‌ಪೋರ್ಟ್‌ಗೆ ಮತ್ತೆ ಆದಿತ್ಯ, ಕೃತ್ಯವೆಸಗಿದ ಸ್ಥಳ ಮಹಜರು...

‘ಡಿ.22ರಂದು ಸಾದಿಕ್‌ ಆತನ ದ್ವಿಚಕ್ರ ವಾಹನದಲ್ಲಿ ನನ್ನನ್ನು ಮುನಿರೆಡ್ಡಿ ಪಾಳ್ಯದ ಜಾಮೀಯಾ ಮಸೀದಿಯಿಂದ ಪುರಭವನದ ಬಳಿ ಕರೆದುಕೊಂಡು ಹೋಗಿದ್ದ. ಎಲ್ಲರೂ ಪೂರ್ವ ನಿಗದಿಯಾದಂತೆ ಯಾರಾದರೂ ಹಿಂದೂ ಮುಖಂಡರನ್ನು ಕೊಲೆ ಮಾಡುವ ಬಗ್ಗೆ ಚರ್ಚಿಸಿದೆವು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ಪೈಕಿ ಒಬ್ಬ ಕೇಸರಿ ಕುರ್ತಾ ಧರಿಸಿದ್ದ ವ್ಯಕ್ತಿ ನೀರು ಹಂಚುತ್ತಿದ್ದ. ಆ ವ್ಯಕ್ತಿಯು ಜೆ.ಸಿ.ರಸ್ತೆಯಲ್ಲಿ ಬರುತ್ತಿರುವುದಾಗಿ ಮಾಹಿತಿ ಬಂತು. ಆತನನ್ನು ಹಿಂಬಾಲಿಸಿ ಜೆ.ಸಿ.ರಸ್ತೆಯಲ್ಲಿ ಅಡ್ಡಹಾಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆವು. ಸ್ಥಳದಲ್ಲಿ ಪೊಲೀಸರು ಹಾಗೂ ಹೆಚ್ಚು ಜನರಿದ್ದ ಕಾರಣ ಹೆಚ್ಚು ಸಮಯ ಅಲ್ಲಿ ನಿಲ್ಲದೆ ಪರಾರಿಯಾದೆವು’ ಎಂದು ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಅಂದು ಪುರಭವನದ ಬಳಿ ಸಿಎಎ ಪರವಾಗಿ ಪ್ರತಿಭಟನೆಯಲ್ಲಿ ಸೇರಿದ್ದ ಆರೆಸ್ಸೆಸ್‌ ಕಾರ್ಯಕರ್ತ ವರುಣ್‌ ಎಂಬಾತನ ಹತ್ಯೆಗೆ ಆರೋಪಿಗಳು ಯತ್ನಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದರೂ ಅದೃಷ್ಟವಶಾತ್‌ ವರುಣ್‌ ಪಾರಾಗಿದ್ದರು.

click me!